ಅರಳಸುರುಳಿಯಲ್ಲಿ ಮೂವರು ಸಜೀವ ದಹನ ಪ್ರಕರಣ – ಚಿಕಿತ್ಸೆ ಫಲಿಸದೇ ಮತ್ತೊಬ್ಬ ಕೂಡ ಸಾವು
ತೀರ್ಥಹಳ್ಳಿ : ಭಾನುವಾರ ಬೆಳ್ಳಂಬೆಳಗ್ಗೆ ಮನೆಯೊಂದರಲ್ಲಿ ಮೂರು ಮಂದಿ ಸಜೀವ ದಹನವಾಗಿದ್ದ ಘಟನೆ ತಾಲೂಕಿನ ಅರಳಸುರುಳಿಯಲ್ಲಿ ನೆಡೆದಿತ್ತು. 
ಮನೆಯ ಒಳಗಿನ ಕೋಣೆಯೊಳಗೆ ರಾಘವೇಂದ್ರ ಕೆಕೋಡ್ (65),  ಪತ್ನಿ ನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಸಜೀವವಾಗಿ ದಹನವಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ
ಇನ್ನೋರ್ವ ಪುತ್ರ ಭರತ್ (28) ಕೂಡ ಚಿಕಿತ್ಸೆ ಫಲಿಸದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಒಂದೇ ಕುಟುಂಬದ ನಾಲ್ವರು ಕೂಡ ಸಾವನ್ನಪ್ಪಿದ್ದು ಸಾವಿಗೆ ನಿಖರವಾದ ಕಾರಣ ಇಲ್ಲಿಯವರೆಗೆ ತಿಳಿದುಬಂದಿಲ್ಲ.
		 
                         
                         
                         
                         
                         
                         
                         
                         
                         
                        