ಹುಂಚಾ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಚುನಾವಣೆ.
ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಅರ್ ಎಮ್ ಎಮ್ ಗೆ ಪ್ರತಿಷ್ಟೆ, ಪ್ರಸಕ್ತ ಸದಸ್ಯರ ಹೊಂದಾಣಿಕೆ ಅಸ್ತ್ರ, ಹಲವಾರು ಹೊಸಬರ ನಾಮಪತ್ರ ಸಲ್ಲಿಕೆ ಪ್ರತ್ಯಾಸ್ತ್ರ
ಕುತೂಹಲ ಘಟ್ಟದತ್ತ ಹುಂಚಾ ಸೊಸೈಟಿ ಚುನಾವಣೆ
ಹುಂಚ : ಸದಾ ಒಂದಿಲ್ಲೊಂದು ವಿವಾದಗಳಿಂದ ಹೊಸನಗರ ತಾಲ್ಲೂಕಿನ ಬಹು ವಿವಾದಿತ ಸೊಸೈಟಿ ಎಂಬ ಹೆಸರಾಗಿದ್ದ ಹುಂಚಾ ವ್ಯವಸಾಯ ಸಹಕಾರ ನಿಯಮಿತದ ಚುನಾವಣ ಕಣ ರಂಗೇರಿದ್ದು ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಈ ಚುನಾವಣೆಯೂ ಆರ್ ಎಂ ಮಂಜುನಾಥ್ ಗೌಡರಿಗೆ ಪ್ರತಿಷ್ಟೆಯ ಕಣವಾಗಿದ್ದು,ಚುನಾವಣೆ ಕುತೂಹಲ ಘಟ್ಟದತ್ತ ಸಾಗಿದೆ.ಹೊಸಮುಖಗಳು ಈ ಬಾರಿಯ ಚುನಾವಣೆಯಲ್ಲಿ ಆಸಕ್ತಿ ತೋರುತಿದ್ದು ಕಣ ರಂಗೇರಿದೆ.
ಕಳೆದ ಐದು ವರ್ಷದಲ್ಲಿ ಯದುಕುಮಾರ್ ನೇತೃತ್ವದಲ್ಲಿ ಒಮ್ಮೆ ಲಾಭದಲ್ಲಿದೆ,ಒಮ್ಮೆ ಅವ್ಯವಹಾರವಾಗಿದೆ ಎಂಬ ಗೊಂದಲದಲ್ಲಿಯೇ ಹಲವಾರು ಸಾಮಾನ್ಯ ಸಭೆಗಳು ನಡೆದವು,ಕಳೆದ ಐದು ವರ್ಷದಲ್ಲಿ ಉಪಾಧ್ಯಕ್ಷರಾಗಿದ್ದ ಹೆಚ್ ಆರ್ ರಾಘವೇಂದ್ರ ಶೇರು ವಿವಾದಕ್ಕಿಡಾಗಿತ್ತು, ಹೊಸನಗರ ತಾಲ್ಲೂಕಿನ ಹುಂಚಾ ವ್ಯವಸಾಯ ಸೇವಾ ಸಹಕಾರ ಸಂಘದಲ್ಲೂ ಷೇರ್ ಇದ್ದು , ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ,ಹುಂಚದಕಟ್ಟೆಯ ವ್ಯವಸಾಯ ಸೇವ ಸಹಕಾರ ಸಂಘದಲ್ಲೂ ಷೇರ್ ಹೊಂದಿದ್ದು ವಿವಾದಕ್ಕಿಡಾಗಿತ್ತು. ಕೊನೆಗೆ ಹುಂಚದಕಟ್ಟೆಯ ವ್ಯವಸಾಯ ಸಹಕಾರ ಸಂಘದ ಷೇರ್ ಹಿಂಪಡೆಯೊದರೊಂದಿಗೆ ವಿವಾದ ತಣ್ಣಗಾಗಿತ್ತು.
ಈ ಬಾರಿ ಸಹಕಾರಿ ಭೀಷ್ಮ ಅರ್ ಎಮ್ಎಮ್ ಗೆ ಪ್ರತಿಷ್ಟೆ…
ಕಳೆದ ಹಲವಾರು ವರ್ಷಗಳಿಂದ ಸಹಕಾರಿ ರಂಗದಲ್ಲಿ ತನ್ನದೆ ಹಿಡಿತ ಸಾಧಿಸಿರುವ ಅರ್ ಎಮ್ ಮಂಜುನಾಥಗೌಡರು ಮುಂದಿನ ವಿಧಾನ ಸಭಾ ಚುನಾವಣೆಯ ಮೇಲೆ ಕಣ್ಣಿಟ್ಟುರುವುದರಿಂದ ಈಗ ಹುಂಚ ವ್ಯವಸಾಯ ಸೇವ ಸಹಕಾರ ಸಂಘವನ್ನು ತನ್ನ ಬೆಂಬಲಿಗರ ತೆಕ್ಕೆಗೆ ತೆಗೆದುಕೊಂಡು ಸಂಘಟನೆ ಬಲಗೊಳಿಸುವ ಸನ್ನಾಹದಲ್ಲಿದ್ದಾರೆ.
ಹೊಂದಾಣಿಕೆಯ ಮೂಡ್ ನಲ್ಲಿ ಬಿಜೆಪಿ ಕಾಂಗ್ರೆಸ್ ಬೆಂಬಲಿತ ಸದಸ್ಯರು
ಕಳೆದ ಐದು ವರ್ಷಗಳಿಂದ ವಿವಾದಗಳಿಂದಲೇ ಬೇಸತ್ತಿರುವ ಷೇರುದಾರರೆದುರು ಚುನಾವಣೆ ಸ್ವಲ್ಪ ಕಷ್ಟದಾಯಕ ಎಂಬ ಅರಿವು ಸರ್ವ ಸದಸ್ಯರಿಗೂ ಇದೆ. ಜೊತೆಗೆ ಹೊಸಬರು ಹಲವು ಮಂದಿ ನಾಮಪತ್ರ ಸಲಿಕೆಗೆ ಹಾತೊರೆಯುತ್ತಿರುವುದರಿಂದ ಹೊಂದಾಣಿಕೆಯ ಅಸ್ತ್ರ ಮುಂದು ಮಾಡಲಾಗಿದೆ. ಈಗಿರುವ ಸದಸ್ಯರ ಸಿಂಡಿಕೇಟ್ ಚುನಾವಣೆಗೆ ಇಳಿದರೆ ಹೊಸಬರು ಹಲವರು ಎದುರು ಪಕ್ಷಾತೀತವಾಗಿ ಚುನಾವಣೆ ಮಾಡುವ ಸನ್ನಾಹದಲ್ಲಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ನಡೆದು ಆಯ್ಕೆಯಾಗುವವರು ಹುಂಚಾ ವ್ಯವಸಾಯ ಸೇವಾ ಸಹಕಾರ ಸಂಘದ ಕಾಯಕಲ್ಪಕ್ಕೆ ಪ್ರಯತ್ನಿಸುತ್ತಾರಾ ಕಾದು ನೋಡಬೇಕಿದೆ….
