ಭಾರಿ ಬಹುಮತದಿಂದ ಕಿಮ್ಮನೆ ಗೆಲುವು ಸಾಧಿಸಲಿದ್ದಾರೆ – ಆರ್ ಎಂ ಮಂಜುನಾಥ್ ಗೌಡ
ರಿಪ್ಪನ್‌ಪೇಟೆ : ತೀರ್ಥಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ, ಸಹಕಾರಿ ವಿಭಾಗದ ಡಾ.ಆರ್.ಎಂ.ಮಂಜುನಾಥ್ ಗೌಡ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ತೀರ್ಥಹಳ್ಳಿ ಕಾಂಗ್ರೇಸ್ ಪಕ್ಷದಲ್ಲಿ ಯಾವುದೇ ಗೊಂದಲ,ಭಿನ್ನಾಭಿಪ್ರಾಯ ಇಲ್ಲ,ಸಣ್ಣ,ಪುಟ್ಟ ಭಿನ್ನಾಭಿಪ್ರಾಯ ಗಳಿರಬಹುದು ಅದನ್ನು ಬಗೆಹರಿಸಿಕೊಂಡು ಪ್ರೀತಿ,ವಿಶ್ವಾಸದೊಂದಿಗೆ ಒಂದಾಗಿ ನಮ್ಮ ಪಕ್ಷವನ್ನು ಗೆಲ್ಲಿಸಲಿದ್ದೇವೆ.ಟಿಕೆಟ್ ಘೋಷಣೆ ಮುನ್ನ ಇದ್ದ ಭಿನ್ನಾಭಿಪ್ರಾಯ ಸಹಜ ಅದು ಈಗ ಬಗೆಹರಿದಿದೆ ನಾವು ಒಂದಾಗಿ ಕಿಮ್ಮನೆಯವರನ್ನು ಗೆಲ್ಲಿಸಲಿದ್ದೇವೆ ಎಂದರು.
ಡಬ್ಬಲ್ ಇಂಜಿನ್ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದೆ,ದೇಶದಲ್ಲಿಯೆ ಕರ್ನಾಟಕ ನಂ.1ಸ್ಥಾನದಲ್ಲಿದೆ.ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಲೆ ಏರಿಕೆ,ನಿರುದ್ಯೋಗ ಸಮಸ್ಯೆ,ರೈತರ ಸಂಕಷ್ಟ,ಭ್ರಷ್ಟಾಚಾರ, ಹಣದುಬ್ಬರ ವನ್ನು ಈ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಕಂಡಿದ್ದೇವೆ.ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ,ಮಾರುಕಟ್ಟೆ ಬೆಲೆ ದ್ವಿಗುಣಗೊಂಡಿದೆ,ರೈತರ ಗೋಳನ್ನು ಈ ಸರ್ಕಾರ ಕೇಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಕ್ಷೇತ್ರದಲ್ಲಿ ಇನ್ನು ಬಿಜೆಪಿಗೆ ಅಭ್ಯರ್ಥಿ ಘೋಷಣೆ ಆಗಿಲ್ಲ,ನಮಗೆ ಬಿಜೆಪಿ ಪಕ್ಷವೇ ಪ್ರಬಲ ಸ್ಪರ್ಧಿ,ಈ ಸರ್ಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರನಟ ಸುದೀಪ್ ಮೂಲಕ ಮತ ಯಾಚಿಸಲು ಹೊರಟಿದ್ದಾರೆ.
ಈ ಕ್ಷೇತ್ರದ ಶಾಸಕರು ಗೃಹ ಮಂತ್ರಿಯಾಗಿ ಏನು ಅಭಿವೃದ್ಧಿ ಮಾಡಿದ್ದಾರೆ.ಕಳಪೆ ಕಾಮಗಾರಿಗಳು ಹೆಚ್ಚಾಗಿದೆ,ಇವರು ಗೃಹ ಮಂತ್ರಿಯಾದ ಮೇಲೆ ಹಲವು ಬಿಜೆಪಿ ಮುಖಂಡರು ಗೃಹ ಮಂತ್ರಿಗಳಾಗಿದ್ದಾರೆ.ಪೊಲೀಸ್ ಇಲಾಖೆ,ಅರಣ್ಯ ಇಲಾಖೆ,ಕಂದಾಯ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡ ಶಾಸಕರು ತೀರ್ಥಹಳ್ಳಿ ಕ್ಷೇತ್ರದ ಸಂಸ್ಕಾರ,ಸಂಸ್ಕೃತಿ,ಘನತೆಗೆ ಅಗೌರವ ತಂದಿದ್ದಾರೆ ಎಂದರು.
ಮೀಸಲಾತಿ ವಿಚಾರದಲ್ಲಿ ಸರ್ಕಾರ ಒಬ್ಬರನ್ನೊಬ್ಬರು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ,ಇನ್ನೊಬ್ಬರಿಂದ ಕಿತ್ತು ಕೊಡುವ ಮೀಸಲಾತಿ ಒಕ್ಕಲಿಗರಿಗೆ ಅವಶ್ಯಕತೆಯಿಲ್ಲ ಎಂದರು.
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಮುಗ್ದ ವ್ಯಕ್ತಿತ್ವದ ಬೇಳೂರು ಗೋಪಾಲಕೃಷ್ಣ ರವರ ಪರವಾಗಿ ಕೆಲಸ ಮಾಡಿ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸುವ ಮೂಲಕ ಕಾಗೋಡು ತಿಮ್ಮಪ್ಪ ರವರ ಕನಸನ್ನು ಈಡೇರಿಸುತ್ತೇವೆ ಎಂದರು.
ಪತ್ರಿಕಾ ಗೋಷ್ಠಿ ಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ. ಎಂ. ಪರಮೇಶ್. ಆಶೀಫ್. ಡಾಕಪ್ಪ,ರವೀಂದ್ರ ಕೆರೆಹಳ್ಳಿ, ರಮೇಶ್,ಶ್ರೀಧರ್,ಮಂಜುನಾಥ್ ಮಳವಳ್ಳಿ ಹಾಗೂ ಇನ್ನಿತರರು ಇದ್ದರು.