ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ , ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ಸಿಹಿಜೇನಿ ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಚಿಕ್ಕಜೇನಿ ಗ್ರಾಮದಲ್ಲಿ ಅಣಬೆ ಕೃಷಿಯ ಬಗ್ಗೆ ವಿಧಾನ ಪ್ರಾತ್ಯಕ್ಷಿಕೆಯನ್ನು ಹಾಗೂ ಗುಂಪು ಚರ್ಚೆಯನ್ನು ನಡೆಸಿದರು.
ಈ ಕಾರ್ಯಕ್ರಮದಲ್ಲಿ ಸಂಕ್ಷಿಪ್ತವಾಗಿ ಅಣಬೆಯ ಬಗ್ಗೆ ಅಣಬೆಯಲ್ಲಿರುವ ಪೋಷಕಾಂಶಗಳ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ವಿಧಾನ ಪ್ರಾತ್ಯಕ್ಷಿಕೆಯಲ್ಲಿ ರೈತರು ಮನೆಯಲ್ಲಿಯೇ ಸುಲಭವಾಗಿ ಅಣಬೆ ಬೆಳೆಸಲು ಬೇಕಾದ ಸಾಮಗ್ರಿಗಳ ಬಗ್ಗೆ ತಿಳಿಸಿದರು.
ಮೊದಲು ಭತ್ತದ ಹುಲ್ಲನ್ನು 1 ಇಂಚಿನಷ್ಟು ಉದ್ದಕ್ಕೆ ಕತ್ತರಿಸಬೇಕು ನಂತರ ಅದನ್ನು ನೀರಿನಲ್ಲಿ 12 ಗಂಟೆಗಳ ಕಾಲ ನೆನೆಸಬೇಕು ಹಾಗೂ 1 ಗಂಟೆಯ ಕಾಲ ಬೇಯಿಸಿ ನೆರಳಿನಲ್ಲಿ ಒಣಗಿಸಿ ನಂತರ ಭತ್ತದ ಹುಲ್ಲು ತುಂಬಿದ ಪಾಲಿಥೀನ್ ಕವರ್ ಗಳಲ್ಲಿ ಅಣಬೆ ಬೀಜಗಳನ್ನು ಹಂತ ಹಂತವಾಗಿ ಹಾಕಬೇಕೆಂದು ಅಣಬೆ ಬೆಳೆಯುವ ವಿಧಾನವನ್ನು ಹೇಳಿಕೊಡಲಾಯಿತು.
ಆಸಕ್ತ ರೈತರು ಅದರ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡರು.