ದಾರಿಯಲ್ಲಿ ಹೋಗುತ್ತಿದ್ದ ಗೂಳಿ ಅಪ್ರಚೋದಿತವಾಗಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಪುಟ್ಟ ಬಾಲಕನ ಮೇಲೆ ದಾಳಿ ನಡೆಸಿ, ಆತನನ್ನು ಕ್ಷಣ ಮಾತ್ರದಲ್ಲಿ ಕೊಂಬುಗಳಿಂದ ಎತ್ತಿ ಬಿಸಾಕಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ನೆಹರೂ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಸಹೋದರರು ಸೈಕಲ್ ನಲ್ಲಿ ಆಟವಾಡುತ್ತಿರುವುದನ್ನು ನೋಡುತ್ತಿದ್ದ ಬಾಲಕನ ಮೇಲೆ ಗೂಳಿ ದಾಳಿ ನಡೆಸಿರುವ ಘಟನೆ ನೆಹರು ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗಾಯಾಳು ಬಾಲಕನನ್ನು 6 ವರ್ಷದ ನಜಾನ್ ಆಲಿಖಾನ್ ಎಂದು ತಿಳಿದು ಬಂದಿದೆ.ಮನೆಯ ಸಮೀಪವೇ ಏಕಾಏಕಿ ಗೂಳಿ ದಾಳಿ ಮಾಡಿದೆ.ಬಾಲಕನನ್ನು ಕೊಂಬಿನಿಂದ ಎತ್ತಿ ಬಿಸಾಕಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಗೂಳಿ ದಾಳಿಯಲ್ಲಿ ಬಾಲಕನ ತಲೆ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಸ್ಥಳೀಯರು ತಕ್ಷಣ ನೆರವಿಗೆ ಬಂದಿದ್ದರಿಂದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.