ವಿಷ ಸೇವಿಸಿ ಮಹಿಳೆ ಸಾವು , ಐದು ತಿಂಗಳ ಮಗುವಿನ ಸ್ಥಿತಿ ಚಿಂತಾಜನಕ – ವರದಕ್ಷಿಣೆ ಕಿರುಕುಳ ಆರೋಪ
ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಒಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಸಿದ್ಲಿಪುರ ಎಂಬ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಮಗುವಿಗೂ ಕೂಡ ವಿಷ ನೀಡಿಲಾಗಿದೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಗಂಡನ ಮನೆಯವರ ವಿರುದ್ಧ ಆರೋಪಿಸುತ್ತಿದ್ದಾರೆ.
ಗಂಡನ ಮನೆಯವರು ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪತ್ನಿ ಕಸ್ತೂರಿ ಗಂಡ ಮಂಜುನಾಥ್ ಅತ್ತೆ ಉಮಾ ಹಾಗೂ ಮೈದುನ ಕಿರುಕುಳ ನೀಡುತ್ತಿದ್ದರು ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಈ ವೇಳೆ ಪತ್ನಿ ಜೊತೆಗೆ ಮಗುವಿಗು ಕೂಡ ವಿಷ ಕುಡಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು ಕಸ್ತೂರಿ ಪತಿ ಮಂಜುನಾಥ್ ಹಾಗೂ ಅತ್ತೆ ಉಮಾ ಮೈದುನ ಮುತ್ತು ವಿರುದ್ಧ ಕಸ್ತೂರಿ ಕುಟುಂಬಸ್ಥರು ಇದೀಗ ಕೊಲೆ ಆರೋಪ ಮಾಡುತ್ತಿದ್ದಾರೆ.
ಪೊಲೀಸರು ಆರೋಪಿ ಮಂಜುನಾಥನ್ನು ವಶಕ್ಕೆ ಪಡೆದಿದ್ದಾರೆ.