ಸೊಸೆಯಿಂದ ಅತ್ತೆಯ ಚಿನ್ನಾಭರಣ ಮತ್ತು ಹಣ ಕಳುವು – ಇಬ್ಬರ ಬಂಧನ|theft

ಮೇ 13 ರಂದು ಶಿವಮೊಗ್ಗ ನಗರದ ಮಳಲಕೊಪ್ಪದ ಮನೆಯೊಂದರಲ್ಲಿ ಬೀರುವಿನಲ್ಲಿದ್ದ ಚಿನ್ನಾಭರಣ ಕಳುವಾಗಿತ್ತು ಈ ಹಿನ್ನಲೆಯಲ್ಲಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮನೆಯ ಸದಸ್ಯೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಯ ಹಿನ್ನಲೆ :

ಮೇ 13 ರಂದು ಮಳಲಕೊಪ್ಪದ ನಿವಾಸಿ ರೇಣುಕಮ್ಮ ಎಂಬುವರ ಮನೆಯಲ್ಲಿ 90 ಗ್ರಾಂ ಚಿನ್ನಾಭರಣ ಮತ್ತು 14 ಸಾವಿರ ರೂ. ಹಣ ನಗದು ಕಳುವಾಗಿತ್ತು.ಬೀರುವಿನಲ್ಲಿ ಇಟ್ಟ 4 ಲಕ್ಷದ 53 ಸಾವಿರ ರೂ ಮೌಲ್ಯದ 90 ಗ್ರಾಂ ಚಿನ್ನಾಭರಣ ಮತ್ತು 14 ಸಾವಿರ ರೂ. ಹಣ ಕಳುವಾಗಿತ್ತು. 

ರೇಣುಕಮ್ಮ ತನ್ನ ಸೊಸೆ ಹೇಮಾವತಿ ಮತ್ತು ಪಕ್ಕದ ಮನೆಯ ಸತೀಶ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ತುಂಗ ನಗರ ಪೊಲೀಸರು ತನಿಖೆ ಕೈಗೊಂಡು ಸೊಸೆ ಹೇಮಾವತಿ ಮತ್ತು ನೆರೆಯ ಮನೆಯವನಾದ ಸತೀಶ್ ರನ್ನು ಬಂಧಿಸಿದ್ದಾರೆ.

ಸತೀಶ್ ಎಂಬುವವನಿಗೆ ರೇಣುಕಮ್ಮ ರವರ ಸೊಸೆ ಹೇಮಾವತಿ ಅತ್ತೆಯ ಚಿನ್ನಾಭರಣವನ್ನು ಮತ್ತು ಹಣವನ್ನು ಕದ್ದು ಕೊಟ್ಟಿದ್ದಳು. 
ಸದರಿ ಆರೋಪಿ ಚಿನ್ನಾಭರಣವನ್ನು ಅಡವಿಟ್ಟು ಹಣ ಪಡೆದಿದ್ದನು. 14 ಸಾವಿರ ರೂ. ಹಣದಲ್ಲಿ 12 ಸಾವಿರ ರೂ ಹಣ ಖರ್ಚು ಮಾಡಿದ್ದನು.

ಪ್ರಕರಣದ ಆರೋಪಿತರು ಮತ್ತು ಕಳುವಾದ ಮಾಲಿನ ಪತ್ತೆ ಬಗ್ಗೆ ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ, ಹೆಚ್ಚುವರಿ ಜಿಲ್ಲಾರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗ ದರ್ಶನದಲ್ಲಿ, ಡಿವೈಎಸ್ಪಿ ಬಾಲರಾಜ್, ತುಂಗ ನಗರ ಪೊಲೀಸ್ ಠಾಣೆಯ ಪಿಐ ಮಂಜುನಾಥ್ ಬಿ,  ನೇತೃತ್ವದಲ್ಲಿ ಪಿಎಸ್ಐ ರಾಜುರೆಡ್ಡಿ ಬೆನ್ನೂರು, ಕುಮಾರ್ ಕುರಗುಂದ, ಎಎಸ್ಐ ಮನೋಹರ್ ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಪಿಸಿ ನಾಗಪ್ಪ, ಹರೀಶ್ ನಾಯ್ಕ, ಲಂಕೇಶ್, ಕಾಂತರಾಜ್, ಅರಿಹಂತ, ಹರೀಶ್, ಸಂತೋಷ್,ರಮೇಶ್, ಶಿವಕುಮಾರ್, ರಾಘವೇಂಧ್ರ, ಜಯ್ಯಪ್ಪ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

Leave a Reply

Your email address will not be published. Required fields are marked *