ಚಿತ್ರ ನಟ ದರ್ಶನ್ ತೂಗುದೀಪ್ ದರ್ಶನಕ್ಕಾಗಿ ಹಗಲಿರುಳು ಪರಿತಪ್ಪಿಸುತ್ತಾ ಖಿನ್ನತೆಗೊಳಗಾಗಿದ್ದ ಮಲೆನಾಡಿನ ಕುಗ್ರಾಮ ಮತ್ತಿಕೊಪ್ಪದ ಯುವಕನನ್ನು ದರ್ಶನ್ ಇಂದು ಭೇಟಿಯಾಗಿದ್ದಾರೆ.
ಚಿಕ್ಕಂದಿನಿಂದಲೇ ದರ್ಶನ್ ಬಗ್ಗೆ ಅಪಾರ ಅಭಿಮಾನವನ್ನಿಟ್ಟು ಕೊಂಡಿರುವ ಸುದೀಪ ದರ್ಶನ್ ರವರನ್ನು ಹಲವು ಬಾರಿ ಭೇಟಿ ಮಾಡಲು ಪ್ರಯತ್ನಿಸಿ ವಿಫಲನಾಗಿ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಯುವಕನ ಬಗ್ಗೆ ಇತ್ತೀಚಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಗಮನಕ್ಕೆ ಬಂದಿತ್ತು.
ಈ ಬಗ್ಗೆ ಪೋಸ್ಟ್ ಮ್ಯಾನ್ ಸುದ್ದಿಸಂಸ್ಥೆ ಕಳೆದ ವಾರ ಯುವಕನನ್ನು ಆತನ ಮನೆಯಲ್ಲಿ ಭೇಟಿ ಮಾಡಿ ಸಂದರ್ಶಿಸಿ ಈ ಬಗ್ಗೆ ಸವಿಸ್ತಾರದ ವರದಿಯನ್ನು ಮಾಡಿತ್ತು,ಈ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಹಿನ್ನಲೆಯಲ್ಲಿ ಚಿತ್ರನಟ ದರ್ಶನ್ ತೂಗುದೀಪ್ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಸಂಪಾದಕರಿಗೆ ಹಾಗೂ ಶಿವಮೊಗ್ಗ ಜಿಲ್ಲಾ ಮತ್ತು ತಾಲೂಕ್ ಡಿಬಾಸ್ ಅಭಿಮಾನಿ ಬಳಗದವರಿಗೆ ಸಂಪರ್ಕಿಸಿ ಶುಕ್ರವಾರ ಯುವಕನನ್ನು ಮೈಸೂರಿಗೆ ಕರೆಸಿಕೊಂಡು ಭೇಟಿಯಾಗಿ ಧೈರ್ಯ ತುಂಬುವ ಮಾತುಗಳನ್ನಾಡುವ ಮೂಲಕ ಯುವಕನಲ್ಲಿ ಭರವಸೆ ಮೂಡಿಸಿದ್ದಾರೆ.
ಈ ಸಂಧರ್ಭದಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ರಫ಼ಿ ರಿಪ್ಪನ್ಪೇಟೆ, ಡಿ ಬಾಸ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ನಾಗೇಶ್ ಹೊಳೆಹೊನ್ನೂರು,ಹಿರಿಯ ಪತ್ರಕರ್ತ ಬಸವರಾಜ್ ಕೆ ಎಂ , ಲೋಹಿತ್ ಬುಕ್ಕಿವರೆ,ಯಶಸ್ಪತಿ ಜೈನ್,ಲೋಕೇಶ್ ಹೊಳೆ ಬೆನವಳ್ಳಿ ಇದ್ದರು.
ದರ್ಶನ್ ದರ್ಶನಕ್ಕಾಗಿ ಪರಿತಪಿಸುತ್ತಿದ್ದ ಯುವಕ ಸುದೀಪ್
ಚಿತ್ರ ನಟ ದರ್ಶನ್ ನಟಿಸಿರುವ ಹಲವು ಚಿತ್ರಗಳನ್ನು ನೋಡಿ ಅಕರ್ಷಿತನಾದ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮತ್ತಿಕೊಪ್ಪ ವಾಸಿ ಬಡಕೂಲಿ ಕಾರ್ಮಿಕ ಹಿರಿಯಣ್ಣ ಮತ್ತು ತಾರಾ ಎಂಬುವರ ದ್ವಿತೀಯ ಪುತ್ರ ಇಪ್ಪತ್ನಾಲ್ಕು ವರ್ಷದ ಸುದೀಪ್ ಚಿತ್ರನಟ ದರ್ಶನ್ ದರ್ಶನಕ್ಕಾಗಿ ಹಾತೊರೆಯುತಿದ್ದಾನೆ.
ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅರನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗಲೇ ಚಿತ್ರನಟ ದರ್ಶನರವರ ಅಪ್ಪಟ ಅಭಿಮಾನಿಯಾಗಿ ದರ್ಶನ ನಟಿಸಿರುವ ಹಲವು ಚಿತ್ರಗಳನ್ನು ನೋಡುವುದರೊಂದಿಗೆ ಖಿನ್ನತೆಗೊಳ್ಳಗಾಗಿ ಮಣಿಪಾಲ ಅಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಹೀಗೆ ಶಿವಮೊಗ್ಗ ಅಸ್ಪತ್ರೆಯಲ್ಲಿ ಮಾನಸಿಕ ರೋಗದ ಚಿಕಿತ್ಸೆ ಪಡೆಯುತ್ತಿರುವ ಈ ಯುವ ಅಭಿಮಾನಿ ನಟನ ದರ್ಶನಕ್ಕಾಗಿ ಮನೆ ಬಿಟ್ಟು ಗಂಟೂ ಮೂಟೆ ಕಟ್ಟಿಕೊಂಡು ಬೆಂಗಳೂರಿನ ದರ್ಶನ್ ರವರ ತೂಗುದೀಪ ನಿವಾಸದ ಮನೆಬಾಗಿಲಿಗೆ ಹೋದರೂ ದರ್ಶನ್ ರನ್ನು ನೋಡುವ ಭಾಗ್ಯ ದೊರಕುತ್ತಿಲ್ಲ ಎಂದು ತನ್ನ ಮನದಾಳದ ನೋವಯನ್ನು ಮಾಧ್ಯಮದವರ ಬಳಿ ಹಂಚಿಕೊಂಡಿದ್ದರು.
ತಂದೆ ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿರುವ 24 ವರ್ಷದ ಸುದೀಪ್ ರವರ ಹುಚ್ಚು ಅಭಿಮಾನದ ಬಗ್ಗೆ ತಿಳಿದು ಈ ಬಗ್ಗೆ ವರದಿ ಮಾಡಲು ಪೋಸ್ಟ್ ಮ್ಯಾನ್ ನ್ಯೂಸ್ ತಂಡ ಸುದೀಪನ ಅತ್ತೆಯ ಮನೆಯಿರುವ ಹುಂಚ ಸಮೀಪದ ಕುಬಟಹಳ್ಳಿಗೆ ತೆರಳಿ ಮಾತನಾಡಿಸಿದಾಗ ನನಗೆ ದರ್ಶನ್ ಎಂದರೇ ಪಂಚಪ್ರಾಣ,ಅವರು ಉತ್ತಮವಾಗಿ ನಟಿಸುತ್ತಾರೆ ಚಾಲೇಜಿಂಗ್ ಸ್ಟ್ರಾರ್ ಬಿರುದು ಇರುವಂತೆ ಚಾಲೆಂಜಿಗ್ ಆಗಿ ಇದ್ದಾರೆ ಅವರನ್ನು ನೋಡಲು ಹಲವಾರು ಬಾರಿ ಮನೆಯವರಿಗೂ ತಿಳಿಸದೇ ಓಡಿ ಹೋಗಿ ಬೆಂಗಳೂರು ರೈಲು ಹತ್ತಿ ನಟ ದರ್ಶನರವರ ಬೆಂಗಳೂರು ಮನೆ ಹತ್ತಿರ ಹೋದರೆ ಅವರನ್ನು ನೋಡಲು ವಾಚಮನ್ ಒಳ ಬಿಡದೇ ಗೇಟ್ ಬಳಿ ನಿಲ್ಲಿಸಿ ಊರಲ್ಲಿಲ್ಲ ಎಂದು ಹೇಳಿ ಕಳುಹಿಸುತ್ತಾರೆ ಎನ್ನುತಿದ್ದ ಸುದೀಪ್.
ಅದರೂ ಬೆನ್ನತ್ತಿದ ಬೇತಾಳನಂತೆ ನಾನು ಮರಣ ಹೊಂದುವ ಮುನ್ನವೇ ನನಗೆ ದರ್ಶನ ನೋಡಬೇಕು ಎಂದು ಮನೆಯವರಿಗೆ ಒತ್ತಡ ಹಾಕುತ್ತಿದ್ದು ಅವನ ಅಸೆಗೆ ತಣ್ಣಿರು ಎರಚಬಾರದೆಂದು ಕೊನೆಗೆ ಬೇರೆ ಮಾರ್ಗವಿಲ್ಲದೆ ಇಂದು ಮಾದ್ಯಮದ ಮೂಲಕ ದರ್ಶನ್ ದರ್ಶನಕ್ಕೆ ಅವಕಾಶ ಮಾಡಿಕೊಡುವರೆಂಬ ಆಶಾಭಾವನೆಯಿಂದ ತಮ್ಮ ಮಗನ ಬೇಡಿಕೆಯನ್ನ ಈಡೇರಿಸುವಲ್ಲಿ ಯಶಸ್ವಿಯಾಗುವರೆಂಬ ಅಶೋತ್ತರದಲ್ಲಿ ತಾಯಿ ತಾರಾ ಹಂಬಲಿಸಿದ್ದರು.