ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್‌ ಬುಕಿಂಗ್‌ ಆರಂಭ, ಎಷ್ಟಿದೆ ದರ? ಬುಕ್‌ ಮಾಡುವುದು ಹೇಗೆ?|Airport

ಬೆಂಗಳೂರು – ಶಿವಮೊಗ್ಗ ನಡುವೆ ವಿಮಾನದ ಟಿಕೆಟ್‌ ಬುಕಿಂಗ್‌ ಆರಂಭವಾಗಿದೆ. ಇಂಡಿಗೋ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಸೀಟ್‌ ಕಾಯ್ದಿರಿಸುವ ಅವಕಾಶ ಕಲ್ಪಿಸಿದೆ. ಆ.31ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಲಿದೆ.

ಇಂಡಿಗೋ ವೆಬ್‌ಸೈಟ್‌ನಲ್ಲಿ ಇವತ್ತು ಸಂಜೆಯಿಂದ ಬುಕಿಂಗ್‌ ಆರಂಭವಾಗಿದೆ. ಆ.31ರಂದು ಬೆಳಗ್ಗೆ 9.50ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭವಾಗಲಿದೆ. ಬೆಳಗ್ಗೆ 11.05ಕ್ಕೆ ವಿಮಾನ ಶಿವಮೊಗ್ಗ ತಲುಪಲಿದೆ. 1 ಗಂಟೆ 15 ನಿಮಿಷದ ನಾನ್‌ ಸ್ಟಾಪ್‌ ಫ್ಲೈಟ್‌ ಇರಲಿದೆ ಎಂದು ಪ್ರಕಟಿಸಲಾಗಿದೆ.

ಎರಡು ಬಗೆಯ ಟಿಕೆಟ್‌ ಮಾದರಿ :

ಇಂಡಿಗೋ ಸಂಸ್ಥೆ ಎರಡು ಬಗೆಯ ಟಿಕೆಟ್‌ ಮಾದರಿಗಳನ್ನು ಪರಿಚಯಿಸಿದೆ. ಸೇವರ್‌ ಮತ್ತು ಫ್ಲೆಕ್ಸಿ ಪ್ಲಸ್‌ ಟಿಕೆಟ್‌ಗಳನ್ನು ಪರಿಚಯಿಸಿದೆ. ಸೇವರ್‌ ಮಾದರಿ ಟಿಕೆಟ್‌ನಲ್ಲಿ ಯಾವುದೆ ಹೆಚ್ಚುವರಿ ಸೌಲಭ್ಯಗಳು ಇಲ್ಲ. ಆದರೆ ಫ್ಲೆಕ್ಸಿ ಪ್ಲಸ್‌ ಟಿಕೆಟ್‌ನಲ್ಲಿ ಕಾಂಪ್ಲಿಮೆಂಟರಿ ಸ್ಕ್ಯಾನ್ಸ್‌ ಲಭ್ಯವಿದೆ. ಸ್ಟಾಂಡರ್ಡ್‌ ಸೀಟ್‌ ಒದಗಿಸಲಾಗುತ್ತದೆ. ಪ್ರಯಾಣದ ದಿನಾಂಕ ಬದಲಾವಣೆಯಾದರೆ ಹೆಚ್ಚುವರಿ ದರವಿರುವುದಿಲ್ಲ. ಟಿಕೆಟ್‌ ಕ್ಯಾನ್ಸಲ್‌ ಚಾರ್ಜ್‌ ಕೂಡ ಕಡಿಮೆ ಇರಲಿದೆ.

ಟಿಕೆಟ್‌ ದರ ಎಷ್ಟಿದೆ?

ಆ.31ರಂದು ಬೆಂಗಳೂರು – ಶಿವಮೊಗ್ಗ ವಿಮಾನದ ಟಿಕಟ್‌ ದರ ಪ್ರತಿ ಪ್ರಯಾಣಿಕನಿಗೆ ಸೇವರ್‌ ಟಿಕೆಟ್‌ ದರ 6,647 ರೂ. ಫ್ಲೆಕ್ಸಿ ಪ್ಲಸ್‌ ಟಿಕೆಟ್‌ ದರ 7,172 ರೂ. ಮುಂಗಡವಾಗಿ ಬುಕ್ ಮಾಡಿದರೆ ಟಿಕೆಟ್‌ ದರ ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಸೇವರ್‌ ಟಿಕೆಟ್‌ ದರ 3,999 ರೂ, ಫ್ಲೆಕ್ಸಿ ಪ್ಲಸ್‌ ಟಿಕೆಟ್‌ ದರ 4,393 ರೂ. ಇತ್ತು.


ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ

ಆ.31ರಂದು ಶಿವಮೊಗ್ಗದಿಂದ ಬೆಳಗ್ಗೆ 11.25ಕ್ಕೆ ವಿಮಾನ ಹೊರಡಲಿದೆ. ಮಧ್ಯಾಹ್ನ 12.25ಕ್ಕೆ ಬೆಂಗಳೂರು ತಲುಪಲಿದೆ. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಸೇವರ್‌ ಮಾದರಿ ಟಿಕೆಟ್‌ ದರ 6,021 ರೂ, ಫ್ಲೆಕ್ಸಿ ಪ್ಲಸ್‌ ಟಿಕೆಟ್‌ ದರ 6,546 ರೂ. ಇತ್ತು. ಸೆ.1ರ ಟಿಕೆಟ್‌ ದರ ಸೇವರ್‌ ಮಾದರಿಗೆ 4,393 ರೂ, ಫ್ಲೆಕ್ಸಿ ಪ್ಲಸ್‌ 4,918 ರೂ. ಇತ್ತು.


ಲಗೇಜ್‌ ತೂಕ ಎಷ್ಟಿರಬೇಕು?

ಪ್ರಯಾಣಿಕರು ಕೊಂಡೊಯ್ಯುವ ಲಗೇಜ್‌ ತೂಕಕ್ಕೆ ವಿಮಾನದಲ್ಲಿ ಮಿತಿ ಇರಲಿದೆ. ಶಿವಮೊಗ್ಗ – ಬೆಂಗಳೂರು ವಿಮಾನದಲ್ಲಿ 15 ಕೆ.ಜಿ ತೂಕದ ಲಗೇಜ್‌ ಕೊಂಡೊಯ್ಯಬಹುದು. ಪ್ರತಿ ಪ್ರಯಾಣಿಕ ಒಂದು ಹ್ಯಾಂಡ್‌ ಬ್ಯಾಗ್‌ ತೆಗೆದುಕೊಂಡು ಹೋಗಬಹುದು. ಇದರ ತೂಕ 7 ಕೆ.ಜಿ.ವರೆಗು ಇರಬಹುದು. ಸುತ್ತಳೆ 115 ಸೆಂಟಿಮೀಟರ್‌ ಮೀರುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

ಇಂಡಿಗೋ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್‌ ಬುಕಿಂಗ್‌ ಮಾಡಬಹುದಾಗಿದೆ. ಶಿವಮೊಗ್ಗ – ಬೆಂಗಳೂರು ಮದ್ಯೆ ವಿಮಾನ ಹಾರಾಟ ಯಾವಾಗ ಎಂಬ ಕುತೂಹಲವಿತ್ತು. ಇಂಡಿಗೋ ಸಂಸ್ಥೆ ಟಿಕೆಟ್‌ ಬುಕಿಂಗ್‌ ಆರಂಭಿಸಿದೆ. ಇದರಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ನಿರೀಕ್ಷೆ ಹೆಚ್ಚಾಗಿದೆ.

Leave a Reply

Your email address will not be published. Required fields are marked *