Nagara | ಬಿದನೂರು ಸುತ್ತಮುತ್ತ ಅಕ್ರಮ ನಿಧಿಶೋಧದಲ್ಲಿ ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಕೈವಾಡ – ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಆರೋಪ

ಬಿದನೂರು ಸುತ್ತಮುತ್ತ ನಿಧಿ ಕಳ್ಳತನದಲ್ಲಿ ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಕೈವಾಡ – ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಆರೋಪ


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರು ನಗರದ ಹಲವು ಪ್ರದೇಶದಲ್ಲಿ ಅಕ್ರಮವಾಗಿ ನಿಧಿಶೋಧ ಪ್ರಕರಣದಲ್ಲಿ ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಕೈವಾಡವಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ತಾಲೂಕ್ ಬಿಜೆಪಿ ಯುವ ಮೊರ್ಚ ಅಧ್ಯಕ್ಷ ನಿತಿನ್ ನಡೆಸುತ್ತಿರುವ ಗುಂಡಾಗಿರಿ ದೌರ್ಜನ್ಯವನ್ನು ಬಿಜೆಪಿ ನಾಯಕರು  ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಇಲ್ಲಿ ನಡೆದ ನಡೆದ ಗಲಾಟೆಯ ಬಗ್ಗೆ ಸ್ಥಳೀಯವಾಗಿ ವಿಚಾರಿಸಿ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು ಅದನ್ನು ಹೊರತು ಪಡಿಸಿ ಏಕಾಏಕಿ ಕಾಂಗ್ರೆಸ್ ಪಕ್ಷದ ವಿರುದ್ದ ಪ್ರತಿಭಟನೆ ಮಾಡುವುದು ಸರಿಯಲ್ಲ ಮಾಜಿ ಶಾಸಕ ರು,ಹಿರಿಯರು ಆದ ಸ್ವಾಮಿರಾವ್  ಹೆಸರಿಗೆ ಗೌರವ ತರುವ ಕೆಲಸ ಸುರೇಶ್ ಸ್ವಾಮಿ ರಾವ್ ಮಾಡಬೇಕು. ನಗರ ಸುತ್ತ ಮುತ್ತಲು ಹಲವಾರು ಪ್ರದೇಶದಲ್ಲಿ ನಿಧಿ ಶೋದನೆ ಮಾಡಲಾಗಿದೆ.ಇದರಲ್ಲಿ ಸುರೇಶ್ ಸ್ವಾಮಿರಾವ್ ನೇರ ಕೈವಾಡವಿದೆ ಈ ಬಗ್ಗೆ ತನಿಖೆ ನಡೆಯಲಿ, ಕಳೆದ ಬಾರಿ ಸುಡೂರು ರೇಲ್ವೆ ಗೇಟೆ ಬಳಿ ಕುಡಿದು ದಾಂದಲೆ ಮಾಡಿ ಜಿಪಂ ಸದಸ್ಯ ಸ್ಥಾನಕ್ಕೆ ಅಗೌರವ ತಂದಿರುವುದನ್ನು ಜನತೆ ನೋಡಿದ್ದಾರೆ.ಇಂತಹವರಿಂದ ಪಾಠ ಕೇಳುವ ಪರಿಸ್ಥಿತಿ ನಗರ ಹೋಬಳಿ ಜನತೆಗೆ ಬಂದಿಲ್ಲ ಎಂದರು.


 ಕಾಂಗ್ರೆಸ್ ಮುಖಂಡ ಕರುಣಕರ್ ಶೆಟ್ಟಿ ಮಾತನಾಡಿ ಯುವಮೋರ್ಚಾ ಅಧ್ಯಕ್ಷ ನಿತಿನ್ ಗೆ ಹಿಂದುತ್ವದ ಹೆಸರಿನಲ್ಲಿ ,ಗೋ ರಕ್ಷಣೆ ಹೆಸರಿನಲ್ಲಿ ರಾತ್ರಿ ವೇಳೆ ಸಾರ್ವಜನಿಕರ ವಾಹನ ತಡೆದು ತಪಾಸಣೆ ನಡೆಸಲು ಹಕ್ಕು ಕೊಟ್ಟವರು ಯಾರು,ಕೃಷಿ  ಕಾರ್ಮಿಕರ ಮೇಲೆ ಹಲ್ಲೆ ನಡೆಸಿದವರು ಯಾರು,ತಮ್ಮ ವಾಹನಕ್ಕೆ ಸೈಡ್ ನೀಡಿಲ್ಲ ಎಂದು ಕೆ ಎಸ್ ಆರ್ ಟಿ ಬಸ್ ಚಾಲಕನ ಮೇಲೆ ಚಿಕ್ಕಪೇಟೆ ಸರ್ಕಲ್ ನಲ್ಲಿ ಹಲ್ಲೆ ನಡೆಸಿದ ನಿತಿನ್ ಮತ್ತು ಅವನ ತಮ್ಮ ನವೀನ್ ಕುರಿತು ಸ್ಥಳಿಯವಾಗಿ ವಿಚಾರಿಸ ಬೇಕು ಸತ್ಯಸತ್ಯತೆ ತಿಳಿದು ಮಾತನಾಡುವ ನೈತಿಕತೆ  ಬಿಜೆಪಿ ನಾಯಕರು ಅರಿತು ಕೊಳ್ಳಬೇಕು  ಯಾವೂದೋ ಕುಲಕ್ಷ ಕಾರಣಕ್ಕೆ  ಡಿಸೆಂಬರ್ ರಾತ್ರಿ ಒಂದೂವರೆ ಎರಡು ಗಂಟೆ ಸಮಯದಲ್ಲಿ ಜಗಳವಾಡಿಕೊಂಡ ಯುವಕರನ್ನು ಬುದ್ದಿ ಹೇಳಿ ಸರಿಪಡಿಸುವುದನ್ನು ಬಿಟ್ಟು ರಾಜಕೀಯ ಬಣ್ಣ ಕಟ್ಟಬಾರದು ಇದು ಬಿಜೆಪಿ ನಾಯಕರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ, ಎರಡು ಕಡೆಯ ವ್ಯಕ್ತಿಗಳ ಮೇಲೆ ಕೇಸ್ ದಾಖಲಿಸಿ ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದರು.

ಯುವ ಮುಖಂಡ ಗೋಪಾಲ ಶೆಟ್ಟಿ ಮಾತನಾಡಿ ಚಿಕ್ಕಪೇಟೆ ಗಣಪತಿ ವಿಸರ್ಜನೆಯ ವೇಳೆ ದೊಣ್ಣೆಗಳೊಂದಿಗೆ ಮೆರವಣಿಗೆ ನುಗ್ಗಿ ದಾಂದಲೆ ಎಬ್ಬಿಸಿದ್ದು ಗೂಂಡಾಗಿರಿಯಲ್ಲವೇ,  ಶಿವಮೊಗ್ಗ ರಸ್ತೆಯ  ಸುಮಾರು ರೈಲ್ವೆಗೇಟ್ ಬಳಿ ಕುಡಿದು ರೈಲ್ವೆ ಸಿಬ್ಬಂದಿಗಳಿಗೆ ಥಳಿಸಿದ್ದು ಗೊಂಡಾಗಿರಿಯಲ್ಲವೇ, ನಿಧಿ ಚೋರರನ್ನು ಜೊತೆಯಲ್ಲಿರಿಸಿಕೊಂಡು ಪ್ರತಿಭಟನೆ ನಡೆಸುವುದು ಯಾವ ಪುರುಷಾರ್ಥ ..? ಸರ್ಕಾರಿ ಆಸ್ಪತ್ರೆ ವೈಧ್ಯರನ್ನು ಉದ್ದೇಶ ಪೂರ್ವಕವಾಗಿ ವರ್ಗವಣೆ ಮಾಡಿಸಿ ನಗರ ಭಾಗದ ಜನತೆ ವೈದ್ಯರ ಸೇವೆ ವಂಚಿತರನ್ನಾಗಿ ಮಾಡಿದ್ದು ಬಿಜೆಪಿಯ ನಾಯಕರ ಸಾಧನೆ  ಎಂದು ಅಕ್ರೋಶ ವ್ಯಕ್ತ ಪಡಿಸಿದರು.

ಈ ಸಂದರ್ಬದಲ್ಲಿ ಗ್ರಾಮ ಪಂಷಾಯಿತಿ ಸದಸ್ಯ ಪವನ ,ಹಿಲ್ಕಿಂಜಿ ಕುಮಾರ್, ಆರ್ಯ ಈಡಿಗ ಸಮಾಜ ಮುಖಂಡ ಗಣಪತಿ,ಚಂದ್ರಪ್ಪ , ಸುಬಾಷ್, ಕಟ್ಟಿನಹೋಳೆ ಗೋಪಾಲ, ಕಿಶೋರ್ ವಿಠೋಬ,ರಮೇಶ್, ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕತರು ಇದ್ದರು.

Leave a Reply

Your email address will not be published. Required fields are marked *