Headlines

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ


ರಿಪ್ಪನ್‌ಪೇಟೆ : ಮೇ.7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಫರ್ಧೀಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ ಆಭ್ಯರ್ಥಿ ಬಿ.ವೈ.ರಾಘವೇಂದ್ರರರ ಗೆಲುವು ತಡೆಯಲು  ಸಾಧ್ಯವಿಲ್ಲ ಎಂದು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಹೇಳಿದರು.

ರಿಪ್ಪನ್‌ಪೇಟೆಯ  ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಎರಡು ಪಕ್ಷದ ಮುಖಂಡರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಗರಣಮುಕ್ತ,ವಿವಾದಾತ್ಮಕವಲ್ಲದ ವ್ಯಕ್ತಿ.ಸರಳ ಸಜ್ಜನಿಕೆಯ ಆಭಿವೃದ್ಧಿಯ ಹರಿಕಾರ ಬಿ.ವೈ.ರಾಘವೇಂದ್ರರವರು ಈ ಭಾರಿಯಲ್ಲಿ  ಅತಿ ಹೆಚ್ಚು ಆಂತರದಲ್ಲಿ ಗೆಲುವು ಸಾಧಿಸುತ್ತಾರೆಂದು ಹೇಳಿದ ಆವರು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಬಹಳಷ್ಟು  ಆಭಿವೃದ್ದಿ ಕಾರ್ಯಗಳನ್ನು ಕೇಂದ್ರದ ಸಚಿವರಾಗಿ ಈಡೇರಿಸುತ್ತಾರೆಂದು ಹೇಳಿ ದೇಶಕ್ಕೆ ಬೆಳಕು ನೀಡುವ ಉದ್ದೇಶದಿಂದ ಮನೆ ಮಠವನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಶರಾವತಿ ಸಂತ್ರಸ್ಥ ಕುಟುಂಬಕ್ಕೆ ಶಾಶ್ವತ ನೆಲೆ ಕಾಣುವಂತೆ ಮಾಡುವ ಬಗ್ಗೆ ಕೇಂದ್ರ ಸಂಪುಟ ಸಭೆಯಲ್ಲಿ ಸಾಕಷ್ಟು ಭಾರಿ ಗಮನಸೆಳದಿರುವ ಬಿ.ವೈ.ರಾಘವೇಂದ್ರರವರು ಈ ಭಾರಿ ಗೆದ್ದು  ಆ ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತಾರೆಂಬ ವಿಶ್ವಾಸ ನಮ್ಮದಾಗಿದೆ ಎಂದರು.

ಕಾಂಗ್ರೆಸ್‌ನವರ ಸುಳ್ಳು ಆರೋಪಕ್ಕೆ  ಕಿವಿಗೊಡಬೇಡಿ;-

ಕಳೆದ ಹತ್ತು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷದ ಆಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಜೆಡಿಎಸ್  ಪಕ್ಷದಿಂದ ಸ್ಪರ್ಧಿಸಿ ಸೋತವರು ಕ್ಷೇತ್ರದ ಕಡೇ ಮುಖ ಹಾಕದೇ ಇದ್ದವರು  ದಿಢೀರ್ ಅಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತ್ಯಕ್ಷರಾಗಿದ್ದಾರೆ ಇವರಿಗೆ ಮತ ಹಾಕಿ ಗೆಲಿಸಬೇಕೆ ಎಂದು ಹೇಳಿದ ಅವರಿಗೆ ಜಿಲ್ಲೆಯ ಹತ್ತು ಹಲವು ಸಮಸ್ಯೆಗಳ ಅರಿವೇ ಇಲ್ಲದರನ್ನು ಬೆಂಬಲಿಸಬೇಕಾ ಎಂದ ಅವರು ಈ ಹಿಂದೆ ಸಂಸದರಾಗಿದ್ದ ಸಾಕಷ್ಟು ಎಂ.ಪಿ.ಗಳು ಕೇಂದ್ರದ ಅನುದಾನ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದು ಹಾಲಿ ಸಂಸದ ಕೇವಲ 10 ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣಾಭಿವೃದ್ದಿಗೆ ಟೊಂಕ ಕಟ್ಟಿ ನಿಂತಿದ್ದಾರೆಂಬುದಕ್ಕೆ ಮೈಸೂರು ಬೆಂಗಳೂರು ಶಿವಮೊಗ್ಗ ಸಾಗರ ತಾಳಗುಪ್ಪ ಇಂಟರ್ ಸಿಟಿ ರೈಲು ಸೇರಿದಂತೆ ವಿಮಾನನಿಲ್ದಾಣ, ಮೇಗರವಳ್ಳಿಯಿಂದ ಆಗುಂಬೆ ಮಾರ್ಗದ ಸೋಮೇಶ್ವರದ ವರೆಗೆ ಸುರಂಗ ಮಾರ್ಗದ ಸಂಪರ್ಕದ ರಸ್ತೆ ಅಭಿವೃದ್ಧಿ ಹಾಗೂ ರಾಣೆಬೆನ್ನೂರು -ಬೈಂದೂರುವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ 1.012 ಕೋಟಿ ಅನುದಾನ ತರಲಾಗಿದ್ದರೂ ಕೂಡಾ ಕಾಂಗ್ರೆಸ್ ಪಕ್ಷದವರು ಏನು ಮಾಡಿಲ್ಲ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಇದಕ್ಕೆಲ್ಲ ಮತದಾರರು ಕಿವಿಗೊಡಬೇಡಿ ಎಂದು ಹೇಳಿ ನಮ್ಮ ಎರಡು ಪಕ್ಷದವರು ಮತದಾರರಿಗೆ ಅಭ್ಯರ್ಥಿಯಾದ ಬಿ.ವೈ.ರಾಘವೇಂದ್ರರವರ  ಸಾಧನೆಗಳನ್ನು ಮನವರಿಕೆ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಜೆಡಿಎಸ್ ಮತ್ತು ಬಿಜೆಪಿ ಸಮ್ಮೀಶ್ರ ಸರ್ಕಾರದ ಅಡಳಿತಾವಧಿಯಲ್ಲಿ ಅಲ್ಪಸಂಖ್ಯಾತರಿಗೆ ಒತ್ತು;-

ಮಂಗಳೂರು ಗೋಲಿಬಾರ್,ಹಿಜಾಬ್ ಗಲಾಟೆ ಹಾಗೂ ಬಂಟ್ವಾಳದ ಘಟನೆ ಸೇರಿದಂತೆ ಹಲವು ಅಹಿತಕರ ಘಟನೆಗಳು ಸಂಭವಿಸಿದಾಗಲೂ ಜೆಡಿಎಸ್ ಪಕ್ಷದ ಕುಮಾರಣ್ಣ ಮತ್ತು ಬಿಜೆಪಿಯ ಬಿ.ಎಸ್.ಯಡಿಯೂರಪ್ಪನವರ ಸಮಯ ಪ್ರಜ್ಞೆಯಿಂದ ಸಮಸ್ಯೆಗೆ ಪರಿಹಾರ ಕಲ್ಪಿಸುವ ಮೂಲಕ ಶಾಂತಿ ಸುವ್ಯವಸ್ಥೆಯಿಂದ ಅಲ್ಪಸಂಖ್ಯಾತರಿಗೆ  ರಕ್ಷಣೆ ನೀಡಿದ್ದು ಕಾಂಗ್ರೆಸ್ ಪಕ್ಷದವರು ಏನೂ ಮಾಡದೇ ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್‌ಯನ್ನಾಗಿ ಮಾಡಿ ಜನಾಂಗವನ್ನು ಬಿಂಬಿಸುತ್ತಿದ್ದಾರೆಂದು  ಆರೋಪಿಸಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸುಳ್ಳು ಭರವಸೆಗೆ ಮರಳಾಗದೇ ಬಿಜೆಪಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸುತ್ತಾರೆಂಬ ಆಶಯ ವ್ಯಕ್ತಪಡಿಸಿದರು.

ಈ ಭಾರಿಯಲ್ಲಿ ಅಲ್ಪಸಂಖ್ಯಾತರು ಹಾಗೂ ಜಾತ್ಯಾತೀತ ಮತಗಳು ವಿಭಜನೆಯಾಗದಂತೆ ನಿಗಾವಹಿಸಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಇವರನ್ನು ಅತಿ ಹೆಚ್ಚು ಮತಗಳಿಂದ ಜಯಗಳಿಸುವುದರ ಮೂಲಕ 10 ಜನ ಈಶ್ವರಪ್ಪನಂತವರು ಸ್ಪರ್ಧೆ ಮಾಡಿದರೂ ರಾಘಣ್ಣರ ಗೆಲುವು ತಡೆಯಲು ಸಾದ್ಯವಿಲ್ಲ  ಎಂಬುದನ್ನು ಸಾಭೀತು ಪಡಿಸಲು ಸನ್ನದರಾಗಿ ಎಂದರು

ಬಿಜೆಪಿ ಜಿಲ್ಲಾ ಮುಖಂಡ ಆರ್.ಟಿ.ಗೋಪಾಲ್ ಮಾತನಾಡಿ ಈ ಬಾರಿ ಜೆಡಿಎಸ್ ಪಕ್ಷದ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದು ಆನೆಬಲ ಬಂದಂತಾಗಿದೆ , ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಲದೊಂದಿಗೆ ರಾಜ್ಯದಲ್ಲಿ 28 ಸ್ಥಾನ ಪಡೆಯುವುದರೊಂದಿಗೆ ಮೋದಿಯನ್ನು ಪ್ರಧಾನಿ ಮಾಡಲು ಪಕ್ಷದ ಕಾರ್ಯಕರ್ತರು ರಣೋತ್ಸಾಹದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೊಸನಗರ ತಾಲ್ಲೂಕ್ ಜೆಡಿಎಸ್ ಆಧ್ಯಕ್ಷ ಎನ್.ವರ್ತೇಶ್, ತಾಲೂಕ್ ಬಿಜೆಪಿ ಉಪಾಧ್ಯಕ್ಷರಾದ ಎಂ.ಬಿ.ಮಜುನಾಥ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ವರದರಾಜ್ ,ಬಿಜೆಪಿ ಮುಖಂಡರಾದ ಸುಂದರೇಶ್, ಸುದೀಂದ್ರಪೂಜಾರಿ, ಪಿ.ರಮೇಶ್,ಕೃಷ್ಣೋಜಿರಾವ್ಮಹೇಶ್ ಮಾಣಿಕೆರೆ, ಮಂಜುನಾಥ ಗವಟೂರು, ರಾಮು ಬಳೆಗಾರ್,ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *