Hosanagara | ಅಕ್ರಮ ಮರಳು ಸಾಗಾಟ – ಟಿಪ್ಪರ್ ಲಾರಿ ವಶಕ್ಕೆ

Hosanagara | ಅಕ್ರಮ ಮರಳು ಸಾಗಾಟ – ಟಿಪ್ಪರ್ ಲಾರಿ ವಶಕ್ಕೆ


ಹೊಸನಗರ(Hosanagara) : ಅಕ್ರಮವಾಗಿ ಮರಳು(sand) ಸಾಗಿಸುತಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಸಿಪಿಐ ಗುರಣ್ಣ ಎಸ್ ಹೆಬ್ಬಾಳ್‌ರವರ ಮಾರ್ಗದರ್ಶನದಲ್ಲಿ ತ್ರಿಣಿವೆ(trinive) ಗ್ರಾಮದ ಬಳಿ ಅಕ್ರಮವಾಗಿ ಮರಳು ತುಂಬಿದ ಲಾರಿ ವಶ ಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ತ್ರಿಣಿವೆ ಗ್ರಾಮದ ಬಳಿ ಅಕ್ರಮವಾಗಿ(illegal) ಮರಳು ಸಂಗ್ರಹಣೆ ಕಾರ್ಯ ನಡೆಸುವುದರ ಜೊತೆಗೆ ರಾತ್ರಿ ವೇಳೆಯಲ್ಲಿ ಅಕ್ರಮ ಮರಳು ಸಾಗಟ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದ್ದು ಪೊಲೀಸ್‌ ಸಿಬ್ಬಂದಿಗಳು ಚಂದನ್ ಎಂಬುವವರಿಗೆ ಸೇರಿದ್ದ ಅಕ್ರಮವಾಗಿ ಮರಳು ತುಂಬಿದ್ದ (ಕೆಎ15A2566) ಲಾರಿಯನ್ನು ವಶ ಪಡಿಸಿಕೊಂಡಿದ್ದಾರೆ.

ಈ ಕಾರ್ಯಚರಣೆಯಲ್ಲಿ ಹೊಸನಗರ ಪೊಲೀಸ್ ಠಾಣೆಯ ಎಎಸ್‌ಐ ನಿರಂಜನ್, ಸಿಬ್ಬಂದಿಗಳಾದ ಗಂಗಪ್ಪ ಬಟೋರಿ, ಅವಿನಾಶ್ ಇನ್ನೂ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *