Headlines

ತೀರ್ಥಹಳ್ಳಿ – ತುಂಗಾ ನದಿಯಲ್ಲಿ ಬಿಹಾರ ಮೂಲದ ಬಾಲಕ ನೀರುಪಾಲು – ಅಗ್ನಿಶಾಮಕ ದಳದಿಂದ ತೀವ್ರ ಶೋಧ | Thirthahalli

ತೀರ್ಥಹಳ್ಳಿ – ತುಂಗಾ ನದಿಯಲ್ಲಿ ಬಿಹಾರ ಮೂಲದ ಬಾಲಕ ನೀರುಪಾಲು – ಅಗ್ನಿಶಾಮಕ ದಳದಿಂದ ತೀವ್ರ ಶೋಧ | Thirthahalli

ತೀರ್ಥಹಳ್ಳಿ : ಜಾತ್ರೆಯಲ್ಲಿ ವ್ಯಾಪರಕ್ಕಾಗಿ ಅಂಗಡಿ ಮುಂಗಟ್ಟು ಹಾಕಲು ಬಂದಿದ್ದ ಬಿಹಾರಿ ಮೂಲದ ಆರಿಫ್ (13) ಎಂಬ ಬಾಲಕ ತುಂಗಾ ನದಿಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆಯೊಂದು ನಡೆದಿದೆ.

ತಂದೆಯ ಜೊತೆ ಸ್ನಾನಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಜಾತ್ರೆಯ ತಯಾರಿ ಬಿರುಸಿನಿಂದ ಸಾಗುತ್ತಿರುವ ಹಿನ್ನಲೆಯಲ್ಲಿ ಅಂಗಡಿ ಮಳಿಗೆ ಹಾಕಲು ದೇಶಾದ್ಯಂತ ವ್ಯಾಪಾರಿಗಳು ಪ್ರತಿ ವರ್ಷವೂ ಬರುವುದು ಸಾಮಾನ್ಯವಾಗಿದೆ. ಹೀಗೆ ಬಂದಿದ್ದ ಈ ಬಿಹಾರಿ ಮೂಲದ ಕುಟುಂಬದಲ್ಲಿ ಈ ಆಘಾತ ಸಂಭವಿಸಿದೆ.

ಮೃತ ಬಾಲಕನ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ. ಮುಳುಗು ತಜ್ಞ ಪ್ರಮೋದ್ ಪೂಜಾರಿ, ಅಗ್ನಿಶಾಮಕ ದಳ, ಪೋಲೀಸರು ಮತ್ತು ಸ್ಥಳೀಯರು ಇದ್ದಾರೆ.

Leave a Reply

Your email address will not be published. Required fields are marked *