Ripponpete | ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಸುವ್ಯವಸ್ಥೆಗಾಗಿ ದಿಟ್ಟ ಹೆಜ್ಜೆ ಇಟ್ಟಿರುವ ಪಿಎಸ್ಐ ನಿಂಗರಾಜ್ |

ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಸುವ್ಯವಸ್ಥೆಗಾಗಿ ದಿಟ್ಟ ಹೆಜ್ಜೆ ಇಟ್ಟಿರುವ ಪಿಎಸ್ಐ ನಿಂಗರಾಜ್ | ಕಿಡಿಕೇಡಿಗಳ ನಿದ್ದೆಗೆಡಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕಣ್ಗಾವಲು

ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಕಿಡಿಗೇಡಿಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಪಿಎಸ್‌ಐ ನಿಂಗರಾಜ್ ಕೆ ವೈ ತೆಗೆದುಕೊಂಡ ಕ್ರಮ ಕಿಡಿಗೇಡಿಗಳ ನಿದ್ದೆಗೆಡಿಸಿದೆ.

ಹೌದು ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಚನಾಲ , ಕೋಡೂರು ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕೆಲವು ಘಟನೆಗಳು ಪೊಲೀಸರ ತಲೆ ನೋವಿಗೆ ಕಾರಣವಾಗಿತ್ತು.


ಕೆಲವು ದಿನಗಳ ಹಿಂದಷ್ಟೇ ಪಟ್ಟಣದ ಪಿಎಸ್‌ಐ ಆಗಿ ಚಾರ್ಚ್ ತೆಗೆದುಕೊಂಡಿರುವ ನಿಂಗರಾಜ್ ಕೆ ವೈ ಠಾಣೆ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಾದ ಕೆಂಚನಾಲ ಮತ್ತು ಕೋಡೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿ ಎರಡು ಗ್ರಾಮಗಳನ್ನು ಪೊಲೀಸ್ ಕಣ್ಗಾವಲಿನಲ್ಲಿರಿಸಿದ್ದಾರೆ.

ಈ ಅತ್ಯಾಧುನಿಕ ಕ್ಯಾಮೆರಾದಲ್ಲಿ 360° ದೃಶ್ಯ ಸೆರೆ ಹಿಡಿಯುವದಷ್ಟೇ ಅಲ್ಲದೇ ನೈಟ್ ವಿಷನ್ , ಸೈರನ್ ಹಾಗೂ ಒನ್ ಟೂ ಒನ್ ಮಾತನಾಡುವ ವ್ಯವಸ್ಥೆಯಿದೆ.ಈ ಕ್ಯಾಮೆರಾವನ್ನು ಪಿಎಸ್‌ಐ ಸೇರಿದಂತೆ ಐವರು ಪೊಲೀಸರು ದಿನದ 24 ಗಂಟೆಯೂ ಮಾನಿಟರ್ ಮಾಡುತ್ತಾರೆ.

ರಾತ್ರಿ 09 ಗಂಟೆಯ ನಂತರ ಅನಾವಶ್ಯಕವಾಗಿ ತಿರುಗಾಡುವಂತಿಲ್ಲ ಒಂದು ವೇಳೆ ತಿರುಗಾಡಿದರೆ ಕೂಡಲೇ ಈ ಕ್ಯಾಮೆರಾದೊಂದಿಗೆ ಅಳವಡಿಸಿರುವ ಸೈರನ್ ಕೂಗಿಕೊಳ್ಳುತ್ತದೆ ನಂತರ ಪೊಲೀಸರಿಂದ ಆತನಿಗೆ ವಾರ್ನಿಂಗ್ ನೀಡಲಾಗುತ್ತಿದೆ. ತಡರಾತ್ರಿ ಮನೆಯಿಂದ ಹೊರಡುವ ಮುನ್ನ ಕ್ಯಾಮೆರಾದ ಮುಂದೆ ಸ್ಪಷ್ಟವಾದ ಕಾರಣ ನೀಡಬೇಕು ಇಲ್ಲದಿದ್ದಲ್ಲಿ ಮಾರನೇ ದಿನ ಮನೆ ಮುಂದೆ ಪೊಲೀಸ್ ವಾಹನ ನಿಂತಿರುತ್ತದೆ.

ಮೂಲತಃ ಇಂಜಿನಿಯರ್ ಪದವೀಧರರಾಗಿರುವ ನಿಂಗರಾಜ್ ಕೆ ವೈ ಈ ಕ್ಯಾಮೆರಾಗಳನ್ನು ತಮ್ಮ ಸ್ವಂತ ಹಣದಿಂದ ಖರೀದಿಸಿದ್ದು ಇವರು ಕಾರ್ಯ ನಿರ್ವಹಿಸುವ ಠಾಣೆಗೆ ಈ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ಗುರಿ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ರಿಪ್ಪನ್‌ಪೇಟೆಯ ವಿವಿಧ ಪ್ರದೇಶದಲ್ಲಿ ಇಂತಹ ಅತ್ಯಾಧುನಿಕ ಕ್ಯಾಮೆರಾವನ್ನು ಅಳವಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿಪಿಐ ಗುರಣ್ಣ ಡಿ ಹೆಬ್ಬಾರ್ ಪಟ್ಟಣದ ಪಿಎಸ್‌ಐ ರವರ ವಿಶೇಷ ಆಸಕ್ತಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾದಿಂದ ದಿನದ 24 ಗಂಟೆಯೂ ಪೊಲೀಸ್ ನಿಗಾ ಇಡುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಲಾಗುತ್ತಿದೆ ಎಂದರು.

ಕೆಲವು ಕಿಡಿಗೇಡಿಗಳಿಂದ ಹಲವು ದಶಕಗಳಿಂದ ಸಾಮರಸ್ಯದಿಂದ ಕೆಂಚನಾಲ ಗ್ರಾಮದಲ್ಲಿ ಇಂತಹ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಪಿಎಸ್‌ಐ ನಿಂಗರಾಜ್ ನಮ್ಮ ಗ್ರಾಮಗಳಲ್ಲಿ ಶಾಂತ ಪರಿಸ್ಥಿತಿ ನಿರ್ಮಾಣವಾಗಲು ಸಹಕರಿಸುತಿದ್ದಾರೆ ಇವರಿಗೆ ನಮ್ಮ ಗ್ರಾಪಂ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ

ಉಬೇದುಲ್ಲಾ ಷರೀಫ್ ಅಧ್ಯಕ್ಷರು ಗ್ರಾಪಂ ಕೆಂಚನಾಲ

Leave a Reply

Your email address will not be published. Required fields are marked *