ಹೊಸನಗರ : ನಗರ ಹೋಬಳಿ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಬೇಡರ ಕಣ್ಣಪ್ಪ ಪಾತ್ರ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತ್ತು.
ಕಾರ್ಯಕ್ರಮದಲ್ಲಿ ನಗರ ಕ್ಲಸ್ಟರ್ ವಿಭಾಗದ ವಿದ್ಯಾರ್ಥಿಗಳು ಹಲವು ರೀತಿಯಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.ಈ ಸಂಧರ್ಭದಲ್ಲಿ ನಗರ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಅನೀಶ್ವ ಆರ್ ಪ್ರದರ್ಶನ ಮಾಡಿರುವ ಬೇಡರ ಕಣ್ಣಪ್ಪ ಪಾತ್ರ ಕಾರ್ಯಕ್ರಮದ ಮೆರಗು ಹೆಚ್ಚಿಸಿತ್ತು.
ಉತ್ತಮ ತರಬೇತಿ ನೀಡಿ ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ಕಾರಣೀಕರ್ತರಾದ ಶಿಕ್ಷಕರು,ಶಾಲಾಭಿವೃದ್ದಿ ಸಮಿತಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.