Ripponpete | ಜಮೀನು ವ್ಯಾಜ್ಯ – ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ – ಪ್ರಕರಣ ದಾಖಲು
ಜಮೀನು ವ್ಯಾಜ್ಯದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಮಳಲಿಕೊಪ್ಪದಲ್ಲಿ ನಡೆದಿದೆ.
ಮಳಲಿಕೊಪ್ಪದ ನಾಗೇಶ್ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಘಟನೆಗೆ ಸಂಬಂದಿಸಿದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಳಲಿಕೊಪ್ಪದ ಯೋಗೇಂದ್ರಪ್ಪ ಹಾಗೂ ಸರಸ್ವತಿ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನಲೆ :
ಹಲ್ಲೆಗೊಳಗಾದ ನಾಗೇಶ್ ಹಾಗೂ ಯೋಗೇಂದ್ರಪ್ಪ ರವರ ಕುಟುಂಬಕ್ಕೂ ಜಮೀನು ವಿಚಾರವಾಗಿ ಮನಸ್ತಾಪವಿದ್ದು 01/12/2023 ರಂದು ಮಳಲಿಕೊಪ್ಪ ಗ್ರಾಮದ ಸರ್ವೆ ನಂ 54ರ ಭತ್ತದ ಗದ್ದೆಯಲ್ಲಿ ಹೋಗುತಿದ್ದಾಗ ಗಾಯಾಳು ನಾಗೇಶ್ ಚಿಕ್ಕಪ್ಪನಾದ ಯೋಗೇಂದ್ರಪ್ಪ ಮತ್ತು ಅವರ ಹೆಂಡತಿ ಸರಸ್ಕೃತಿ ಕ್ಷುಲ್ಲಕ ಕಾರಣಕ್ಕೆ ಅವಾಚ್ಯವಾಗಿ ನಿಂದಿಸಿ ನಾಗೇಶ್ ಮೇಲೆ ಬೇಲಿಯ ಗೂಟದಿಂದ ಎಡ ಕೈ ,ತಲೆ ಹಾಗೂ ಎಡ ಕಿವಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಗಲಾಟೆಯ ಶಬ್ದ ಕೇಳಿ ನಾಗೇಶ್ ತಂದೆ ಲಿಂಗಪ್ಪ ಬಂದು ಜಗಳ ಬಿಡಿಸಿದ್ದಾರೆ. ನಂತರ ಆರೋಪಿತರು ಇನ್ನು ಮುಂದೆ ಜಮೀನಿಗೆ ಕಾಲಿಟ್ಟರೆ ನಿನಗೆ ಇದೇ ದೊಣ್ಣೆಯಿಂದ ಹೊಡೆದು ಸಾಯಿಸುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ,
ಹಲ್ಲೆಯಿಂದ ಗಾಯಗೊಂಡಿದ್ದ ಗಾಯಾಳು ನಾಗೇಶ್ ರನ್ನು ತಕ್ಷಣ ಹೊಸನಗರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ 108 ವಾಹನದಲ್ಲಿ, ಶಿವಮೊಗ್ಗ ಮೆಗಾನ್ ಆಸ್ಪತ್ರೆಗೆ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಘಟನೆಯಲ್ಲಿ ಗಾಯಾಳುವಿನ ಎಡಗೈ ಮುರಿತವಾಗಿದೆ.