Headlines

ಲೋಕಸಭಾ ಚುನಾವಣೆಗೆ ವಿಜಯೇಂದ್ರ ಟೀಂ ರೆಡಿ – ಮಾಜಿ ಸಚಿವ ಹರತಾಳು ಹಾಲಪ್ಪ ರವರಿಗೆ ಮಹತ್ತರ ಹುದ್ದೆ | BJP

ಲೋಕಸಭಾ ಚುನಾವಣೆಗೆ ವಿಜಯೇಂದ್ರ ಟೀಂ ರೆಡಿ – ಮಾಜಿ ಸಚಿವ ಹರತಾಳು ಹಾಲಪ್ಪ ರವರಿಗೆ ಮಹತ್ತರ ಹುದ್ದೆ | BJP


ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾದ ಬಳಿಕ ಬಿ.ವೈ.ವಿಜಯೇಂದ್ರ ಪಕ್ಷದ ರಾಜ್ಯ ಘಟಕಕ್ಕೆ ನೂತನ ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಮಾಜಿ ಸಚಿವರಾದ ಹರತಾಳು ಹಾಲಪ್ಪ ರವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಪದಾಧಿಕಾರಿಗಳ ವಿವರ :

ರಾಜ್ಯ ಉಪಾಧ್ಯಕ್ಷರು: ಮುರುಗೇಶ್ ನಿರಾಣಿ, ಭೈರತಿ ಬಸವರಾಜ್, ರಾಜುಗೌಡ ನಾಯಕ್, ಎನ್.ಮಹೇಶ್, ಅನಿಲ್ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ಸಂತೋಷ್ ನಾಯಕ್, ಡಾ.ಬಸವರಾಜ ಕೇಲಗಾರ, ಮಾಳವಿಕಾ ಅವಿನಾಶ್, ಎಂ.ರಾಜೇಂದ್ರ.

ರಾಜ್ಯ ಪ್ರಧಾನ ಕಾರ್ಯದರ್ಶಿಗಳು: ವಿ.ಸುನೀಲ್ ಕುಮಾರ್, ಪಿ.ರಾಜೀವ್, ಎನ್.ಎಸ್.ನಂದೀಶ್ ರೆಡ್ಡಿ, ಜೆ.ಪ್ರೀತಮ್ ಗೌಡ. 

ಕಾರ್ಯದರ್ಶಿಗಳು:ಶೈಲೇಂದ್ರ ಬೆಲ್ದಾಳೆ, ಡಿ.ಎಸ್.ಅರುಣ್, ಬಸವರಾಜ ಮತ್ತೀಮೋಡ್, ಸಿ.ಮುನಿರಾಜು, ವಿನಯ್ ಬಿದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶರಣು ತಳ್ಳಿಕೇರಿ, ಲಲಿತಾ ಅನಾಪುರ, ಡಾ.ಲಕ್ಷ್ಮಿ ಅಶ್ವಿನ್ ಗೌಡ, ಅಂಬಿಕಾ ಹುಲಿನಾಯ್ಕರ್. ರಾಜ್ಯ ಖಜಾಂಚಿ: ಸುಬ್ಬ ನರಸಿಂಹ. 

ಮೋರ್ಚಾಗಳ ರಾಜ್ಯ ಅಧ್ಯಕ್ಷರು: 

ಮಹಿಳಾ ಮೋರ್ಚಾ-ಸಿ.ಮಂಜುಳಾ

ಯುವ ಮೋರ್ಚಾ-ಧೀರಜ್ ಮುನಿರಾಜು

ಎಸ್.ಟಿ.ಮೋರ್ಚಾ-ಬಂಗಾರು ಹನುಮಂತು

ಎಸ್.ಸಿ.ಮೋರ್ಚಾ-ಎಸ್.ಮಂಜುನಾಥ್(ಸಿಮೆಂಟ್ ಮಂಜು)

ಹಿಂದುಳಿದ ವರ್ಗಗಳ ಮೋರ್ಚಾ-ರಘು ಕೌಟಿಲ್ಯ

ರೈತ ಮೋರ್ಚಾ-ಎ.ಎಸ್.ಪಾಟೀಲ್ ನಡಹಳ್ಳಿ

ಅಲ್ಪಸಂಖ್ಯಾತ ಮೋರ್ಚಾ-ಅನಿಲ್ ಥಾಮಸ್

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.