ಆನಂದಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ – ರಬ್ಬರ್ ಶೀಟ್ ಕಳ್ಳರ ಬಂಧನ : ಲಕ್ಷಾಂತರ ರೂ ಮೌಲ್ಯದ ರಬ್ಬರ್ ಶೀಟ್ ಸಮೇತ ವಾಹನ ವಶಕ್ಕೆ | Crime News

ಆನಂದಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ – ರಬ್ಬರ್ ಶೀಟ್ ಕಳ್ಳರ ಬಂಧನ

ಆನಂದಪುರ : ಪಟ್ಟಣದ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆಯಲ್ಲಿ ಒಣಗಿಸಿಡುತಿದ್ದ ರಬ್ಬರ್ ಕಳ್ಳತನ ಮಾಡುತಿದ್ದ ಕಳ್ಳರ ಜಾಲವೊಂದನ್ನು ಭೇದಿಸಿ ನಾಲ್ವರು ಆರೋಪಿಗಳನ್ನು ಮಾಲು ಹಾಗೂ ವಾಹನ ಸಮೇತ ಬಂಧಿಸಿದ್ದಾರೆ.

ಆರೋಪಿಗಳಾದ ರಾಘವೇಂದ್ರ @ರಾಘು ಹರತಾಳು, ಪ್ರವೀಣ್ ಹುಳಿಗದ್ದೆ , ನಾಗಭೂಷಣ್@ನಾಗ ಶಿವಪುರ ಮತ್ತು ಪ್ರತಾಪ್ ಸಿಂಗ್ ವಡಗೆರೆ ಬಂಧಿತ ಆರೋಪಿಯಾಗಿದ್ದಾರೆ.

2023 ರ ಆಗಸ್ಟ್ ತಿಂಗಳಿನಲ್ಲಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಕೆರೆಹಿತ್ಲು ಗ್ರಾಮದ ಮುರುಗೇಶಪ್ಪ ಗೌಡ ಎಂಬುವವರ ಮನೆಯಲ್ಲಿ ಒಣಗಿಸಿದ್ದ 400 ರಬ್ಬರ್ ಶೀಟ್ ಹಾಗೂ ನೀಚಡಿ ಗ್ರಾಮದ ಎನ್ ಟಿ‌ ಮುರುಳಿಧರ ಎಂಬುವವರ ಮನೆಯಲ್ಲಿ ಒಣಗಿಸಿಟ್ಟಿದ್ದ 750 ರಬ್ಬರ್ ಶೀಟ್ ಕಳ್ಳತನವಾಗಿತ್ತು.ಈ ಹಿನ್ನಲೆಯಲ್ಲಿ ಆನಂದಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಲೆನಾಡ ಪ್ರದೇಶದಲ್ಲಿ ಕಂಟಕಪ್ರಾಯವಾಗಿ ಇಂತಹ ಕಳ್ಳತನ ಪ್ರಕರಣವನ್ನು ಕೈಗೆತ್ತಿಕೊಂಡ ಆನಂದಪುರದ ಪಿಎಸ್‌ಐ ಯುವರಾಜ್ ನೇತೃತ್ವದ ತಂಡ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಅಂದಾಜು 75000 ಕ್ಕೂ ಹೆಚ್ಚು ಮೌಲ್ಯದ ರಬ್ಬರ್ ಹಾಗೂ 45000 ಮೌಲ್ಯದ ಕೃತ್ಯಕ್ಕೆ ಬಳಸಿದ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಸದರಿ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವ ಕುರಿತು ಪೋಲೀಸ್ ಅಧೀಕ್ಷಕರಾದ ಕೆ. ಮಿಥುನ್ ಕುಮಾರ್ ಐಪಿಎಸ್, ಮಾನ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್‌ ಕುಮಾರ್‌ ಬೂಮರೆಡ್ಡಿ, ಕಾರಿಯಪ್ಪ ಹಾಗೂ ಸಾಗರ ಉಪವಿಭಾಗದ ಪೊಲೀಸ್‌ ಉಪಾಧೀಕ್ಷರಾದ ಗೋಪಾಲಕೃಷ್ಣ.ಟಿ ನಾಯ್, ಸಾಗರ ಗ್ರಾಮಾಂತರ ಠಾಣೆಯ ಸಿಪಿಐ ನಾಗರಾಜು ರವರ ಮಾರ್ಗದರ್ಶನದಲ್ಲಿ ಠಾಣಾಧಿಕಾರಿಗಳಾದ ಯುವರಾಜ್ ಕೆ , ಎ.ಎಸ್.ಐ ದೇವಿದಾಸ್ ಡಿ ನಾಯ್ಕ, ಸಿಡಿಆರ್ ಸೆಲ್ ಶಿವಮೊಗ್ಗ, ಸಿಬ್ಬಂದಿಗಳಾದ ದಿವಾಕರ್ ನಾಯ್ಕ, ಪರುಶರಾಮ್, ಮಾಳಿಂಗರಾಯ, ಅವಿನಾಶ್, ಸಂತೋಶ್ ನಾಯ್ಕ ರವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ಒಟ್ಟಾರೆಯಾಗಿ ಆನಂದಪುರದ ಸುತ್ತಮುತ್ತಲಿನ ಭಾಗದಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಕಂಟಕಪ್ರಾಯವಾಗಿದ್ದ ಈ ಕಳ್ಳರ ಜಾಲವನ್ನು ಪತ್ತೆ ಹಚ್ಚಿದ ಪಟ್ಟಣದ ಪಿಎಸ್‌ಐ ಯುವರಾಜ್ ಕೆ ಹಾಗೂ ಸಿಬ್ಬಂದಿಗಳ ತಂಡಕ್ಕೆ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *