ರಿಪ್ಪನ್‌ಪೇಟೆ : ಜ್ಯೋತಿಮಾಂಗಲ್ಯ ಮಂದಿರದ ಭೂಪರಿವರ್ತನೆ ಆದೇಶ ರದುಗೊಳಿಸಿದ್ದ ಜಿಲ್ಲಾಧಿಕಾರಿ
ರಿಪ್ಪನ್‌ಪೇಟೆ : ಪಟ್ಟಣದ ಹೆಸರಾಂತ ಕಲ್ಯಾಣ ಮಂದಿರಗಳಲ್ಲಿ ಒಂದಾದ ಜ್ಯೋತಿ ಮಾಂಗಲ್ಯ ಮಂದಿರದ ಭೂ ಪರಿವರ್ತನೆ ಆದೇಶವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇಲ್ಲಿನ ಬರುವೆ ಗ್ರಾಮದ ಸರ್ವೆ ನಂಬರ್ 63/1ಬಿ ರಲ್ಲಿ 0-38 ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಕೊಂಡು ಭೂಪರಿವರ್ತನೆಯ ಷರತ್ತು ಉಲ್ಲಂಘನೆ ಮಾಡಿಕೊಳ್ಳುವುದರೊಂದಿಗೆ ಆ ಜಾಗದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಜಾಗದಲ್ಲಿ ಕಲ್ಯಾಣ ಮಂದಿರವನ್ನು ನಿರ್ಮಿಸಿರುವುದನ್ನು ಪ್ರಶ್ನಿಸಿ ವಾಸುದೇವ ಎಂಬುವರು ಮೂಲಕ ಲೋಕಾಯುಕ್ತ ನ್ಯಾಯಾಲಯಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿ ಈ ದೂರಿನನ್ವಯ ಸಮಗ್ರ ತನಿಖೆ ನಡೆಸುವುದರೊಂದಿಗೆ ಭೂ ಪರಿವರ್ತನೆ ಅದೇಶವನ್ನು ರದ್ದುಗೊಳಿಸಿ ಅದೇಶ ಹೊರಡಿಸಿದ್ದಾರೆ.
ಲೋಕಾಯುಕ್ತ ನ್ಯಾಯಾಯದ ಅದೇಶದನ್ವಯ ಕಳೆದ ಐದಾರು ತಿಂಗಳ ಹಿಂದೆ ಸಾಗರ ಉಪವಿಭಾಗಾಧಿಕಾರಿ ನಾಗರಾಜ ಮತ್ತು ತಹಶೀಲ್ದಾರ್ ಮತ್ತು ಸಿಬ್ಬಂದಿವರ್ಗ ಅನಧಿಕೃತ ಕಲ್ಯಾಣ ಮಂದಿರದ ಸ್ಥಳಕ್ಕೆ ದಿಡೀರ್ ಭೇಟಿ ಪರಿಶೀಲನೆ ವರದಿ ಸಲ್ಲಿಸಲಾಗಿದ್ದು. ಆ ವರದಿಯನ್ನಾದರಿಸಿ 1 ರಿಂದ 19 ರವರಗೆ ವಸತಿ ನಿವೇಶನಗಳನ್ನು ಅಳವಡಿಸಿ ವಿನ್ಯಾಸವನ್ನು ತಯಾರಿಸಿ ನಕ್ಷೆಯನ್ನು ಅನುಮೊದಿಸಿಕೊಂಡಿದ್ದು ಈ ಪೈಕಿ ನಿವೇಶನ ಸಂಖ್ಯೆ 1 ಮತ್ತು 2 ಒಟ್ಟು 12.00*18-00 ಮೀಟರ್ ಸ್ವತಿನ ಪ್ರದೇಶದಲ್ಲಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಷರತ್ತುಗಳನ್ನು ಉಲ್ಲಂಘಿಸಿ ಶೈಲಜಾ ಕೋಂ ನಾಗರಾಜರವರು ಆನಧೀಕೃತವಾಗಿ ವಾಣಿಜ್ಯ ಕಟ್ಟಡ ಅಂದರೆ ಕಲ್ಯಾಣ ಮಂದಿರ ನಿರ್ಮಾಣ ಮಾಡಿರುವುದು ಸಕ್ಷಮ ಪ್ರಾಧಿಕಾರಿಗಳ ವರದಿಯಿಂದ ದೃಡಪಟ್ಟಿರುತ್ತದೆ.
ಇದರಿಂದಾಗಿ ಭೂ ಮಾಲೀಕರು ಈ ಕಛೇರಿಯ ಭೂ ಪರಿವರ್ತನೆ ಅದೇಶದ ಷರತ್ತು ಕ್ರಮ ಸಂಖ್ಯೆ 02 ಮತ್ತು 09 ರಲ್ಲಿ ಅನ್ನು ಉಲ್ಲಂಘಿಸಿರುವುದುದರಿAದ ಈ ಕಛೇರಿಯಿಂದ ಹೊರಡಿಸಿದ ಅಧಿಕೃತ ಜ್ಞಾಪನ ಪತ್ರ ಅದೇಶ ಸಂಖ್ಯೆ ಂಐಓSಖ/227/2009-10 ದಿನಾಂಕ;-12-07-2010 ರ ಭೂ ಪರಿವರ್ತನೆ ಅದೇಶವನ್ನು ರದ್ದುಪಡಿಸಿ ಜಿಲ್ಲಾಧಿಕಾರಿಗಳು ಅದೇಶಿದ್ದಾರೆ.
 
                         
                         
                         
                         
                         
                         
                         
                         
                         
                        