Ripponpete | ರಸ್ತೆ ಅಗಲೀಕರಣಕ್ಕೆ ಬಡ ಮಹಿಳೆಯ ಮನೆ ನೆಲಸಮ – ಪಿಡಿಓ ಮಧುಸೂಧನ್ ಭೇಟಿ , ಸಹಾಯದ ಭರವಸೆ
ರಿಪ್ಪನ್‌ಪೇಟೆ : ಇಲ್ಲಿನ ಸಾಗರ ರಸ್ತೆಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ಬಡ ಮಹಿಳೆಯ ಮನೆಯನ್ನು ಒಡೆದು ಹಾಕಿದ್ದು ದಿಕ್ಕು ತೋಚದಂತಾಗಿದ್ದ ಕುಟುಂಬಕ್ಕೆ ಗ್ರಾಪಂ ಪಿಡಿಓ ಮಧುಸೂಧನ್ ಧೈರ್ಯ ತುಂಬಿ ಸಹಾಯದ ಭರವಸೆ ನೀಡಿದ್ದಾರೆ.
ಸಾಗರ ರಸ್ತೆ ಅಗಲೀಕರಣ ಕಾಮಗಾರಿ ಸುಮಾರು 5.50 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ ಈ ಹಿನ್ನಲೆಯಲ್ಲಿ ಸಾಗರ ರಸ್ತೆಯ ಬಡ ಮಹಿಳೆಯೊಬ್ಬರ ಮನೆಯನ್ನು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಲ್ಲಿಕಾರ್ಜುನ್ ಹಾಗೂ ಗುತ್ತಿಗೆದಾರ ರಣೋತ್ಸಾಹದಲ್ಲಿ ನೆಲಸಮಗೊಳಿಸಿ ಮಹಿಳೆಯ ಕಣ್ಣೀರಿಗೆ ಕಾರಣೀಕರ್ತರಾಗಿದ್ದರು.
ಇಂದು ಮಹಿಳೆಯ ಮನೆಗೆ ಭೇಟಿ ನೀಡಿದ ಪಿಡಿಓ ಮಧುಸೂಧನ್ ಬಡ ಮಹಿಳೆಗೆ ಸಾಂತ್ವಾನ ಹೇಳಿ ಮುಂದಿನ ದಿನಗಳಲ್ಲಿ ಗ್ರಾಮಾಡಳಿತದ ವತಿಯಿಂದ ನೆರವು ನೀಡುವ ಭರವಸೆ ನೀಡಿ ಧೈರ್ಯ ತುಂಬಿದ್ದಾರೆ.
ಈ ಬಗ್ಗೆ ಇತ್ತೀಚಿಗೆ ಕಾರ್ತಿಕ್ ಕೆರೆಗೋಡು ಎಂಬ ಸಾಮಾಜಿಕ ಕಳಕಳಿಯುಳ್ಳ ಯುವಕ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬಡವರ ಬಗ್ಗೆ PWD ಇಲಾಖೆ ಹಾಗೂ ಗುತ್ತಿಗೆದಾರನಿಗೆ ಇರುವ ನಿರ್ಲಜ್ಜ್ಯತನ ಹಾಗೂ ಶ್ರೀಮಂತ ಕಟ್ಟಡ ಮಾಲೀಕರ ಬಗ್ಗೆ ಇರುವ ಗುಲಾಮಿತನದ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದರು.
ವೀಡಿಯೋ ಇಲ್ಲಿ ವೀಕ್ಷಿಸಿ👇

