ಯುವಕನ ಕೊಲೆಗೈದು ಆಗುಂಬೆ ಘಾಟಿಯಲ್ಲಿ ಎಸೆದ ಹಂತಕರು – ಏನಿದು ಪ್ರಕರಣ..?? ಈ ಸುದ್ದಿ ನೋಡಿ
ಆಗುಂಬೆ ಘಾಟಿಯಲ್ಲಿ ಅಸ್ಥಿಪಂಜರದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಪ್ಯ ಪೊಲೀಸ್ ಸ್ಟೇಷನ್ನ ಪೊಲೀಸರು ಈ ಶವವನ್ನು ಪತ್ತೆ ಹಚ್ಚಿದ್ದಾರೆ.
ಮೂಲತಃ ಬಾಗಲಕೋಟೆಯ ಜಿಲ್ಲೆ ಬಾದಾಮಿ ಮೂಲದ ವ್ಯಕ್ತಿಯ ಶವ ಇದಾಗಿದೆ. ಅಲ್ಲದೆ ಶವಪತ್ತೆ ಮಾಡುವ ಮೂಲಕ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಹನುಮಂತಪ್ಪ (22) ಎಂಬ ಯುವಕನ ಕೊಳೆತ ಶವ ನಿನ್ನೆ ಶುಕ್ರವಾರ ಪತ್ತೆಯಾಗಿತ್ತು. ಈ ಬಗ್ಗೆ ಇನ್ನಷ್ಟು ಮಾಹಿತಿ ಇದೀಗ ಹೊರಬಿದ್ದಿದ್ದು. ಈತ ಕುಂಬ್ರದಲ್ಲಿರುವ ಅರ್ಥ್ ಮೂವರ್ಸ್ ಕಂಪನಿಯೊಂದರಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ನವೆಂಬರ್ 17 ರಂದು ನಾಪತ್ತೆಯಾಗಿದ್ದ. ಈತನ ಪತ್ತೆಗಾಗಿ ಸಂಪ್ಯ ಠಾಣೆಯಲ್ಲಿ ಕಂಪ್ಲೆಂಟ್ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಕೊಲೆ ಪ್ರಕರಣ ಭೇದಿಸಿದ್ದಾರೆ.
ಈ ಪ್ರಕರಣದ ಸಂಬಂದ ಬಾದಾಮಿ ತಾಲೂಕಿನ ಶಿರೂರು ಗ್ರಾಮದ ಶಿವಪ್ಪ ಹನುಮಪ್ಪ ಮಾದರ, ಮಂಜುನಾಥ ಹನುಮಾದಪ್ಪ ಮಾದರ, ದುರ್ಗಪ್ಪ ಮಾದರನನ್ನ ಬಂಧಿಸಲಾಗಿತ್ತು. ಅವರ ವಿಚಾರಣೆ ವೇಳೆ ಆರೋಪಿಗಳು ಶಂಕಿತರು ಹನುಮಂತಪ್ಪನನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದರಷ್ಟೆ ಅಲ್ಲದೆ ಶವವನ್ನು ವಿಲೇವಾರಿ ಮಾಡಿದ ಸ್ಥಳವನ್ನು ಬಹಿರಂಗಪಡಿಸಿದ್ದರು.
ಈ ನಂತರ ಪೊಲೀಸರು ಆಗುಂಬೆ ಘಾಟಿನಲ್ಲಿ ಯುವಕನನ್ನ ಎಸೆದ ಸ್ಥಳವನ್ನು ಪತ್ತೆಮಾಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.