ಖಬರ್ಸ್ಥಾನದಲ್ಲಿ ಮರ ಕಡಿದ ವಿಚಾರಕ್ಕೆ ಎರಡು ಕೋಮುಗಳ ನಡುವೆ ಭುಗಿಲೆದ್ದ ಸಂಘರ್ಷ! ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು..??
ಶಿವಮೊಗ್ಗ (Shivamogga) : ಮುಸ್ಲಿಂ ಖಬರ್ ಸ್ಥಾನದ ಜಾಗದಲ್ಲಿ ಮರ ಕಡಿದ ವಿಚಾರಕ್ಕೆ ವ್ಯಕ್ತಿಯ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ(assault) ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ(bhadravathi) ತಾಲೂಕಿನ ಜಂಬರಘಟ್ಟೆಯಲ್ಲಿ ನಡೆದಿದೆ.
ಹೊಸ ಜಂಬಘಟ್ಟೆ ನಿವಾಸಿ ರವಿ (20) ಹಲ್ಲೆಗೊಳಗಾದ ವ್ಯಕ್ತಿ.ಹಲ್ಲೆ ನಡೆಸಿದ ಬಳಿಕ ಯುವಕರು ಪರಾರಿಯಾಗಿದ್ದಾರೆ.
ಜೀವನೋಪಾಯಕ್ಕಾಗಿ ಕುರಿಗಳನ್ನ ಸಾಕಿರುವ ರವಿ. ಮನೆಯಲ್ಲಿ ಕುರಿ ಕಟ್ಟುವ ಗೂಟ ಮುರಿದ ಕಾರಣ ಹೊಸ ಗೂಟ ಹುಡುಕಾಡಿಕೊಂಡು ಹೋಗಿದ್ದಾರೆ. ಹೀಗೆ ಖಬರ್ ಸ್ಥಾನದ ಬಳಿ ಹೋಗಿರುವ ರವಿ ಎಂಬಾತ ಅಕೆಶಿಯ ಮರದಿಂದ ಕೊಂಬೆಯೊಂದನ್ನು ಕಡಿದಕೊಂಡು ಕುರಿ ಕಟ್ಟಲು ಬೇಕಾದ ಗೂಟವನ್ನು ಸಿದ್ದ ಪಡಿಸಿಕೊಂಡು ಹೋಗಿದ್ದಾನೆ. ಅದೇ ಈಗ ಕೋಮು ಸಂಘರ್ಷದ ರೂಪು ಪಡೆದು ಠಾಣೆ ಮೆಟ್ಟಿಲೇರುವಂತಾಗಿದೆ.
ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆಂದು ಕೇಸ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಇದೇ ವೇಳೆ ಮರ ಕಡಿದಿದ್ದಕ್ಕೆ ಹೊಳೆಹೊನ್ನೂರು ಠಾಣೆ ಮುಂದೆ ಜಮಾಯಿಸಿದ ಒಂದು ಕೋಮಿನ ಗುಂಪಿನಿಂದ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಹಿಂದು ಮುಸ್ಲಿಂ ಸಂಘರ್ಷದ ಅರಿವಿಲ್ಲದ ರವಿ ಮರ ಸಹಜವಾಗಿ ಮರ ಹುಡುಕುತ್ತಾ ಮುಸ್ಲಿಂರ ಖಬರಸ್ಥಾನದಲ್ಲಿ ಮರ ಕಡಿದಿದ್ದಾನೆ. ಈ ವೇಳೆ ಹಿಂದೂ ವ್ಯಕ್ತಿಯೊಬ್ಬ ಮರ ಕಡಿಯುವುದನ್ನು ಕಂಡು ಅಲ್ಲಿಗೆ ಬಂದಿರುವ ಯುವಕರು ರವಿಯನ್ನ ತಡೆದು ಪ್ರಶ್ನಿಸಿ ಹಲ್ಲೆಗೆ ಮುಂದಾಗಿದ್ದಾರೆ. ಆದರೆ ಸ್ಥಳದಲ್ಲಿದ್ದ ಕೆಲವರು ಸಮಾದಾನ ಪಡಿಸಿ ಪ್ರಕರಣ ಗ್ರಾಮ ಸಮಿತಿಯ ಬಳಿ ತೆಗೆದುಕೊಂಡು ಹೋಗಿದ್ದಾರೆ. ಗ್ರಾಮ ಸಮಿತಿಯವರು ಸಣ್ಣದನ್ನೆ ದೊಡ್ಡದು ಮಾಡಿಕೊಂಡು ಹೋಗುವುದು ಬೇಡವೆಂದು ತಿಳಿಹೇಳಿದ್ದಾರೆ.
ಮರ ಕಡಿದ ವಿಚಾರ ಗ್ರಾಮ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯಲ್ಲಿ ಇತ್ಯಾರ್ಥವಾಗಿದೆ. ಇಷ್ಟಾದ ಮೇಲೂ ಸುಮ್ಮನಾಗದ ಕೆಲ ಮುಸ್ಲಿಂ ಯುವಕರು ರವಿ ಮನೆ ಬಳಿ ಹೋಗಿ ಮತ್ತೆ ಗಲಾಟೆ ಮಾಡಿದ್ದಾರೆ. ಆಗ ಗಲಾಟೆ ವಿಷಯ ಅಕ್ಕ ಪಕ್ಕದವರಿಗೆ ತಿಳಿದು ಗ್ರಾಮದಲ್ಲಿ ಜನ ಜಮಾಯಿಸಿದ್ದಾರೆ.
ರವಿ ಮೇಲೆ ಹಲ್ಲೆಗೆ ಮುಂದಾಗ್ತಿದ್ದಂತೆ ಜಮಾಯಿಸಿದ್ದ ಜನರ ನಡುವೆ ನೂಕಾಟ ತಳ್ಳಾಟ ನಡೆದು ಹೊಡೆದಾಟವೂ ನಡೆದುಹೋಗಿದೆ. ಎರಡು ಕಡೆಯವರಿಗೆ ಗಾಯಗಳಾಗಿದ್ದು, ಗಾಯಾಳುಗಳು ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಘರ್ಷಣೆಯಲ್ಲಿ ಮುಸ್ಲಿಂ ಯುವಕರಿಂದ ಮಹಿಳೆಯರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ ಮಹಿಳೆಯರು ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಘಟನೆ ತಿಳಿದು ಪ್ರತಿಭಟನೆ ಸ್ಥಳಕ್ಕೆ ಬಂದ ಭದ್ರಾವತಿ ಡಿವೈಎಸ್ಪಿ ನಾಗರಾಜ್, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ. ಘಟನೆಗೆ ಕಾರಣವಾಗಿ ಹಲ್ಲೆ ಮಾಡಿದ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿಲ್ಲಿಸಿದ ಜನರು. ಸದ್ಯ ರವಿ ಮೇಲೆ ಹಲ್ಲೆ ನಡೆಸಿದ ಯುವಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು..!!?
ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ನಿನ್ನೆ ನಡೆದ ಕುರಿಗೂಟ ಕಡಿದಿದ್ದಕ್ಕೆ ಮಸೀದಿ ಬಳಿ ಕರೆದೊಯ್ದು ಹಲ್ಲೆ ಮಾಡಿದ ಪ್ರಕರಣ ಸಂಬಂಧ ಎಸ್ಪಿ ಮಿಥುನ್ ಕುಮಾರ್ ವಿಡಿಯೋ ಹೇಳಿಕೆ ನೀಡಿದ್ದಾರೆ.
ಜಂಬರಘಟ್ಟ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಕುರಿಕಟ್ಟಲು ಗೂಟಕ್ಕಾಗಿ ರವಿ ಎಂಬ ವ್ಯಕ್ತಿ ಮರ ಕಡಿಯಲು ಹೋಗಿದ್ದ ವೇಳೆ, ಅಲ್ಲಿ ವಿರೋಧ ವ್ಯಕ್ತವಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ನೂಕಾಟ ನಡೆದಿತ್ತು. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ಕೂಡ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.