ಪಾರ್ಕಿಂಗ್ ಗೆ ಸ್ಥಳಾವಕಾಶ ಕಲ್ಪಿಸುವಂತೆ ಮನವಿ
ರಿಪ್ಪನ್ ಪೇಟೆ : ಟ್ಯಾಕ್ಸಿ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ನೀಡುವಂತೆ ಟ್ಯಾಕ್ಸಿ ಮಾಲೀಕರ ಹಾಗೂ ಚಾಲಕರ ಸಂಘದ ಕೆ ಟಿ ಡಿ ಓ ವತಿಯಿಂದ ಪಿಎಸ್ ಐ ಪ್ರವೀಣ್ ರವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಟ್ಯಾಕ್ಸಿ ಚಾಲಕರು ಟ್ಯಾಕ್ಸಿ ವಾಹನವನ್ನು ಹಲವಾರು ವರ್ಷಗಳಿಂದ ವಿನಾಯಕ ಸರ್ಕಲ್ ನಿಂದ ತೀರ್ಥಹಳ್ಳಿ ರಸ್ತೆಯ ಟಾಕೀಸ್ ಸಮೀಪದ ಜಾಗದಲ್ಲಿ ಪಾರ್ಕಿಂಗ್ ಮಾಡುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಟ್ಯಾಕ್ಸಿ ವಾಹನ ಚಾಲಕರು ತಮ್ಮ ವಾಹನವನ್ನು ನಿಲ್ಲಿಸುತ್ತಿದ್ದು ಸಂಚಾರಕ್ಕೆ ತೊಂದರೆ ಆಗದಂತೆ ನಡೆದುಕೊಳ್ಳುತ್ತಿದ್ದರು.
ಪೊಲೀಸ್ ಇಲಾಖೆ ವಾಹನ ನಿಲುಗಡೆ ಪ್ರದೇಶವನ್ನು ಸದ್ರಿ ಟ್ಯಾಕ್ಸಿ ವಾಹನ ನಿಲುಗಡೆ ತನಕ ವಿಸ್ತರಿಸಿದ್ದು ಟ್ಯಾಕ್ಸಿ ವಾಹನ ಮಾಲೀಕ ಚಾಲಕರಿಗೆ ತಮ್ಮ ವಾಹನವನ್ನು ನಿಲುಗಡೆ ಮಾಡಲು ತೊಂದರೆಯಾಗಿದ್ದು ಸ್ಥಳವಕಾಶವಿಲ್ಲದೆ ಪರದಾಡುವಂತಾಗಿದ್ದು ನುಂಗಲಾರದ ತುತ್ತಾಗಿದೆ.
ಈ ಸಂಬಂಧ ಟ್ಯಾಕ್ಸಿ ಮಾಲೀಕರ ಹಾಗೂ ಚಾಲಕರ ಸಂಘದ ಕೆ ಟಿ ಡಿ ಓ ವತಿಯಿಂದ ಪದಾಧಿಕಾರಿಗಳು ಪಟ್ಟಣದ ಪೊಲೀಸ್ ಠಾಣಾಧಿಕಾರಿ ಎಸ್ ಪಿ ಪ್ರವೀಣ್ ರವರಿಗೆ ಮನವಿ ಸಲ್ಲಿಸಿ ತಮಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಮನವರಿಕೆ ಮಾಡಿ ಟ್ಯಾಕ್ಸಿ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ನೀಡುವಂತೆ ಆಗ್ರಹಿಸಿದ್ದಾರೆ.
ಇದುವರೆಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸೇವೆ ಸಲ್ಲಿಸುತ್ತಿದ್ದು ಈಗ ನಮಗೆ ಸ್ಥಳಾವಕಾಶವಿಲ್ಲದಂತೆ ಆಗಿದೆ ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಸಂಬಂಧ ಪಟ್ಟ ಅಧಿಕಾರಿಗಳು ವಾಹನಗಳ ಪಾರ್ಕಿಂಗ್ ಗೆ ಸೂಕ್ತ ಸ್ಥಳವನ್ನು ಸೂಚಿಸಬೇಕು ಎಂದು ರಿಪ್ಪನ್ ಪೇಟೆ ಟ್ಯಾಕ್ಸಿ ಮಾಲೀಕರ ಹಾಗೂ ಚಾಲಕರ ಸಂಘದ ಕೆ ಟಿ ಡಿ ಓ ವತಿಯಿಂದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
