ಹುಂಚಾ ಗ್ರಾ.ಪಂ.ಅಧ್ಯಕ್ಷರಾಗಿ ಸುಮಂಗಳ ಮಳೂರು ಉಪಾಧ್ಯಕ್ಷರಾಗಿ ವೆಂಕಟೇಶ್ ಆಯ್ಕೆ
ರಿಪ್ಪನ್‌ಪೇಟೆ;-ಸಮೀಪದ ಹುಂಚ ಗ್ರಾಮ ಪಂಚಾಯ್ತಿನ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷೆ ಚುನಾವಣೆಯಲ್ಲಿ ಆಧ್ಯಕ್ಷರಾಗಿ ಸುಮಂಗಳ ದೇವರಾಜ ಮಳೂರು ಉಪಾಧ್ಯಕ್ಷರಾಗಿ ವೆಂಕಟೇಶ್ ಆಯ್ಕೆಯಾಗಿದ್ದಾರೆ.
13 ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯ್ತಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಸುಮಂಗಳ ದೇವರಾಜ್‌ರಿಗೆ 7 ಮತಗಳು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ವೆಂಕಟೇಶ್‌ಗೆ 7 ಮತಗಳು ಬಿದ್ದರೆ ಎದುರಾಳಿಗಳಿಗೆ ತಲಾ 6 ಮತಗಳ ಬಂದಿರುತ್ತದೆ.