Headlines

ಹೊಸನಗರ : ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರ ದಾಳಿ – ಬೈಕ್ ಸಹಿತ ಆರೋಪಿಗಳು ವಶಕ್ಕೆ|arrested

ಹೊಸನಗರ : ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರ ದಾಳಿ – ಬೈಕ್ ಸಹಿತ ಆರೋಪಿಗಳು ವಶಕ್ಕೆ


ಹೊಸನಗರ : ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ನಗದು ಹಣದ ಜೊತೆಗೆ ಬೈಕ್‌ಗಳ ಸಮೇತ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ತಾಲೂಕಿನ ಸೊನಲೆ ಹಾಗೂ ಆಲಗೇರಿಮಂಡ್ರಿ ಗ್ರಾಮದಲ್ಲಿ ಹೊಸನಗರ ಪಿಎಸ್‌ಐ ಶಿವಾನಂದ ಕೆ ನೇತ್ರತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ಪ್ರಕರಣ 1 :




ಹೊಸನಗರ ತಾಲ್ಲೂಕು ಸೊನಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಸರ್ಕಾರಿ ಅರಣ್ಯ, ಜಾಗದಲ್ಲಿ ಸುಮಾರು 07-08 ಜನರು ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿ ಬೈಕ್ ಹಾಗೂ ನಗದು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.


ಆರೋಪಿಗಳಾದ ಸುರೇಶ 49 ವರ್ಷ, ಸತೀಶ 33 ವರ್ಷ, ರಾಜೇಶ ಕೆ.ಎಸ್ ಬಿನ್ 31 ವರ್ಷ, ಸೀತಾರಾಮ 37 ವರ್ಷ,ಚಂದ್ರಶೇಖರ  47 ವರ್ಷ,ಶ್ರೀನಿವಾಸ 52 ವರ್ಷ ಇವರನ್ನು ವಶಪಡಿಸಿಕೊಂಡು ನಗದು ಹಣ – 11700/- ರೂಪಾಯಿ,ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ, 52 ಇಸ್ಪೀಟ್ ಕಾರ್ಡ್ ಗಳು,KA 14 EX 2894 ರ ನಂಬರಿನ ನೀಲಿ ಮತ್ತು ಕಪ್ಪು ಬಣ್ಣದ TVS Star City plus ಬೈಕ್ ,KA 14 EH 4543 ರ ನಂಬರಿನ ಕೆಂಪು ಮತ್ತು ಕಪ್ಪು ಬಣ್ಣದ TVS Star City plus ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ 2 :

ಹೊಸನಗರ ತಾಲೂಕ್ ಆಲಗೇರಿಮಂಡ್ರಿ ಗ್ರಾಮದ ಮನೆಯೊಂದರ ಹಿಂಬದಿಯ ಖಾಲಿ ಜಾಗದಲ್ಲಿ ಸುಮಾರು 5-6 ಜನರು ಹಣವನ್ನು ಪಣಕ್ಕೆ ಇಟ್ಟು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ನಗದು ಸಹಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.




ಆರೋಪಿಗಳಾದ ಎಂ ಶಿವಪ್ಪ ,ಕೆ ರಾಜು ,ಮನ್ಸೂರ್ ,ಸತೀಶ್ ಇವರನ್ನು ವಶಪಡಿಸಿಕೊಂಡು ನಗದು 6030 ರೂ ಗಳನ್ನು ವಶಕ್ಕೆ ಪಡೆಯಲಾಗಿದೆ.

ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ,ಸಿಪಿಐ ಗುರಣ್ಣ ಹೆಬ್ಬಾಳ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಿವಾನಂದ ಕೆ ನೇತ್ರತ್ವದಲ್ಲಿ ಎಎಸೈ ಸುರೇಶ್ ,ಸಿಬ್ಬಂದಿಗಳಾದ ಗಂಗಪ್ಪ ,ಸುನೀಲ್ ,ಸಂದೀಪ್ ,ತೀರ್ಥೇಶ್ ಹಾಗೂ ವಾಹನ ಚಾಲಕ ಅವಿನಾಶ್ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.



Leave a Reply

Your email address will not be published. Required fields are marked *