ನಾಳೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಗ್ರಾಮಕ್ಕೆ  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಆಗಮಿಸಿಲಿದ್ಧಾರೆ.
ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ಬಿಡುಗಡೆ ಮಾಡಿರುವ ಪ್ರವಾಸ ಪಟ್ಟಿಯಲ್ಲಿರುವ ಪ್ರಕಾರ,  ಬಸವರಾಜ ಬೊಮ್ಮಾಯಿಯವರು  ನಾಳೆ  ಬೆಳಿಗ್ಗೆ :09.00 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣ ದಿಂದ ವಿಶೇಷ ವಿಮಾನದ ಮೂಲಕ ಹೊರಟು 09.50 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಲಿದ್ಧಾರೆ. . 
ಅಲ್ಲಿ 10.30 ಕ್ಕೆ  ಆದಿ ಬಣಜಿಗರ” ಸಂಘದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ಧಾರೆ. ನಂತರ  ಮಧ್ಯಾಹ್ನ :12.00 ಕ್ಕೆ  “ರಾಜ್ಯ ಪರಿಶಿಷ್ಟ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 
ಇನ್ನೂ 01.00:  ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ  ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. 1.30 ರ ಸುಮಾರಿಗೆ ಬರಲಿರುವ ಸಿಎಂ  ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯ ಮೂಲಕ ತುದೂರು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. 2 .45 ಕ್ಕೆ ತೂದೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. 
ಇನ್ನೂ ಸಂಜೆ 4.30 ರವರೆಗೂ ತೂದೂರಿನಲ್ಲಿ ಉಳಿಯಲಿರುವ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಬೈ ರೋಡ್ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. /.5. 45 ಕ್ಕೆ ವಿಶೇಷವಿಮಾನದ ಮೂಲಕ ಹೊರಟು ಸಂಜೆ 6.30 ಕ್ಕೆ ಹೆಚ್ಎಎಲ್ ವಿಮಾನ ನಿಲ್ಧಾಣವನ್ನು ತಲುಪಲಿದ್ಧಾರೆ. 
ವಿಶೇಷ ಅಂದರೆ, ಬಸವರಾಜ ಬೊಮ್ಮಾಯಿಯವರ ಸಂಬಂಧಿಕರ ಮನೆಯು ತೂದೂರಿನಲ್ಲಿದ್ದು, ಅವರ ಮನೆಗೆ ಬೇಟಿ ನೀಡುವ ಸಲುವಾಗಿ ಬಸವರಾಜ್ ಬೊಮ್ಮಾಯಿ ಬರುತ್ತಿದ್ಧಾರೆ ಎಂಬ ಮಾತುಗಳು ತೀರ್ಥಹಳ್ಳಿ ಕಾರ್ಯಕರ್ತರಲ್ಲಿ ಕೇಳಿಬಂದಿದ್ದು, ಪಕ್ಷದ ಸಭೆಯಲ್ಲಿಯು ಅವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 
		 
                         
                         
                         
                         
                         
                         
                         
                         
                         
                        