Ripponpete | ಅಂತರಾಷ್ಟ್ರೀಯ SQAY(ಕರಾಟೆ) ಪಂದ್ಯಾವಳಿಗೆ ಯುವ ಪ್ರತಿಭೆ ನಿಯಾಜ್ ನಾಸೀರ್ ಆಯ್ಕೆ
ರಿಪ್ಪನ್ಪೇಟೆ : ಮುಂದಿನ ತಿಂಗಳು ಥೈಯ್ಲಾಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ SQAY ಪಂದ್ಯಾವಳಿಗೆ ಪಟ್ಟಣದ ನಿಯಾಜ್ ನಾಸಿರ್ ಆಯ್ಕೆಯಾಗಿದ್ದಾರೆ.
ಪಟ್ಟಣದ ತೀರ್ಥಹಳ್ಳಿ ರಸ್ತೆಯ ಕುವೆಂಪು ನಗರದ ನಿವಾಸಿಗಳಾದ ನಾಸಿರ್ ಹಾಗೂ ಜೀನತ್ ದಂಪತಿಗಳ ಪುತ್ರನಾದ ನಿಯಾಜ್ ಕೋಣಂದೂರು NRS ಶಾಲೆಯಲ್ಲಿ ಒಂಬತ್ತನೇ ತರಗತಿ ವ್ಯಾಸಾಂಗ ಮಾಡುತಿದ್ದಾನೆ.
1111111
ಜನವರಿ 18 ರಿಂದ 20 ರವರೆಗೆ ಮಹರಾಷ್ಟ್ರ ರಾಜ್ಯದ ಶಿರಡಿಯಲ್ಲಿ ನಡೆದ SQAY MARTIAL ART NATIONAL CHAMPIONSHIP ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ನಿಯಾಜ್ ನಾಸಿರ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ಅಂತರಾಷ್ಟ್ರೀಯ SQAY ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ.
ಈಗಾಗಲೇ ರಾಷ್ಟ್ರ ಮಟ್ಟದ 6 ಗೋಲ್ಡ್ ಮೆಡಲ್ ಹಾಗೂ ರಾಜ್ಯ ಮಟ್ಟದ 2 ಗೋಲ್ಡ್ ಮೆಡಲ್ ಪಡೆದಿರುವ ನಿಯಾಜ್ ನಾಸಿರ್ ಗೆ ತರಬೇತುದಾರ ಗ್ರ್ಯಾಂಡ್ ಮಾಸ್ಟರ್ ಡಾ ಶ್ಯಾನ್ ಮುಹೀಬ್ ಎ ಜೆ ರವರ ಮಾರ್ಗದರ್ಶನವಿದೆ.
AZ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮಹರಾಷ್ಟ್ರದ ಶಿರಡಿಯಲ್ಲಿ ಮೊದಲನೇ ಬಾರಿಗೆ ಜನವರಿ 18 ರಿಂದ 20 ರವರೆಗೆ ಆಯೋಜಿಸಿದ್ದ
SQAY MARTIAL ART NATIONAL CHAMPIONSHIP ಪಂದ್ಯಾವಳಿಯಲ್ಲಿ SQAY ವಿಭಾಗದಲ್ಲಿ “ಕೌಶಲ್” ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ SQAY “ಗುಂಪು ಕೌಶಲ್” ದ್ವಿತೀಯ ಸ್ಥಾನ ಗಳಿಸುವ ಮೂಲಕ ಎರಡು ಬೆಳ್ಳಿ ಪದಕವನ್ನು ಬಾಚಿಕೊಂಡಿದ್ದಾನೆ.
ಮುಂದಿನ ತಿಂಗಳ ಕೊನೆಯಲ್ಲಿ ಥೈಯ್ಲಾಂಡ್ ನಲ್ಲಿ ಅಂತರಾಷ್ಟ್ರೀಯ ಪಂದ್ಯಾವಳಿ ನಡೆಯಲಿದ್ದು ಆ ಕ್ರೀಡಾಕೂಟದಲ್ಲಿ SQAY ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾನೆ.
ನಿಯಾಜ್ ನಾಸಿರ್ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ನಂತರ ಹುಬ್ಬಳಿಯಲ್ಲಿ ನಡೆದ ವಿಭಾಗ ಮಟ್ಟದ ಕರಾಟೆ ಪಂದ್ಯಾವಳಿಯಲ್ಲೂ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದನು.ನಂತರ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು SQAY ವಿಭಾಗಕ್ಕೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದನು.
ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವಲ್ಲಿ ಸಹಕರಿಸಿದ ಶ್ಯಾನ್ ಮುಹೀಬ್ ಹಾಗೂ ತರಬೇತುದಾರರಾದ ನವೀನ್ ಸೆನ್, ಮಂಜು ಸೆನ್ ಹಾಗೂ NRS ಕೋಣಂದೂರು ಶಾಲೆಯ ನಿವೃತ ಪ್ರಾಂಶುಪಾಲ ದಿವಂಗತ ಗಣೇಶ್ ಮೂರ್ತಿ ಹಾಗೂ ಎಲ್ಲಾ ಶಿಕ್ಷಕ ವರ್ಗದವರಿಗೆ ಯುವ ಪ್ರತಿಭೆ ನಿಯಾಜ್ ನಾಸಿರ್ ಧನ್ಯವಾದಗಳನ್ನು ಅರ್ಪಿಸಿದ್ದಾನೆ.
ಒಟ್ಟಾರೆಯಾಗಿ ಗ್ರಾಮೀಣ ಪ್ರದೇಶದ ಯುವ ಪ್ರತಿಭೆ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಚಾಪನ್ನು ಮೂಡಿಸುವಲ್ಲಿ ಯಶಸ್ವಿ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕರಾಟೆ ಪಂದ್ಯಾವಳಿಯಲ್ಲಿ ಹಲವಾರು ವಿಧಗಳಿದ್ದು ಅದರಲ್ಲಿ SQAY ವಿಭಾಗವು ಅತ್ಯಂತ ಕಠಿಣವಾದ ಸ್ಪರ್ಧೆಯಾಗಿದ್ದು ಇಂತಹ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಹಲವಾರು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲೂ ತನ್ನ ಚಾಪನ್ನು ಒತ್ತಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇಂತಹ ಯುವ ಪ್ರತಿಭೆ ನಿಯಾಜ್ ನಾಸಿರ್ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗವು ಅಭಿನಂದನೆಗಳನ್ನು ಸಲ್ಲಿಸುತ್ತದೆ