ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ – 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಪಿಎಸ್ಐ ಪ್ರವೀಣ್ ನೇತ್ರತ್ವದ ತಂಡ
ನ್ಯಾಮತಿ : ಕಡದಕಟ್ಟೆ ಗ್ರಾಮದ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ದೂರು ಕೊಟ್ಟ 24 ಗಂಟೆಯೊಳಗೆ ತನಿಖೆ ನಡೆಸಿದ ನ್ಯಾಮತಿ ಪೊಲೀಸ್ ಠಾಣೆ ಪಿಎಸ್ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳ ತಂಡ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಡದಕಟ್ಟೆ ನಿವಾಸಿ ರವಿನಾಯ್ಕ್(44) ಬಂಧಿತ ಆರೋಪಿಯಾಗಿದ್ದಾನೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕಡದಕಟ್ಟೆ ನಿವಾಸಿ ಅಶೋಕ್ ನಾಯ್ಕ್ ಅವರ ಪತ್ನಿ ಸವಿತಾ ಅವರು ಮಾ.11ಕ್ಕೆ ಬೆಳಿಗ್ಗೆ 10-45 ಗಂಟೆ ಸಮಯದಲ್ಲಿ ಖಾಸಗಿ ಕಾರ್ಯಕ್ರಮ ನಿಮಿತ್ತ ಶಿವಮೊಗ್ಗಕ್ಕೆ ತೆರಳಿ ಸಂಜೆ 4-00 ಗಂಟೆಗೆ ಬಂದು ಮನೆಯ ಬಾಗಿಲು ತಗೆದು ನೋಡಿದಾಗ ಮನೆಯ ಹಿಂದಿನ ಬಾಗಿಲು ತೆರೆದಿದ್ದು ಮನೆಯ ಒಳಗಡೆ ಇರುವ ಬಾಗಿಲು ತೆರೆದಿದು, ಬೀರುವಿನಲ್ಲಿದ್ದ 10 ಗ್ರಾಂ ನ ಕೊರಳಚೈನ್, 5 ಗ್ರಾಂ ನ ಹೆಣ್ಣುಮಕ್ಕಳ ಕಿವಿಗೆ ಹಾಕುವ ಡ್ರಾಪ್ ಮತ್ತು ಗುಂಡು, 5 ಗ್ರಾಂ ನ ಬ್ರಸ್ ಲೈಟ್ ಒಟ್ಟು 2 ತೊಲ ಬಂಗಾರದ ಅಭರಣಗಳು ಇವುಗಳ ಒಟ್ಟು ಬೆಲೆ 90000/- ಮತ್ತು ಮನೆಯ ಬಾಗಿಲನ್ನು ರಿಪೇರಿ ಮಾಡಲು ತಂದಿಟ್ಟ 40000/- ನಗದು ಹಣವನ್ನು ಒಟ್ಟು 1 ಲಕ್ಷದ 30 ಸಾವಿರ ರೂ ಮೌಲ್ಯದ ಹಣ ಹಾಗೂ ಬಂಗಾರವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. 
ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸ್ ಉಪಾಧೀಕ್ಷಕರವರಾದ ಪ್ರಶಾಂತ ಮುನೋಳಿ, ಚನ್ನಗಿರಿ ಉಪವಿಭಾಗ ರವರ ನಿದೇರ್ಶನದಂತೆ ಮತ್ತು  ಪ್ರವೀಣ್ ಎಸ್.ಪಿ ರವರ ನೇತೃತ್ವದಲ್ಲಿ, ಸಿಬ್ಬಂದಿಯವರುಗಳಾದ ದೇವರಾಜ್, ಪ್ರವೀಣ್,  ಮಹೇಶನಾಯ, ಇವರನ್ನೊಳಗೊಂಡ ತಂಡ ತನಿಖೆ ಕೈಗೊಂಡು 24 ಗಂಟೆಯೊಳಗೆ ಕಳ್ಳತನದ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಮೇಲ್ಕಂಡ ಪ್ರಕರಣದ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾದ ಪಿಎಸ್ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳ ತಂಡಕ್ಕೆ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.
		 
                         
                         
                         
                         
                         
                         
                         
                         
                         
                        
