ಪುತ್ರನಿಗೆ ತಪ್ಪಿದ ಟಿಕೆಟ್ – ಬಿಎಸ್ವೈ ಪುತ್ರನ ವಿರುದ್ದವೇ ಸ್ಪರ್ಧಿಸುತ್ತಾರ ಕೆ ಎಸ್ ಈಶ್ವರಪ್ಪ .!!??| Parliament Election

ಪುತ್ರನಿಗೆ ತಪ್ಪಿದ ಟಿಕೆಟ್ – ಬಿಎಸ್ವೈ ಪುತ್ರನ ವಿರುದ್ದವೇ ಸ್ಪರ್ಧಿಸುತ್ತಾರ ಕೆ ಎಸ್ ಈಶ್ವರಪ್ಪ .!!??


ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್ ವೈ ಪುತ್ರ ಹಾಲಿ ಸಂಸದ ರಾಘವೇಂದ್ರ ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲೇ ಈಗ ಈಶ್ವರಪ್ಪ ಸ್ಪರ್ಧೆ ಮಾಡಬೇಕೆನ್ನುವ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಈ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರ ಎಲ್ಲರ ಗಮನ ಸೆಳೆಯುತ್ತಿದೆ.

ಈಶ್ವರಪ್ಪ ಅವರು ಪುತ್ರನಿಗೆ ಕೈತಪ್ಪಿರುವ ಟಿಕೆಟ್ ಬಳಿಕ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದು ಸದ್ಯ ರಾಜ್ಯ ರಾಜಕೀಯದಲ್ಲಿ ತೀವ್ರ ಮಹತ್ವ ಪಡೆದುಕೊಂಡಿದೆ.. 

ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಈಶ್ವರಪ್ಪ ಪುತ್ರ ಕಾಂತೇಶ್ ಗೆ ತೀವ್ರ ನಿರಾಸೆಯಾಗಿದೆ. ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಎಲ್ಲಿಲ್ಲದ ಕಸರತ್ತು ನಡೆಸಿದ್ದರು. ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಮಗನಿಗೆ ಟಿಕೆಟ್ ಬಿಎಸ್ ವೈ ಅವರು ಕೊಡಿಸಿಲ್ಲ ಎನ್ನುವ ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ.. ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ. 

ಬಿಜೆಪಿಯ ಎರಡನೇ ಪಟ್ಟಿ ಸಂಜೆಯಾಗುತ್ತಲೇ ಬಿಡುಗಡೆ ಮಾಡಿತು. ಹಾವೇರಿ ಗದಗ ಲೋಕಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಈಶ್ವರಪ್ಪ ಪುತ್ರ ಕಾಂತೇಶ್ ಗೆ ದೊಡ್ಡ ಆಘಾತವಾಗಿದೆ. ಕೊನೆ ಕ್ಷಣದವರೆಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಈಶ್ವರಪ್ಪ ಮತ್ತು ಪುತ್ರ ಕಾಂತೇಶ್ ಇದ್ದರು. ಆದ್ರೆ ಎರಡನೇ ಪಟ್ಟಿಯಲ್ಲಿ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಸಿಗಲಿಲ್ಲ. ಮಾಜಿ ಸಿಎಂ ಮತ್ತು ಶಿಗ್ಗಾಂವಿ ಕ್ಷೇತ್ರದ ಶಾಸಕ ಬಸವರಾಜ್ ಬೊಮ್ಮಾಯಿಗೆ ಟಿಕೆಟ್ ಸಿಕ್ಕಿತ್ತು.

ಈ ಸುದ್ದಿ ತಿಳಿಯುತ್ತಿದ್ದಂತೆ ಈಶ್ವರಪ್ಪ ಮತ್ತು ಅವರ ಕುಟುಂಬಕ್ಕೆ ಬಿಗ್ ಶಾಕ್. ಈಶ್ವರಪ್ಪ ಪತ್ನಿ ಮತ್ತು ಕುಟುಂಬಸ್ಥರು ಕಣ್ಣೀರು ಹಾಕಿದರು. ಇನ್ನೂ ಟಿಕೆಟ್ ಘೋಷಣೆ ಬಳಿಕ ಈಶ್ವರಪ್ಪ ಸುಮಾರು ಒಂದು ಘಂಟೆಗಳ ಕಾಲ ತಮ್ಮ ಆಪ್ತರ ಜೊತೆ ಅಜ್ಷಾತ ಸ್ಥಳದಲ್ಲಿ ಮೀಟಿಂಗ್ ಮಾಡಿದರು. ಬಳಿಕ ಬಂದು ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಆರಂಭದಿಂದಲೂ ಕೊನೆಯ ವರೆಗೆ ಪಕ್ಷ ಮತ್ತು ಮೋದಿಯನ್ನು ಈಶ್ವರಪ್ಪ ಬಿಟ್ಟುಕೊಡಲಿಲ್ಲ.

ಆದ್ರೆ ಬಿಎಸ್ ವೈ ಅವರು ನನಗೆ ಮತ್ತು ನನ್ನ ಪುತ್ರನಿಗೆ ಟಿಕೆಟ್ ಕೊಡಿಸುವುದಾಗಿ ಮತ್ತು ಆತನ ಪರ ಪ್ರಚಾರ ಮಾಡಿ ಗೆಲ್ಲಿಸುವುದಾಗಿ ಮಾತುಕೊಟ್ಟಿದ್ದರು. ಆದ್ರೆ ಈಗ ಅವರು ಮೋಸ ಮಾಡಿದ್ದಾರೆ. ಶೋಭಾ ಮತ್ತು ಬಸವರಾಜ್ ಗೆ ಪಟ್ಟು ಹಿಡಿದು ಟಿಕೆಟ್ ಕೊಡಿಸಿದ ಬಿಎಸ್ ವೈ ತಮ್ಮ ಮಗ ಕಾಂತೇಶ್ ಗೆ ಯಾಕೇ ಟಿಕೆಟ್ ಕೊಟ್ಟಿಲ್ಲವೆಂದು ಈಶ್ವರಪ್ಪ ಬಿಎಸ್ ವೈ ಮೇಲೆ ಗರಂ ಆಗಿದ್ದರು.

ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಈಶ್ವರಪ್ಪ ಸ್ಪರ್ಧೆ ಮಾಡಬೇಕೆಂದು ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ. 15 ರ ಸಂಜೆ ಶಿವಮೊಗ್ಗದ ಬಂಜಾರ್ ಸಮೂದಾಯ ಭವನದಲ್ಲಿ ಬೆಂಬಲಿಗರ ಮತ್ತು ಮುಖಂಡರ ಸಭೆ ಈಶ್ವರಪ್ಪ ಕರೆದಿದ್ದಾರೆ.

ಈ ಸಭೆಯಲ್ಲಿ ತಮ್ಮ ಮುಂದಿನ ತಿರ್ಮಾನ ಪ್ರಕಟಿಸುವುದಾಗಿ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಇನ್ನೂ ಸಿಟಿ ರವಿ,ಪ್ರತಾಪ್ ಸಿಂಹ, ಕಟೀಲು ಸೇರಿದಂತೆ ಹಿಂದುತ್ವದ ಪರ ಧ್ವನಿಯೆತ್ತಿರುವ ನಾಯಕರನ್ನು ಸೈಡ್ ಲೈನ್ ಮಾಡಿದ್ದಾರೆ. ಸದ್ಯ ಪಕ್ಷದ ಕತ್ತು ಹಿಸುಕಿದ್ದಾರೆ. ಅದರಿಂದ ಪಕ್ಷವನ್ನು ಉಳಿಸಬೇಕಿದೆ. ಬಿಎಸ್ ವೈ ಅಪ್ಪ ಮಕ್ಕಳ ಪಕ್ಷ ಕೈಗೆ ಪಕ್ಷವು ಸಿಕ್ಕು ಒದ್ದಾಡುತ್ತಿದೆ ಎಂದು ಬಿಎಸ್ ವೈ ಮೇಲೆ ತಮ್ಮ ಕೋಪ ಈಶ್ವರಪ್ಪ ಹೊರಹಾಕಿದ್ದಾರೆ.

ಕಳೆದ ಒಂದು ವಾರದಿಂದ ಶಿವಮೊಗ್ಗದಲ್ಲಿ ಸಾಕಷ್ಟು ಬೆಳವಣಿಗೆ ನಡೆದವು. ಬಿಎಸ್ ವೈ ಮತ್ತು ಪ್ರಲ್ಲಾದ್ ಜೋಶಿ ಅವರಿಗೆ ಶಿವಮೊಗ್ಗದಲ್ಲಿ ಈಶ್ವರಪ್ಪ ಬೆಂಬಲಿಗರು ಟಿಕೆಟ್ ಕೊಡಬೇಕೆಂದು ಒತ್ತಾಯ ಮಾಡಿದ್ದರು. ಬಿಎಸ್ ವೈ ಅವರ ಮೇಲೆ ನಿರಂತರವಾಗಿ ಈಶ್ವರಪ್ಪ ಮತ್ತು ಕಾಂತೇಶ್ ಟಿಕೆಟ್ ಗಾಗಿ ನಿರಂತರವಾಗಿ ಒತ್ತಡ ಹೇರಿದರು.

ಆದ್ರೆ ಇದು ವರಿಷ್ಠರ ಮತ್ತು ಬಿಎಸ್ ವೈ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಸದ್ಯ ಆರ್ ಎಸ್ ಎಸ್ ಪ್ರಮುಖರ ಜೊತೆ ನಿರಂತರವಾಗಿ ಈಶ್ವರಪ್ಪ ಸಂಪರ್ಕದಲ್ಲಿದ್ದರು. ಕೊನೆಗೂ ಈಶ್ವರಪ್ಪ ಅವರಿಗೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. ಈ ನಡುವೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿಎಸ್ ವೈ ಪುತ್ರ ರಾಘವೇಂದ್ರ ನಾಲ್ಕನೇ ಬಾರಿ ಕಣಕ್ಕೆ ಇಳಿಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಘವೇಂದ್ರ ಸಂತಸ ವ್ಯಕ್ತಪಡಿಸಿದರು. ಇನ್ನು ಈಶ್ವರಪ್ಪ ಮತ್ತು ಕಾಂತೇಶ್ ಅವರಿಗೆ ನಿರಾಸೆಯಾಗಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಅವರಿಗೆ ಬೇಸರವಾಗಿದೆ. ನಮ್ಮ ನಾಯಕರು ಎಲ್ಲ ಸರಿ ಮಾಡುತ್ತಾರೆ. ಈಶ್ವರಪ್ಪ ಅವರು ನಮ್ಮ ನಾಯಕರು. ಅವರು ಪಕ್ಷದಲ್ಲೇ ಇರುವ ವಿಶ್ವಾಸ ನನಗೆ ಇದೆ ಎನ್ನುವ ಮೂಲಕ ಬಿಎಸ್ ವೈ ಪುತ್ರ ಸಂಸದ ರಾಘವೇಂದ್ರ ಈಶ್ವರಪ್ಪ ಅವರನ್ನು ಸಮಾಧಾನಪಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *