ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ಅಧಿಕಾರ ಸ್ವೀಕಾರ
ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ನೇಮಕಗೊಂಡಿದ್ದಾರೆ. ಈ ಹಿಂದೆ ಕುಲಸಚಿವರಾಗಿದ್ದ ಅನುರಾಧ ಅವರ ಸ್ಥಾನಕ್ಕೆ ಈಗ ಅಧಿಕೃತ ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.
8 ತಿಂಗಳ ಹಿಂದೆ ಕುಲಸಚಿವರಾಗಿದ್ದ ಅನುರಾಧರವರು ವರ್ಗಾವಣೆಗೊಂಡು ಹೋದ ನಂತರ ಪ್ರಭಾರ ಕುಲಸಚಿವರನ್ನಾಗಿ ಸಿ ಗೀತಾರನ್ನ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. 8 ತಿಂಗಳ ಕಾಲ ಪ್ರಭಾರರನ್ನ ನೇಮಿಸಿದ್ದ ಸರ್ಕಾರ ಈಗ ಅವರ ಸ್ಥಾನಕ್ಕೆ ಅಧಿಕೃತವಾಗಿ ಪ್ರೊ.ಪಿ.ಕಣ್ಣನ್ ರನ್ನ ನೇಮಿಸಿ ಆದೇಶಿಸಿದೆ.
ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವ (ಆಡಳಿತ)ರಾಗಿ ನೇಮಕಗೊಂಡಿರುವ ಪ್ರೊ.ಪಿ.ಕಣ್ಣನ್ ಅವರು ಇಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು. ಮೂಲತಃ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಇವರು, ಈ ಹಿಂದೆ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.