ಬಾಲಕಿಯನ್ನು ಕೊಲೆಗೈದು ಗೋಣಿಚೀಲದಲ್ಲಿ ತುಂಬಿ ಕೆರೆಗೆ ಎಸೆದ ಅಣ್ಣ – ಒಂದೇ ದಿನದಲ್ಲಿ ಆರೋಪಿ ಅರೆಸ್ಟ್ | Crime News

ಬಾಲಕಿಯನ್ನು ಕೊಲೆಗೈದು ಗೋಣಿಚೀಲದಲ್ಲಿ ತುಂಬಿ ಕೆರೆಗೆ ಎಸೆದ ಚಿಕ್ಕಪ್ಪ – ಒಂದೇ ದಿನದಲ್ಲಿ ಆರೋಪಿ ಅರೆಸ್ಟ್ | Crime News


ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಕೊಪ್ಪದ ಕೆರೆ ಬಳಿಯ ಕೆರೆಯಲ್ಲಿ  ಗೋಣಿಚೀಲದಲ್ಲಿ ಬಾಲಕಿಯೊಬ್ಬಳ ಮೃತದೇಹ ಪತ್ತೆಯಾಗಿದ್ದ ಪ್ರಕರಣದಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. 

ಬಂಧಿತ ಆರೋಪಿಗೆ ಸಂಬಂಧದಲ್ಲಿ ಬಾಲಕಿ ತಂಗಿಯಾಗಬೇಕು.
ಪ್ರಕರಣದಲ್ಲಿ ಬಾಲಕಿಯ ಪಾಲಕರು ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಅದರಂತೆ ಪೊಲೀಸರು ಅವರು ಶಂಕಿಸಿದ ವ್ಯಕ್ತಿಯನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಸ್ವಂತ ಚಿಕ್ಕಪ್ಪನ ಮಗಳನ್ನ ಆರೋಪಿ ಕೊಲೆ ಮಾಡಿದ್ದ ಈತ ಮೃತದೇಹವನ್ನು ಚೀಲದಲ್ಲಿ ಕಟ್ಟಿ ಬಿಸಾಡಿದ್ದನು.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿಯು ಈ ಕೃತ್ಯವೆಸಗಿದ್ದ ಎನ್ನಲಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *