ಹೊಸನಗರದ ತೋಟದ ಮನೆಯೊಂದ ಮೇಲೆ ಲೋಕಾಯುಕ್ತ ರೇಡ್ | 
ಹೊಸನಗರ ತಾಲ್ಲೂಕಿನ ಜಯನಗರ ಸಮೀಪದ ಮಣಸಟ್ಟೆ ಗ್ರಾಮದಲ್ಲಿರುವ ತೋಟದ ಮನೆಯೊಂದರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ಕಾರವಾರದ ಅಬಕಾರಿ ಅಧಿಕಾರಿ ರೂಪ ಎಂಬುವವರಿಗೆ ಸೇರಿದ ಆಸ್ತಿ ಇದಾಗಿದೆ ಎಂದು ಹೇಳಲಾಗುತ್ತಿದೆ.ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ  ಇನ್ನೂ ಹಲವಾರು ಕಡೆ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಸುತ್ತಾ ಬಳಿಯ ಮಣಸಟ್ಟೆ ತೋಟದ ಮನೆಯ ಮೇಲೆ ದಾಳಿ ನಡೆಸಿರುವ ಕುರಿತು ಅಧಿಕಾರಿಗಳು ಕಾರ್ಯಾಚರಣೆ ಮುಗಿದ ಬಳಿಕ ಮಾಹಿತಿ ನೀಡುವ ಸಾಧ್ಯತೆ ಇದೆ.
		 
                         
                         
                         
                         
                         
                         
                         
                         
                         
                        
