ನಿರ್ಮಲ ಗ್ರಾಮ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಅನೈರ್ಮಲ್ಯದತ್ತ…??? ಎಲ್ಲೆಂದರಲ್ಲಿ ಕಸ ಹರಡಿಕೊಂಡು ದುರ್ನಾತ ಬೀರುತ್ತಿರುವ ತ್ಯಾಜ್ಯ ವಿಲೇವಾರಿ ಘಟಕ……!

ಕಸ ವಿಲೇವಾರಿ, ಸ್ವಚ್ಛತೆ ಹಾಗೂ ನೈರ್ಮಲ್ಯ ವಿಷಯದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿಗೆ ಅನೈರ್ಮಲ್ಯದ ಸೋಂಕು ಮೆತ್ತಿಕೊಂಡಿದೆ.

ಹೌದು ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಹಳೆಯ ಕಸ ವಿಲೇವಾರಿ ಘಟಕದಲ್ಲಿರುವ ತ್ಯಾಜ್ಯಗಳನ್ನು ನೋಡಿದರೆ ಹಾಗನಿಸದೇ ಇರದು.

2022 ರಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೊಸನಗರ ರಸ್ತೆಯ ಗವಟೂರು ಹೊಳೆಯ ಸಮೀಪದಲ್ಲಿ ರಾಜ್ಯಕ್ಕೆ ಮಾದರಿಯಾಗುವ ಘನತ್ಯಾಜ್ಯ ಸಂಪನ್ಮೂಲ ಸಂಸ್ಕರಣ ಮತ್ತು ನಿರ್ವಹಣಾ ಘಟಕ ಸ್ಥಾಪನೆ ಮಾಡಲಾಯಿತು.ಪ್ರಸ್ತುತ ಅಲ್ಲಿಯೇ ಕಸ ವಿಲೇವಾರಿ ಕೆಲಸಗಳು ನಡೆಯುತ್ತಿದೆ.


2015 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದ ಕೃಷ್ಣಬೈರೆಗೌಡರು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಅಂದಿನ ಜಿ.ಪಂ.ಸಿ.ಇ.ಓ ಸೆಂಥಿಲ್ ಮತ್ತು ವೈಶಾಲಿ ರವರೊಂದಿಗೆ ಬೆಳಂಬೆಳಗ್ಗೆ ದಿಡೀರ್ ಭೇಟಿ ನೀಡಿ ತ್ಯಾಜ್ಯವಿಲೆವಾರಿ ಘಟಕದ ನಿರ್ವಹಣೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ದೇಶವ್ಯಾಪಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಂತಹ ಇಲ್ಲಿನ ತೀರ್ಥಹಳ್ಳಿ ರಸ್ತೆಯ ಮುಖ್ಯರಸ್ತೆಯಿಂದ ಹೊಸನಗರ ಸಂಪರ್ಕದ ಲಿಂಕ್ ರಸ್ತೆಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ಸಹ ತೆರೆದುಕೊಂಡಿದ್ದು ಇದರಿಂದ ಉತ್ಪತ್ತೊಯಾಗುವ ಹುಳಗಳು ಟ್ಯಾಂಕ್ ನ ನೀರಿಗೆ ಬಿದ್ದು ಇದೇ ನೀರನ್ನು ಸಾರ್ವಜನಿಕರು ಕುಡಿಯುವಂತಾಗಿದೆ.


ಹಳೇ ಘಟಕದಲ್ಲಿರುವ ಕಸವನ್ನು ತೆರವುಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿರುವ ಕಸದಿಂದ ಅಪಾಯಕಾರಿ ಸೊಳ್ಳೆಗಳು ಹಾಗೂ ಇನ್ನಿತರ ಕ್ರಿಮಿ ಕೀಟಗಳು ಉತ್ಪತ್ತಿಯಾಗುತ್ತಿದ್ದು, ಪರಿಸರದಲ್ಲಿ ವಾಸಿಸುವ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯನ್ನೆದುರಿಸುತ್ತಿದ್ದಾರೆ.  ಈ ಪರಿಸರ ದುರ್ವಾಸನೆಯಿಂದ ತುಂಬಿದ್ದು ಈ ಪರಿಸರದಲ್ಲಿ ವಾಸಿಸುವ ಜನ ಮೂಗು ಮುಚ್ಚಿ ತಿರುಗುವಂತಾಗಿದೆ..ದನಕರುಗಳು ಈ ಕಸದ ರಾಶಿಯಲ್ಲಿ ಆಹಾರ ಹುಡುಕಿಕೊಂಡು ಪ್ಲಾಸ್ಟಿಕ್‌ ತಿಂದು ಸಾವಿಗೀಡಾಗುತ್ತಿವೆ.


ಈ ಘಟದಲ್ಲಿಯೇ ನೀರಿನ ಎರಡು ಓವರ್ ಹೆಡ್ ಟ್ಯಾಂಕ್ ಇದ್ದು ಅಲ್ಲಿಂದಲೇ ಪಟ್ಟಣಕ್ಕೆ ನೀರು ಸರಬರಾಜಾಗುತಿದ್ದು ಅಂತಹ ಕಲುಷಿತ ನೀರನ್ನು ಗ್ರಾಮ ಪಂಚಾಯಿತಿ ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರೋಗಗ್ರಸ್ಥ ತ್ಯಾಜ್ಯವಿಲೆವಾರಿ ಘಟಕಕ್ಕೆ ಸಮೀಪದಲ್ಲಿ ಮೇರಿಮಾತಾ ಪ್ರೌಢಶಾಲೆ ಮತ್ತು ಗುಡ್‌ಶಪರ್ಡ್ ಚರ್ಚ್ ಶಬರೀಶ ನಗರ ಗಾಂಧಿನಗರ ಬಡಾವಣೆ ಹೊಂದಿಕೊಂಡಂತೆ ಇದೆ. ಗ್ರಾಮಾಡಳಿತ ಹಾಗೂ ನೂತನ ಶಾಸಕ ಗೋಪಾಲಕೃಷ್ಣ ಮತ್ತು ಜಿಲ್ಲಾ ಪಂಚಾಯ್ತಿ ಸಿಇಓ ಡಿಹೆಚ್‌ಓ ಇತ್ತ ಗಮಹರಿಸುವುದರೊಂದಿಗೆ ರೋಗಗ್ರಸ್ಥ ತ್ಯಾಜ್ಯವಿಲೆವಾರಿ ಘಟಕಕ್ಕೆ ಮುಕ್ತಿ ಕಾಣಿಸುವರೇ ಕಾದೊನೋಡಬೇಕಾಗಿದೆ.

Leave a Reply

Your email address will not be published. Required fields are marked *