Hosanagara | ಗೋಪೂಜೆಗಾಗಿ ಇಟ್ಟಿದ್ದ ಬಂಗಾರದ ಸರ ನುಂಗಿದ ಹಸು – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಗೋಪೂಜೆಗಾಗಿ ಇಟ್ಟಿದ್ದ ಬಂಗಾರದ ಸರ ನುಂಗಿದ ಹಸು – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ಹೊಸನಗರ ಇಲ್ಲಿನ ಸಮೀಪದ ಮತ್ತಿಮನೆ  ಶ್ಯಾಮ್ ಉಡುಪ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ಗೋ  ಪೂಜೆಯ ದಿನ ಪೂಜೆಯ ಜೊತೆಗೆ ಇರಿಸಿದ್ದ ಬಂಗಾರದ ಸರ ಕಾಣೆಯಾಗಿತ್ತು.

ಪೂಜೆ ಮುಗಿದ ನಂತರ ಬಂಗಾರದ ಸರ ಕಾಣದೆ ಇದ್ದಾಗ ಪೂಜೆ ಮಾಡಿದ ಸ್ಥಳದ ಅಕ್ಕಪಕ್ಕ ಹಾಗೂ ಕೊಟ್ಟಿಗೆಯಲ್ಲಿ ಹುಡುಕಲಾಗಿತ್ತು ಎಷ್ಟೇ ಹುಡುಕಿದರು ಸರ ಸಿಗದ ಕಾರಣ ಹಸುವೇ ಪ್ರಸಾದ ಜೊತೆಗೆ ನುಂಗಿರಬಹುದೇ ಎಂದು ಸಂಶಯ ಪಟ್ಟಿದ್ದರು.

ಮನೆಯ ಮಾಲೀಕರು ಸಂಶಯ ಪಟ್ಟಂತೆ ಕ್ರಮೇಣ ಹಸು ಮೇವು ತಿನ್ನದನ್ನು ನಿಲ್ಲಿಸಿದಾಗ ಮಾಲಿಕ ಶ್ಯಾಮ್ ಉಡುಪ ಅವರು ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿರುತ್ತಾರೆ.

ಮಾಹಿತಿ ತಿಳಿದ ಕೋಣಂದೂರಿನ ಹಿರಿಯ ಪಶು ವೈದ್ಯಾಧಿಕಾರಿಗಳಾದ ಡಾ ಆನಂದ್ ಜಿ ಅವರು ಸ್ಥಳಕ್ಕೆ ಆಗಮಿಸಿ ಶಸ್ತ್ರ ಚಿಕಿತ್ಸೆ ನಡೆಸಿ ಬಂಗಾರದ ಸರವನ್ನು ಹೊರ ತೆಗೆದಿರುತ್ತಾರೆ.ಹಸು ಆರೋಗ್ಯವಾಗಿದ್ದು ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *