Headlines

Hosanagara | ಸಾವಿನಲ್ಲೂ ಒಂದಾದ ವೃದ್ದ ದಂಪತಿಗಳು – ಪತಿಯ ಸಾವಿನ ಸುದ್ದಿ ತಿಳಿಯುತಿದ್ದಂತೆ ಪತ್ನಿಯೂ ನಿಧನ

Hosanagara | ಸಾವಿನಲ್ಲೂ ಒಂದಾದ ವೃದ್ದ ದಂಪತಿಗಳು – ಪತಿಯ ಸಾವಿನ ಸುದ್ದಿ ತಿಳಿಯುತಿದ್ದಂತೆ ಪತ್ನಿಯೂ ನಿಧನ


ತುಂಬು ಜೀವನ ನಡೆಸಿದ ಸತಿ-ಪತಿಗಳಿಬ್ಬರು ಸಾವಿನಲ್ಲೂ ಒಂದಾಗಿರುವ ಚಿತ್ರಣವೊಂದು ಹೊಸನಗರದಲ್ಲಿ ನಡೆದಿದೆ.ಹೌದು!ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಾವಂತೂರು ಗ್ರಾಮದಲ್ಲಿ ಇಂಥಹ ಚಿತ್ರಣವೊಂದು ಕಂಡು ಬಂದಿದೆ. ಹೊಳೆಯಪ್ಪ (90) ಹಾಗೂ ಗಂಗಮ್ಮ(80) ಇವರಿಬ್ಬರೂ ಸಾವಿನಲ್ಲಿ ಒಂದಾದ ದಂಪತಿಗಳಾಗಿದ್ದಾರೆ.

ಹೊಸನಗರ ತಾಲೂಕು ಮುಂಬಾರು  ಗ್ರಾಮ ಪಂಚಾಯಿತಿ ಸಾವಂತೂರು ಗ್ರಾಮ ಸಾಲತೋಡೆಯ ಕೃಷಿ  ಕಾರ್ಮಿಕ ದಂಪತಿಗಳಾದ 90ರ ಹರೆಯದ ಹೊಳೆಯಪ್ಪ ಹಾಗೂ 84ರ ಗಂಗಮ್ಮ ದಂಪತಿಗಳು ಗುರುವಾರ ಬೆಳಗಿನ ಜಾವ ಒಂದು ಗಂಟೆಯ ಅಂತರದಲ್ಲಿ ಮೃತಪಟ್ಟು ಸಾವಿನಲ್ಲೂ ಒಂದಾಗಿದ್ದಾರೆ.

ಪತಿ ಹೊಳೆಯಪ್ಪನವರು ಅನಾರೋಗ್ಯದಿಂದ ಮೃತಪಟ್ಟ ವಿಷಯ ತಿಳಿಯುತಿದ್ದಂತೆ  ಪತ್ನಿ ಗಂಗಮ್ಮ ತೀವ್ರ ಹೃದಯಘಾತದಿಂದ ಗಂಡನೊಂದಿಗೆ ಇಹಲೋಕ ತ್ಯಜಿಸಿರುವುದಾಗಿ ತಿಳಿದು ಬಂದಿದೆ.

ಮೃತ ದಂಪತಿಗಳು  ಇಬ್ಬರು ಗಂಡು ಗಂಡು ಐವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗ ಬಿಟ್ಟಗಲಿದ್ದಾರೆ.

ಮೃತ ದಂಪತಿಗಳ ನಿಧನಕ್ಕೆ ಮುಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *