ಅನೈತಿಕ ಸಂಬಂಧಕ್ಕೆ ವಿಕಲಚೇತನ ಮಗು ಅಡ್ಡಿ – ಹೆತ್ತ ಮಗುವನ್ನೇ ಕೊಲೆಗೈದ ಪಾಪಿ ತಾಯಿ! | Dharwad News
ಅದೇಷ್ಟೋ ತಂದೆ ತಾಯಂದಿರು ಮಕ್ಕಳಿಗಾಗಿ ಹರಕೆ ಹೊತ್ತು ಗುಡಿ ಗೋಪುರಗಳನ್ನು ಸುತ್ತವುದನ್ನು ನೋಡಿದ್ದೇವೆ ಆದರೆ ಇಲ್ಲೊಬ್ಬಳು ಪಾಪಿ ತಾಯಿ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾಳೇ ಕಾರಣಕ್ಕೆ ತಾನೇ ಹೆತ್ತು ಹೊತ್ತುಬೆಳೆಸಿದ ಐದು ವರ್ಷದ ಮಗುವನ್ನು ಮಸಣಕ್ಕೆ ಕಳುಹಿಸಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಸಹನಾ ಹಿರೇಮಠ(05) ಮೃತ ದುರ್ಧೈವಿಯಾಗಿದ್ದು, ಐದು ವರ್ಷದ ಈ ಮಗು ತಾನು ಮಾಡದೇ ಇರೋ ತಪ್ಪಿಗೆ ಜಗತ್ತನ್ನು ತಿಳಿದುಕೊಳ್ಳುವ ಮುಂಚೆಯೇ ಶಾಶ್ವತವಾಗಿ ಕಣತಣಮುಚ್ಚಿದ್ದಾಳೆ. ಹೌದು, ತನ್ನ ತಂದೆ ತಾಯಿ ಜಗಳದಿಂದ ಡೈವರ್ಸ್ ಬಳಿಕ, ತನ್ನ ಅವಳಿ ಸೋದರಿ ಜೊತೆಗೆ ತಾಯಿಯೊಂದಿಗೆ ಇದ್ದ ಸಹನಾಗೆ ತನ್ನ ತಾಯಿಯೇ ಯಮವಾಗಿ ಬಂದು ಪ್ರಾಣ ಕಿತ್ತುಕೊಂಡಿದ್ದಾಳೆ.
ಹೌದು, ಸಹನಾಳ ಪಾಪಿ ತಾಯಿ ಜ್ಯೋತಿ ಹಿರೇಮಠ. ಈಗಷ್ಟೇ ಒಂದೂವರೆ ತಿಂಗಳ ಹಿಂದೆ ತನ್ನ ಪತಿಯಿಂದ ಡೈವರ್ಸ್ ಪಡೆದಿದ್ದ ಜ್ಯೋತಿ, ಕಮಲಾಪುರದ ಹೂಗಾರ ಓಣಿಯಲ್ಲಿ ಐದು ವರ್ಷದ ಅವಳಿ ಮಕ್ಕಳೊಂದಿಗೆ ವಾಸವಿದ್ಳು. ಅದರಲ್ಲಿ ಸಹನಾ ಅಂಗವಿಕಲೆ. ಡೈವರ್ಸ್ ಗೂ ಮುಂಚೆಯೇ ರಾಹುಲ್ ತೆರದಾಳ ಎಂಬಾತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳಂತೆ. ಡೈವರ್ಸ್ ಸಿಕ್ಕ ಬಳಿಕ ರಾಹುಲ್ ಜೊತೆಗೆ ವಿವಾಹವಾಗುವ ಪ್ಲ್ಯಾನ್ ಸಹ ಮಾಡಿದ್ದಳೆಂದು ಹೇಳಲಾಗುತ್ತಿದೆ. ಆದರೆ ಅದಕ್ಕೆ ಅಂಗವಿಕಲ ಮಗಳು ಸಹನಾ ಅಡ್ಡಿಯಾಗುತ್ತಾಳೆ ಅಂತಾ, ನಿನ್ನೆ ಸಂಜೆ ತರಕಾರಿ ಕತ್ತರಿಸುವ ಚಾಕುವಿನಿಂದ ಕತ್ತು ಕೊಯ್ದು ಕೊಂದೇ ಬಿಟ್ಟಿದ್ದಾಳೆ.
ಜ್ಯೋತಿಗೆ ಅದೆಂತಹ ಮೋಹವೋ ಗೊತ್ತಿಲ್ಲ. ಸವದತ್ತಿಯ ಕಲ್ಲಯ್ಯನೊಂದಿಗೆ ಪ್ರೀತಿಸಿಯೇ ಮದುವೆಯಾಗಿದ್ದಳು. ಜಾತಿ ಬೇರೆ ಬೇರೆಯಾಗದರೂ ಸಹಬಾಳ್ವೆ ನಡಿಸ್ತಾ ಇದ್ರು. ಆದರೆ ಯಾವಾಗ ಅವಳಿ ಮಕ್ಕಳಾದವೋ ಅದರಲ್ಲಿ ಒಂದು ಮಗು ಸಹನಾ ಅಂಗವಿಕಲ ಇತ್ತು. ಆಗಿನಿಂದಲೇ ಪತಿ ಕಲ್ಲಯ್ಯನ ಮೇಲೆ ಈಕೆಗೆ ಪ್ರೀತಿಯೇ ಕಡಿಮೆಯಾಗಿತ್ತು. ಮೊಬೈಲ್ ನಲ್ಲಿ ಯಾವಾಗಲೂ ಬೇರೆಯವರ ಜೊತೆ ಮಾತನಾಡುವುದು, ಚಾಟ್ ಮಾಡುವುದು ನಡದೇ ಇತ್ತು. ಎರಡ್ಮೂರು ಸಲ ಹಿರಿಯರನ್ನು ಸೇರಿಸಿ ಬುದ್ಧಿವಾದ ಹೇಳಿದ್ದರೂ ಸರಿಯಾಗಿರಲಿಲ್ಲ. ಕೊನೆಗೆ ಕಳೆದ ಸೆಪ್ಟೆಂಬರ್ ನಲ್ಲಿ ಆಕೆಯೇ ಡೈವರ್ಸ್ ಪಡೆಯಲು ಮುಂದಾಗಿದ್ದಳು. ಮಕ್ಕಳನ್ನೂ ಸಹ ನನಗೆ ಕೊಡಿ ಅಂತಾ ವಾದ ಮಾಡಿ, ಮಕ್ಕಳ ಸಮೇತ ಒಂದೂವರೆ ತಿಂಗಳ ಹಿಂದಷ್ಟೇ ಡೈವರ್ಸ್ ಪಡೆದಿದ್ದಳಂತೆ.
ಇನ್ನೂ ರಾಹುಲ್ ಹುಬ್ಬಳ್ಳಿ ನವನಗರದ ನಿವಾಸಿ, ಒಂದು ವರ್ಷಕ್ಕಿಂತಲೂ ಹೆಚ್ಚಿನ ದಿನಗಳಿಂದ ಇಬ್ಬರ ಮಧ್ಯೆ ಲವ್ವಿ ಡವ್ವಿ ನಡದೇ ಇತ್ತು. ಗಂಡನ ಮನೆ ಬಿಟ್ಟು ತವರು ಮನೆ ಸೇರಿಯೂ ವರ್ಷದ ಮೇಲಾಗಿತ್ತು. ಆದರೆ ಇಬ್ಬರಿಗೂ ಅಡ್ಡಿಯಾಗಿದ್ದು ಗಂಡ, ಹೀಗಾಗಿ ಡೈವರ್ಸ್ ಸಿಕ್ಕಾಗ ಸ್ವತಂತ್ರ ಸಿಕ್ಕಂತೆ ಆಗಿತ್ತು. ಆದರೆ ಅಂಗವಿಕಲೆ ಸಹನಾ? ಇದ್ದಳಲ್ಲ ಈಕೆ ಯಾಕೆ ಅಂತಾ ರಾಹುಲ್ ಜಗಳ ತೆಗಿತಾ ಇದ್ದನಂತೆ ಹೀಗಾಗಿ ಆ ಮಗಳನ್ನೇ ಇಲ್ಲವಾಗಿಸಿ ಜೈಲು ಸೇರಿದ್ದಾಳೆ. ಪ್ರಿಯಕರನಿಗೂ ಈಗ ಪೊಲೀಸರು ಅಸಲಿ ಮಾವನ ಮನೆ ತೋರಿಸಿದ್ದಾರೆ.
ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಆ ಕಾಮಕ್ಕೆ ಕನಿಕರವೂ ಇರೋದಿಲ್ಲ ಅನ್ನೋದು ಈ ಘಟನೆಯಿಂದ ಸಾಬೀತಾಗಿದ್ದು, ತನ್ನ ತಾಯಿಯ ಮೋಹಕ್ಕೆ ಏನು ಅರಿಯದ ಕಂದಮ್ಮವೊಂದು ಈಗ ಕಮರಿಹೋಗಿದ್ದು ದುರಂತವೇ ಸರಿ…….