C M ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆಯಲಿ – ಅರ್ ಎ ಚಾಬುಸಾಬ್
ರಿಪ್ಪನ್‌ಪೇಟೆ : ಸಿ ಎಂ ಇಬ್ರಾಹಿಂ ರವರು ಗೌರವಯುತವಾಗಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಹೋಗಲಿ ಅದನ್ನು ಹೊರತುಪಡಿಸಿ ಯಾರದೋ ಮನೆಯಲ್ಲಿ ಯಜಮಾನಿಕೆ ನಡೆಸಲು ಬಂದರೆ ಸಹಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಎ ಚಾಬುಸಾಬ್ ಹೇಳಿದರು.
ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಸಿ ಎಂ ಇಬ್ರಾಹಿಂ ರವರು ರಾಜ್ಯ ಜನತಾದಳ ಮುಖಂಡರ ಚಿಂತನ-ಮಂತನ ಸಭೆ ಕರೆದು ಮಾನ್ಯ ದೇವೇಗೌಡರ ಮತ್ತು ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿರುವುದು ಸರಿ ಅಲ್ಲ. ಪಕ್ಷದವರಲ್ಲದವರ ಮುಂದೆ ದೇವೇಗೌಡರ ಮತ್ತು ಹೆಚ್.ಡಿ. ಕುಮಾರಸ್ವಾಮಿಯವರ ಅಧಿಕಾರದ ಬಗ್ಗೆ ಆಕ್ಷೇಪ ಮಾಡುವ ನೈತಿಕತೆ ಇಬ್ರಾಹಿಂ ಸಹಚರರಿಗೆ ಇರುವುದಿಲ್ಲ.
ಪಕ್ಷಕ್ಕಾಗಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಪಕ್ಷಕಟ್ಟಿ ಬೆಳೆಸಿರುವ ದೇವೇಗೌಡರು ಮತ್ತು ಕುಮಾರ ಸ್ವಾಮಿಯವರು ಯಾರೋ ಕಟ್ಟಿದ ಮನೆಯಲ್ಲಿ ಯಜಮಾನಿಕೆ ಮಾಡುವ ಕೆಟ್ಟ ಪ್ರವೃತ್ತಿ ಸಿಎಂ ಇಬ್ರಾಹಿಂ ಮಾಡಿರುವುದು ಸರಿಯಲ್ಲ.
ಕಳೆದ ಚುನಾವಣೆಯಲ್ಲಿ ರಾಜ್ಯ ಜನತಾದಳದ ಪ್ರಮುಖ ಹುದ್ದೆಗಳನ್ನು ಅಲ್ಪಸಂಖ್ಯಾತರಿಗೆ ನೀಡಿ, ಹಿಜಾಬ್‌ನಂತಹ ಹಲವಾರು ಸಮಸ್ಯೆಗಳು ಬಂದಾಗ ಎದೆತಟ್ಟಿ ನಿಂತು ಹೇಳಿದ್ದು, ಕುಮಾರಸ್ವಾಮಿಯವರು ಬಿಟ್ಟರೆ ಬೇರೆಯಾರು ಇಲ್ಲ. 2006 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮ ಗಲಭೆ ನಡೆದಾಗ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಯಾವರೀತಿ ನಡೆದುಕೊಂಡಿದ್ದಾರೆಂದು ಅಲ್ಲಿಯ ಅಲ್ಪಸಂಖ್ಯಾತರೊಡನೆ ಸಿ,ಎಂ. ಇಬ್ರಾಹಿಂ ಕೇಳಲಿ, ಇಷ್ಟೆಲ್ಲಾ ಅಲ್ಪಸಂಖ್ಯಾತರಿಗೆ ಸಹಾಯ ಮಾಡಿದ್ದರು ಸಹ ಜೆಡಿಎಸ್ ಅಧಿಕಾರಕ್ಕೆ ಬರಲಿಲ್ಲ. ಪಕ್ಷ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಮಾನ್ಯ ಕುಮಾರಸ್ವಾಮಿಯವರು ತೆಗೆದುಕೊಂಡು ನಿರ್ಧಾರ ಅತ್ಯಂತ ಶ್ಲಾಘನೀಯ, ಇದನ್ನು ಬೆಂಬಲಿಸುವುದು ಬಿಟ್ಟು ಹಿಂದಿನ ರಾಜ್ಯಾಧ್ಯಕ್ಷರಾದ ಹೆಚ್. ವಿಶ್ವನಾಥ ಮಾಡಿದ ದಾಟಿಯಲ್ಲೇ ಸಿ.ಎಂ. ಇಬ್ರಾಹಿಂ ಮಾಡಿರುವುದು ಪಕ್ಷಕ್ಕೆ ಮಾಡಿರುವ ದ್ರೋಹವಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಮತ್ತು ಇನ್ನಿತರೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ಜೊತೆ ಮಾಡಿಕೊಂಡಿರುವುದು ಅಲ್ಪಸಂಖ್ಯಾತರ ವಿರುದ್ಧ ಅಲ್ಲ. ಅದು ಪಕ್ಷವನ್ನು ಸಂಘಟಿಸುವ ಬಗ್ಗೆ ಹಾಗೂ ಪಕ್ಷ ತತ್ವಸಿದ್ಧಾಂತ ಉಳಿಸಿಕೊಳ್ಳುವ ದೃಷ್ಟಿಯಿಂದ ಮಾಡಿಕೊಂಡ ಮೈತ್ರಿಯಾಗಿರುತ್ತದೆ.
ಈ ಕೂಡಲೇ ಸಿ.ಎಂ. ಇಬ್ರಾಹಿಂರವರು ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರೊಂದಿಗೆ ಮತ್ತು ಹೆಚ್.ಡಿ. ಕುಮಾರಸ್ವಾಮಿಯವರೊಂದಿಗೆ ಚರ್ಚೆ ನಡೆಸಿ, ಮೈತ್ರಿ ಸೂಕ್ತವಾಗಿದ್ದಲ್ಲಿ ಪಕ್ಷದಲ್ಲೇ ಮುಂದುವರೆಯಲಿ ಇಲ್ಲಾವಾದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತಮ್ಮ ಗೌರವವನ್ನು ಉಳಿಸಿಕೊಳ್ಳಲಿ ಎಂದು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ತಾಲ್ಲೂಕು ಜನತಾದಳ ಅಧ್ಯಕ್ಷ ಎನ್.ವರ್ತೇಶ್, ಜಿಲ್ಲಾ ಉಪಾಧ್ಯಕ್ಷರಾದ ಜಿ.ಎಸ್. ವರದರಾಜ್, ಜಿಲ್ಲಾ ಮುಖಂಡರಾದ ಆರ್.ಎನ್. ಮಂಜುನಾಥ, ದೂನ ರಾಜು, ಮುಂತಾದವರ ಉಪಸ್ಥಿತರಿದ್ದರು.