w
Headlines
Home » ಮೂರು ಮುತ್ತು ನಾಟಕದ ಕೀಕೀ ರಮನಾಥ ಪಾತ್ರಧಾರಿ ಅಶೋಕ್ ಶಾನಭಾಗ್ ನಿಧನ | mooru mutthu

ಮೂರು ಮುತ್ತು ನಾಟಕದ ಕೀಕೀ ರಮನಾಥ ಪಾತ್ರಧಾರಿ ಅಶೋಕ್ ಶಾನಭಾಗ್ ನಿಧನ | mooru mutthu

ಮೂರು ಮುತ್ತು ನಾಟಕದ ಕೀಕೀ ರಮನಾಥ ಪಾತ್ರಧಾರಿ ಅಶೋಕ್ ಶಾನಭಾಗ್ ನಿಧನ
ಕುಂದಾಪುರದ ರೂಪಕಲಾ ನಾಟಕ ತಂಡದ ಮೂರು ಮುತ್ತು ಖ್ಯಾತಿಯ ಅಶೋಕ್ ಶಾನಭಾಗ್ ರವರು ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇವರು ಮೂರು ಮುತ್ತು, ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಸೇರಿದಂತೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು.

ಮೂರು ಮುತ್ತು ಎಂಬ ನಾಟಕದ ಮುಖಾಂತರ ರಿಪ್ಪನ್‌ಪೇಟೆ, ಹೊಸನಗರ ,ತೀರ್ಥಹಳ್ಳಿ ಸೇರಿದಂತೆ ಕರ್ನಾಟಕದದ್ಯಾಂತ ಅನೇಕ ಕಡೆ ಜನರ ಮನಸನ್ನು ಗೆದ್ದಿತ್ತು, ಬೇಸರದ ಸಂಗತಿ ಏನೆಂದರೆ ಮೂರು ಮುತ್ತು ತಂಡದಲ್ಲಿ ಸಂತೋಷ್ ಪೈ, ( Santhosh Pai) ಸತೀಶ್ ಪೈ ರೊಂದಿಗೆ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ  ಕೀ ಕೀ ರಮಾನಾಥ ಎಂಬ ಪಾತ್ರದಿಂದಲೇ ಜನ ಮನ್ನಣೆಗಳಿಸಿದ್ದ  ಅಶೋಕ್ ಶಾನಭೋಗ ಅನಾರೋಗ್ಯಕ್ಕೆ ತುತ್ತಾಗಿ ವಿಧಿವಶರಾಗಿದ್ದಾರೆ.

ಇವರ ಅಪಾರ ಹಾಸ್ಯಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನಮ್ಮ ಮಲೆನಾಡ ಬಾಗದಲ್ಲಿ ಇವರು ಹೆಚ್ಚಿನ ಅಭಿಮಾನಿಗಳನ್ನ ಹೊಂದಿದ್ದರು.

ಇವರ ಅಗಲಿಕೆಯ ಸುದ್ದಿ ಅಪಾರ ಅಭಿಮಾನಿಗಳಿಗೆ ದುಃಖ ಉಂಟುಮಾಡಿದೆ. ಮೃತರ ಅಂತ್ಯ ಸಂಸ್ಕಾರ ಶನಿವಾರ ಬೆಳಗ್ಗೆ ಕುಂದಾಪುರ ದಲ್ಲಿ ನಡೆಯಲಿದೆ. ಕೆಲ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.