ತೀರ್ಥಹಳ್ಳಿ- ಮಲ್ಲೇಸರ ಸಿಂದೋಡಿ ಬಳಿಯ ಅರಣ್ಯ ಸಮೀಪದಲ್ಲಿ ಚಿರತೆಯ ಮೃತದೇಹ ಪತ್ತೆ !!
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಲ್ಲೇಸರ ಗ್ರಾಮದಲ್ಲಿ ಕಳೆದ ಕೆಲ ತಿಂಗಳಿನಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯ ಮೃತದೇಹ ಪತ್ತೆಯಾಗಿದೆ.
ಹಲವಾರು ತಿಂಗಳಿನಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನು ಸೆರೆಹಿಡಿಯಲು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಬೋನನ್ನು ಸಿದ್ದಪಡಿಸಿ ಇಟ್ಟಿದ್ದರು.
ಆದರೂ ಚಿರತೆಯ ಚಲವಲನದ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಆದರೆ ಇಂದು ಚಿರತೆ ಸೆರೆಹಿಡಿಯಲು ಇಟ್ಟಿದ್ದ ಬೋನಿನ ಸಮೀಪದ ಅರಣ್ಯದಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ.
ಇದನ್ನು ಗಮನಿಸಿದ ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತಿದ್ದು,ಚಿರತೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಲ್ಲೇಸರ- ನೊಣಬೂರು- ಅರಳಸುರಳಿ- ಹಾಗು ಸುತ್ತ ಮುತ್ತಲಿನ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
 
                         
                         
                         
                         
                         
                         
                         
                         
                         
                        