“ಮಸೀದಿ ಬಳಿ ಮಧ್ಯದಂಗಡಿ ಅರಂಭಿಸುವುದನ್ನು ವಿರೋಧಿಸಿ ಮೌನ ಪ್ರತಿಭನೆಗೆ ಸಿದ್ದತೆ”
ರಿಪ್ಪನ್ಪೇಟೆ;-ಸರ್ಕಾರದ ಅಬಕಾರಿ ನಿಯಮದಂತೆ ಮಸೀದಿ ಚರ್ಚ್ ದೇವಸ್ಥಾನ ಹಾಗೂ ಶಾಲೆ ಅಸ್ಪತ್ರೆಗೆ 100 ಮೀಟರ್ ಸುತ್ತಳಲೆತೆಯಲ್ಲಿ ಮಧ್ಯದಂಗಡಿ ತೆರೆಯಬಾರದೆಂಬ ನಿಯಮ ಜಾರಿಯಲ್ಲಿದ್ದರೂ ಕೂಡಾ ಇಲ್ಲಿನ ಹೊಸನಗರ ರಸ್ತೆಯ ಜುಮ್ಮಾಮಸೀದಿಯಿಂದ ಕೆಲವೇ ಅಂತರದಲ್ಲಿರುವ ರಾಯಲ್ ಕಂಪರ್ಟ್ ಕಟ್ಟಡದಲ್ಲಿ ಸಿ.ಎಲ್.ನಂ 7 ಬಾರ್ ಅಂಡ್ ರೆಸ್ಟೊರೆಂಟ್ಯನ್ನು ಆರಂಭಿಸುವ ಎಲ್ಲ ಸಿದ್ದತೆ ನಡೆದಿದ್ದು ಈ ಬಗ್ಗೆ ಇಂದು ಮುಸ್ಲಿಂ ಸಮುದಾಯದವರು ಶುಕ್ರವಾರದ ನಮಾಜ್ (ಪ್ರಾರ್ಥನೆ) ಮುಗಿಸಿ ಠಾಣೆಗೆ ತೆರಳಿ ಮಸೀದಿ ಬಳಿ ಮಧ್ಯದಂಗಡಿ ಆರಂಭಿತ್ತಾರೆಂಬ ಖಚಿತ ಮಾಹಿತಿಯನ್ನಾದರಿಸಿ ನಮ್ಮ ಸಮುದಾಯದವರು ಮೌನ ಪ್ರತಿಭಟನೆ ನಡೆಸುತ್ತೇವೆಂದು ಮನವಿ ಮಾಡಿದರು.
ಮುಸ್ಲಿಂ ಸಮುದಾಯದವರ ಮನವಿಗೆ ಸ್ಪಂದಿಸಿದ ಪಿಎಸ್ಐ ಎಸ್.ಪಿ.ಪ್ರವೀಣ್ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಈ ಕುರಿತು ಕೇಸ್ ದಾಖಲಾಗಿದೆ ಅಲ್ಲದೆ ಮಧ್ಯದಂಗಡಿ ಅರಂಭಕ್ಕೆ ಅಬಕಾರಿ ಇಲಾಖೆಯ ಪ್ರವಾಸೋದ್ಯಮದ ಅಡಿಯಲ್ಲಿ ಸರ್ವೇ ವರದಿಯನ್ನಾದರಿಸಿ ಪರವಾನಿಗೆ ನೀಡಿರುತ್ತಾರೆ  ಅವರು ಈಗಾಗಲೇ ಇದೇ ಭಾನುವಾರದೊಂದು ಆಂಗಡಿ ಪ್ರಾರಂಭಕ್ಕೆ ಪೊಲೀಸ್ ರಕ್ಷಣೆ ಕೋರಿದ್ದಾರೆ. ತಮ್ಮ ಹಕ್ಕು ಕೇಳುವುದರಲ್ಲಿ ತಪ್ಪಿಲ್ಲ ನೀವುಗಳು ಮೌನವಾಗಿ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸಲು ಯಾವುದೇ ತಕರಾರು ಇಲ್ಲ ಅದರೆ ಯಾರಾದರೂ ಮಧ್ಯದಂಗಡಿ ಮುಂದೆ ಪ್ರತಿಭಟನೆಯ ವೇಳೆ ಗಲಾಟೆ ನಡೆಸಿದರೆ ಯಾವುದೇ ಮುಲಾಜು ಇಲ್ಲದೆ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕಾಗುವುದು ಅನಿರ್ವಾಯವಾಗುತ್ತದೆಂದು ಮುಸ್ಲಿಂ ಬಾಂಧವರಿಗೆ ತಿಳುವಳಿಕೆ ನೀಡಿದರು.
ಈ ಮಧ್ಯ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಮಾತನಾಡಿ ಶಿವಮೊಗ್ಗ-ಹೊಸನಗರ ಮಾರ್ಗದ ಮುಖ್ಯರಸ್ತೆಯಲ್ಲಿರುವ ಮಸೀದಿಗೂ ಮತ್ತು ಮಧ್ಯದಂಗಡಿಗೂ ಇರುವ ಅಂತರ ಎಷ್ಟು ಈ ಬಗ್ಗೆ ತಮಗೆ ನೀಡಲಾದ ದೂರದ ಮಾಹಿತಿ ಕೊಡಿ ಎಂದು ಕೇಳಿದಾಗ ಪಿಎಸ್ಐ ನಮ್ಮ ಬಳಿಯಲ್ಲಿ ಯಾವುದೇ ದಾಖಲೆಗಳು ಇಲ್ಲ ತಮಗೆ ಬೇಕಾದರೆ ಅಬಕಾರಿ ಇಲಾಖೆಯ ಹೊಸನಗರ ಕಛೇರಿಗೆ ಮಾಹಿತಿ ಹಕ್ಕಿನಡಿ ಕೇಳಿದರೆ ಮಾಹಿತಿ ಲಭ್ಯವಾಗುವುದೆಂದರು.
ಜುಮ್ಮಾ ಮಸೀದಿ ಅಧ್ಯಕ್ಷ ಮಹಮದ್ ರಫ಼ಿ ಮಾತನಾಡಿ ನಾವುಗಳು ಮಸೀದಿಗೆ ಸಮೀಪವೇ ಮಧ್ಯದಂಗಡಿ ಆರಂಭವಾಗುವುದನ್ನು ವಿರೋಧಿಸುತ್ತೇವೆ ಅಲ್ಲದೆ ಸಮುದಾಯದವರು  ಆರಂಭವಾಗುವ ಕಟ್ಟಡದ ಮುಂಭಾಗದ ಲೋಕೋಪಯೋಗಿ ರಸ್ತೆಯ ಚರಂಡಿಯ ಮೇಲೆ ಕುಳಿತು ಮೌನಪ್ರತಿಭಟನೆ ನಡೆಸುತ್ತೇವೆ ನಮಗೆ ಅವಕಾಶ ಕೊಡುವ ಮೂಲಕ ಸಂಬಂಧಪಟ್ಟ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಇನ್ನೊಮ್ಮೆ ಮಸೀಧಿಗೂ ಮತ್ತು ಮಧ್ಯದಂಗಡಿ ಆರಂಭಿಸುವ ಕಟ್ಟಡಕ್ಕೂ ಇರುವ ಅಂತರವನ್ನು ಸಾರ್ವಜನಿಕವಾಗಿ ಪರಿಶೀಲನೆ ನಡೆಸಿ ಮಧ್ಯದಂಗಡಿ ಆರಂಭಿಸದಂತೆ ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಸೀದಿಯ ಮುಸ್ಲಿಂ ಮುಖಂಡರು ಭಾಗವಹಿಸಿದ್ದರು. 
ಮದ್ಯದಂಗಡಿ ಪ್ರಾರಂಭದ ಹುನ್ನಾರದಲ್ಲಿ ಪ್ರತಿಷ್ಠಿತ ಧರ್ಮದರ್ಶಿಯೊಬ್ಬರ ದುರ್ಬಳಕೆ :
ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಂಭಾಗದಲ್ಲಿ ನೂತನ ಬಾರ್ ತೆರೆಯುವ ಹುನ್ನಾರದಲ್ಲಿ ರಾಜ್ಯದ ಪ್ರತಿಷ್ಠಿತ ದೇವಸ್ಥಾನಗಳಲಿ ಒಂದಾದ ದೇವಾಲಯದ ಧರ್ಮದರ್ಶಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತಿದ್ದಾರೆ.
ಧರ್ಮದರ್ಶಿಗಳಿಗೆ ಆಪ್ತನಾಗಿರುವ ವ್ಯಕ್ತಿಯೊಬ್ಬ ಮಸೀದಿ ಮುಂಭಾಗದಲ್ಲಿ ತೆರೆಯುತ್ತಿರುವ ಸಿ ಎಲ್7 ಬಾರ್ ಧರ್ಮದರ್ಶಿಗಳದ್ದೇ ಎಂದು ಎಲ್ಲಾ ಅಧಿಕಾರಿಗಳ ಬಳಿ ಹಾಗೂ ಸಾರ್ವಜನಿಕರ ಬಳಿ ಹೇಳಿಕೊಂಡು ತಿರುಗಾಡುತಿದ್ದಾನೆ ಎಂದು ಸಾರ್ವಜನಿಕರು ವಲಯದಲ್ಲಿ ಹೇಳಲಾಗುತ್ತಿದೆ.
ಒಟ್ಟಾರೆಯಾಗಿ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವಂತಹ ಧರ್ಮದರ್ಶಿಗಳ ಹೆಸರನ್ನು ಸಮಾಜದ ಸ್ವಾಸ್ಥ್ಯ ಕೆಡವುವಂತಹ ಕೆಲಸಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಷಾದನೀಯವಾಗಿದ್ದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುವುದೇ ಸಾರ್ವಜನಿಕರ ಒತ್ತಾಯವಾಗಿದೆ. 
		 
                         
                         
                         
                         
                         
                         
                         
                         
                         
                        

