Headlines

Ripponpete | ಮೋದಿ ಹೆಸರಿನಲ್ಲಿ ಗೆದ್ದವರು ಹಿಂದೂ‌ ಕಾರ್ಯಕರ್ತರ ರಕ್ಷಣೆಗೆ ನಿಲ್ಲಲಿ – ಪ್ರಮೋದ್ ಮುತಾಲಿಕ್

ಮೋದಿ ಹೆಸರಿನಲ್ಲಿ ಗೆದ್ದವರು ಹಿಂದೂ‌ ಕಾರ್ಯಕರ್ತರ ರಕ್ಷಣೆಗೆ ನಿಲ್ಲಲಿ – ಪ್ರಮೋದ್ ಮುತಾಲಿಕ್ 


ರಿಪ್ಪನ್‌ಪೇಟೆ : ಮೋದಿ ಹೆಸರಿನಲ್ಲಿ ಗೆಲ್ಲುವ ಸಂಸದರು ಮುಂದಿನ ದಿನಗಳಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸಿ ಘೋಷಿಸುವಂತೆ ಲೋಕಸಭೆಯಲ್ಲಿ ಒತ್ತಾಯಿಸಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ನಾಯಕ ಪ್ರಮೋದ್ ಮುತ್ತಾಲಿಕ್ ಹೇಳಿದರು.


ಇಂದು ಹೊಸನಗರದ ರಾಮಚಂದ್ರಪುರ ಮಠಕ್ಕೆ ಭೇಟಿ ನೀಡಿ ಹಿಂದಿರುಗುವಾಗ ಮಾರ್ಗ ಮಧ್ಯೆ ರಿಪ್ಪನ್‌ಪೇಟೆಗೆ ಭೇಟಿ ನೀಡಿ ಹಿಂದೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಮ್ಮದು 10 ಅಂಶಗಳ ಬೇಡಿಕೆ ಇದ್ದು ಆದನ್ನು ಆಯ್ಕೆಯಾಗುವ ಸಂಸದರು ಸಂಪುಟದಲ್ಲಿ ಚರ್ಚಿಸಿ ಈಡೇರಿಸುವ ಭರವಸೆ ನೀಡಿದಲ್ಲಿ ಬೆಂಬಲಿಸುವುದಾಗಿ ಘೋಷಿಸಿದ ಆವರು ಗೋ ಮಾತೆಯನ್ನು ರಾಷ್ಟ್ರೀಯ ಪ್ರಾಣಿಗಳನ್ನಾಗಿ ಘೋಷಿಸಬೇಕು. ವಕ್ಫ್ ಬೋರ್ಡ್  ಅನ್ನುವುದು ಒಂದು ಲ್ಯಾಂಡ್ ಮಾಫಿಯಾವಾಗಿದ್ದು ಅದರ ಸಮಗ್ರ ತನಿಖೆ ನಡೆಸುವುದು.ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಬೇಕು,ಹಿಂದು ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಹಿಂದು ಕಾರ್ಯಕರ್ತರ ಮೇಲೆ ಹಾಕಲಾದ ಕೇಸ್ ವಾಪಾಸ್ಸು ಪಡೆಯುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸದಿದ್ದರೆ ಮೋದಿ ಹೆಸರಿನಲ್ಲಿ ಮತಪಡೆದು ಸಂಸದರಾದವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದೆಂಬ ಎಚ್ಚರಿಕೆ ನೀಡಿದರು.

ಮೋದಿ ಹೆಸರಿನಲ್ಲಿ ಮೇಲೆ ಆಗುವ ಸಂಸದರಿಗೆ ಹಿಂದುತ್ವದ ಪರವಾಗಿ ನಿಲ್ಲುವಂತೆ ಎಚ್ಚರಿಕೆಯನ್ನು ನೀಡಿದರು.ಚುನಾವಣೆ ಗೆದ್ದ ನಂತರ ಕಾರ್ಯಕರ್ತರಿಗೆ ಸ್ಪಂದಸಿ ಕನಿಷ್ಠ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವಂತೆ ಸಂಸದರಿಗೆ ಕರೆ ನೀಡಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಸ್ಪರ್ಧೆಯ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಈಗ ಏನು ಹೇಳುವುದಿಲ್ಲ ಎಂದು ಸೂಚ್ಯವಾಗಿ ಉತ್ತರಿಸಿದರು.


ಈ ಸಂದರ್ಭದಲ್ಲಿ ತ ಮ ನರಸಿಂಹ, ಎಂ.ಬಿ.ಮಂಜುನಾಥ,ಕುಷನ್ ದೇವರಾಜ್,ಸುರೇಶ್‌ಸಿಂಗ್,ಕಗ್ಗಲಿ ನಿಂಗಪ್ಪ,ಆಶೋಕ ಹಾಲುಗುಡ್ಡೆ,ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *