ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಾರ ಮಾಜಿ ಸಚಿವ ಹರತಾಳು ಹಾಲಪ್ಪ..!!???
ಮುಂಬರು ಸಾರ್ವತ್ರಿಕ ಚುನಾವಣೆಯಲ್ಲಿ 2019ರ ಚುನಾವಣೆಯಂತೆ ಅಭೂತಪರ್ವ ಗೆಲುವು ಸಾಧಿಸಿ ದೇಶಕ್ಕೆ 3ನೇ ಬಾರಿಗೆ ನರೇಂದ್ರ ಮೋದಿಯನ್ನ ಪ್ರಧಾನಿ ಮಾಡಲು ರಾಜ್ಯದಿಂದ ಅಧಿಕ ಸ್ಥಾನಗಳನ್ನು ಕೊಡುಗೆಯಾಗಿ ನೀಡಲು ಬಿಜೆಪಿ ಸಜ್ಜಾಗುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅನಂತ್ ಕುಮಾರ್ ಹೆಗ್ಡೆ ಅವರು ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆ ಬಹುದೊಡ್ಡದಾಗಿ ಕ್ಷೇತ್ರ ಮತದಾರರನ್ನು ಕಾಡುತ್ತಿದೆ. ಆದರೆ ಏಳು ಬಾರಿ ಗೆದ್ದು ಬಂದಿರುವ ಹೆಗ್ಡೆ ಅವರು ಚುನಾವಣೆಗೆ ಸ್ಪರ್ಧೆಯೇ ಪ್ರಶ್ನಾರ್ಥವಾಗಿದೆ.
ಒಂದು ವೇಳೆ ಅನಂತ್ ಕುಮಾರ್ ಹೆಗ್ಡೆ ಸ್ಪರ್ಧಿಸದಿದ್ದಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಗೆ ಬಿಜೆಪಿಯಲ್ಲಿ ಈ ಬಾರಿ ಟಿಕೆಟ್ ಫೈಟ್ ಶುರುವಾಗಿದೆ.ರೂಪಾಲಿ ನಾಯ್ಕ್ ,ಕಾಗೇರಿ ಸೇರಿದಂತೆ ಹಲವು ನಾಯಕರು ತಮಗೆ ಟಿಕೆಟ್ ಕೊಡಿ ಅಂತ ಬೇಡಿಕೆ ಇಟ್ಟಿದ್ದಾರೆ ಆದರೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಸಚಿವ ಹರತಾಳು ಹಾಲಪ್ಪ ರವರಿಗೆ ಟಿಕೆಟ್ ದೊರೆಯಲಿದೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಇತ್ತೀಚೆಗೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕ್ರೀಯಾಶೀಲರಾಗಿರುವ ಹರತಾಳು ಹಾಲಪ್ಪ ಪಕ್ಷದ ಹಲವಾರು ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಪಕ್ಷದ ಟಿಕೆಟ್ ದೊರೆಯಬಹುದು ಎನ್ನುವ ವಿಚಾರಕ್ಕೆ ಪೂರಕವಾಗಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಕರ್ನಾಟಕದಲ್ಲಿ ಬಿಜೆಪಿಯ ಭದ್ರಕೋಟೆ ಎಂದು ಕರೆಯಿಸಿಕೊಂಡಿದೆ. ಏಕೆಂದರೆ 1999ರ ಸಾರ್ವತ್ರೀಕ ಚುನಾವಣೆ ಹೊರತು ಪಡಿಸಿದರೆ ಮತ್ತೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಪಡೆದಿಲ್ಲ. ಕೈ ಪಾಳಯಕ್ಕೆ ಈ ಕ್ಷೇತ್ರ ಇದುವರೆಗೂ ಮರಿಚಿಕೆಯಾಗಿದೆಯೇ ಉಳಿದಿದೆ. ಅನಂತ್ ಕುಮಾರ್ ಹೆಗ್ಡೆ ಅವರು ಸತತವಾಗಿ ಈ ಕ್ಷೇತ್ರದಲ್ಲಿ ಲೋಕಸಭೆಗೆ ಆರಿಸಿ ಬರುತ್ತಿದ್ದಾರೆ.
ಮಾರ್ಗರೇಟ್ ಆಳ್ವ ಅವರು ಒಮ್ಮೆ ಕ್ಷೇತ್ರದಿಂದ ಗೆದ್ದಿರುವುದನ್ನು ಹೊರತುಪಡಿಸಿದರೆ ಮತ್ತೆ ಕಾಂಗ್ರೆಸ್ ಯಾವುದೇ ಅಭ್ಯರ್ಥಿ ಗೆಲುವು ಪಡೆದುಕೊಳ್ಳಲು ಆಗಿಲ್ಲ. 1996 ರಿಂದಲೂ ಈ ಕ್ಷೇತ್ರ ಕಮಲ ಪಡೆಯ ವಶದಲ್ಲಿದೆ. 1996, 1998, 2004, 2009, 2014, 2019ರಲ್ಲಿ ಸತತವಾಗಿ ಅನಂತ್ ಕುಮಾರ್ ಹೆಗ್ಡೆ ಅವರು ಕ್ಷೇತ್ರದಲ್ಲಿ ಗೆಲುವು ಪಡೆದಿದ್ದಾರೆ.
ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿದ್ದರು ಬಿಜೆಪಿ ಬ್ರಾಹ್ಮಣ ಸಮುದಾಯಕ್ಕೆ ಕ್ಷೇತ್ರದಲ್ಲಿ ಮಣೆ ಹಾಕುತ್ತಾ ಬಂದಿದೆ. ಆದರೆ ಕಾಂಗ್ರೆಸ್ ಕ್ಷೇತ್ರದಲ್ಲಿ ಹಲವು ಪ್ರಯೋಗಗಳನ್ನು ಮಾಡಿಕೊಂಡು ಬಂದಿದೆ. ಈಡಿಗ, ಎಸ್ಟಿ-ಎಸ್ಟಿ ಹಾಗೂ ಮೊಗವೀರ, ಬುಡಗಟ್ಟು ಸಮುದಾಯದ ಮತಗಳು ಇಲ್ಲಿ ಪ್ರಾಬಲ್ಯವನ್ನು ಹೊಂದಿದ್ದು, ಬ್ರಾಹ್ಮಣ ಸಮುದಾಯದ ಮತಗಳು ಹಾಗೂ ಬೆಳಗಾವಿಯ ಎರಡು ಭಾಗದ ಎರಡು ಮತ ಕ್ಷೇತ್ರಗಳು ಸೇರ್ಪಡೆ ಆಗಿರುವುದರಿಂದ ಇಲ್ಲಿ ಮರಾಠ ಸಮುದಾಯ ಮತಗಳು ನಿರ್ಣಯವಾಗಿದೆ.
ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಹರತಾಳು ಹಾಲಪ್ಪ ಈಡಿಗ ಮತದಾರರು ಪ್ರಾಬಲ್ಯವಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತರಾ ಕಾದು ನೋಡಬೇಕಾಗಿದೆ……
🔵ರಫ಼ಿ ರಿಪ್ಪನ್ಪೇಟೆ