ಚೈತ್ರಾ ಕುಂದಾಪುರ ಟಿಕೆಟ್ ಡೀಲ್ ಪ್ರಕರಣ – ಗಗನ್ ಕಡೂರೊಂದಿಗೆ  ಶಿವಮೊಗ್ಗದಲ್ಲಿ ಸಿಸಿಬಿ ಮಹಜರ್|
ಶಿವಮೊಗ್ಗ : ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯಿಂದ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ ಮತ್ತು ತಂಡದಲ್ಲಿ ಗುರುತಿಸಿಕೊಂಡಿದ್ದ ಗಗನ್ ಕಡೂರು ಇವರನ್ನು ಸಿಸಿಬಿ ಪೋಲೀಸರು ಇಂದು ಶಿವಮೊಗ್ಗಕ್ಕೆ ಕರೆತಂದು ನಗರದ ಮಥುರಾ ಸೆಂಟ್ರಲ್ ಬಳಿ ಹಾಗು ಜಿ.ಎಸ್.ಕೆ.ಎಮ್ ರಸ್ತೆಯ ಸುತ್ತಮುತ್ತ ಕೆಲ ಸ್ಥಳಗಳಲ್ಲಿ ಮಹಜರು ನಡೆಸಿದ್ದಾರೆ.
ಗಗನ್ ಕಡೂರು ಶಿವಮೊಗ್ಗ ನಗರದಲ್ಲಿ ಉದ್ಯಮಿಯಿಂದ 50ಲಕ್ಷ ರೂಪಾಯಿಗಳನ್ನು ಪಡೆದು ಚೈತ್ರಾ ಕುಂದಾಪುರಕ್ಕೆ ನೀಡಿರುವುದಾಗಿ ತನಿಖೆಯಲ್ಲಿ ಕಂಡು ಬಂದು ಎಫ್.ಐ.ಆರ್ ನಲ್ಲೂ ಸಹ ಇದೇ ಅಂಶಗಳು ದಾಖಲಾಗಿವೆ.
ಪ್ರಕರಣ ಸಂಬಂಧ ಸ್ಥಳ ಮಹಜರ್ ಗಾಗಿ ಸಿಸಿಬಿ ಇನ್ಸಪೆಕ್ಟರ್ ಭರತ್ ಹಾಗು ಸಿಬ್ಬಂದಿಗಳು ಆರೋಪಿ ಗಗನ್ ಕಡೂರುನನ್ನು ಕರೆ ತಂದು ಹಣ ಪಡೆದ ಸ್ಥಳದಲ್ಲಿ ಫೋಟೊ ತೆಗೆದುಕೊಂಡಿದ್ದಾರೆ.
 
                         
                         
                         
                         
                         
                         
                         
                         
                         
                        
