Ripponpete | ಹಳೇ ಸಂತೆ ಮೈದಾನದಲ್ಲಿ ರಾತ್ರೋರಾತ್ರಿ ಅಕ್ರಮ ಶೆಡ್ ನಿರ್ಮಾಣ – ಗ್ರಾಮಾಡಳಿತದಿಂದ ತೆರವು
ರಿಪ್ಪನ್ ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯ ಹಳೆ ಸಂತೆ ಮೈದಾನದಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ಶೆಡ್ಡುಗಳು ಉದ್ಬವವಾಗಿರುವ ಘಟನೆ ನಡೆದಿದ್ದು, ವಿಷಯ ತಿಳಿಯುತಿದ್ದಂತೆ ಗ್ರಾಮಾಡಳಿತ ಅಕ್ರಮ ಶೆಡ್ ಗಳನ್ನು ತೆರವುಗೊಳಿಸಿದೆ.
ಬರುವೆ ಶಾಲೆ ಸಮೀಪದಲ್ಲಿರುವ ಸ.ನಂ 43 ರ ಹಳೇ ಸಂತೆ ಮೈದಾನದಲ್ಲಿ ಶನಿವಾರ ರಾತ್ರಿ ಏಕಾಏಕಿ ಹಸಿರು ಶೆಡ್ , ಹಾಗೂ ಬೇಲಿಯನ್ನು ನಿರ್ಮಿಸಿ ಸರ್ಕಾರಿ ಜಾಗವನ್ನು ಅತಿಕ್ರಮಿಸುವ ಹುನ್ನಾರ ನಡೆದಿತ್ತು ಎನ್ನಲಾಗಿದೆ.
ಇಂದು ಮುಂಜಾನೆ ಹಳೇ ಸಂತೆ ಮೈದಾನದ ಮೀನು ಮಾರಾಟದ ಮಳಿಗೆಯ ಹಿಂಬಾಗದಲ್ಲಿ ಶೆಡ್ ಹಾಗೂ ಬೇಲಿಗಳು ಉದ್ಬವವಾಗಿತ್ತು ಇದನ್ನು ಕಂಡ ಸಾರ್ವಜನಿಕರಿಗೆ ಆಶ್ಚರ್ಯವಾಗಿತ್ತು..
ಈ ಬಗ್ಗೆ ವಿಷಯ ತಿಳಿಯುತಿದ್ದಂತೆ ರಿಪ್ಪನ್ಪೇಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಧನಲಕ್ಷ್ಮಿ ಹಾಗೂ ಸದಸ್ಯರು ಪಿಡಿಓ ಮಧುಸೂಧನ್ ರೊಂದಿಗೆ ಸ್ಥಳಕ್ಕೆ ತೆರಳಿ ಬೇಲಿ ಹಾಗೂ ಶೆಡ್ ನ್ನು ತೆರವುಗೊಳಿಸಿದ್ದಾರೆ.