ಕಾಂಗ್ರೆಸ್ ಪಕ್ಷದತ್ತ ವಾಲಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್|jds
ರಾಜ್ಯದಲ್ಲಿ ಆಪರೇಷನ್ ಹಸ್ತದ ಸುಳಿವನ್ನ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರು ನೀಡಿದ್ದಾರೆ. ಅದರ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ನಿಂದ ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್ ಕೂಡ , ಜೆಡಿಎಸ್ನ್ನ ತೊರೆದು ಕಾಂಗ್ರೆಸ್ ತೊರೆದಿದ್ದರು.
ಇದರ ಬೆನ್ನಲ್ಲೆ , ಇದೀಗ ಮತ್ತೊಬ್ಬ ಜೆಡಿಎಸ್ ಮುಖಂಡ ಕಾಂಗ್ರೆಸ್ ಸೇರಲಿದ್ದಾರೆ. ಸದ್ಯ ಜೆಡಿಎಸ್ ಜಿಲ್ಲಾಧ್ಯಕ್ಷರು ಸಹ ಆಗಿರುವ ಎಂ. ಶ್ರಿಕಾಂತ್ ಜೆಡಿಎಸ್ ಸೇರಲಿದ್ದಾರೆ ಎಂಬುವುದಾಗಿ ಅಧಿಕೃತವಾಗಿ ಮಾಹಿತಿ ಬಂದಿದೆ.
ಜೆಡಿಎಸ್ ನ ಎಂ ಶ್ರೀಕಾಂತ್ ಇತ್ತೀಚೆಗೆ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿದ್ದರು. ಅದರಲ್ಲಿಯು ಮುಖ್ಯವಾಗಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ರವರನ್ನು ಭೇಟಿ ಮಾಡಿರುವ ಫೋಟೊ ವೈರಲ್ ಆಗಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ, ನಿನ್ನೆ ಡಿ.ಕೆ.ಶಿವಕುಮಾರ್ರವರ ಜೊತೆಗೆ ಶ್ರೀಕಾಂತ್ ರವರು ಮಾತುಕತೆ ನಡೆಸಿದ್ದು, ಅವರು ಪಕ್ಷ ಸೇರುವ ವಿಚಾರ ತಿಳಿದು ಬಂದಿದೆ.