ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತಿದ್ದ ಲಾರಿಯನ್ನು ವಶಪಡಿಸಿಕೊಂಡು ಚಾಲಕ ಮತ್ತು ಮಾಲೀಕರ ವಿರುದ್ಧ ಎಫ್ ಐ ಆರ್ ದಾಖಲಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.
ಹೊಸನಗರದ ಮುಡುಬ ಸೇತುವೆಯಿಂದ ಮರಳನ್ನು ಎತ್ತಿ ಕೆಎ-15 -7188 ಕ್ರಮ ಸಂಖ್ಯೆಯ ಟ್ರಿಪ್ಪರ್ ಲಾರಿಯಲ್ಲಿ 80 ಅಡಿ ಮರಳು ತುಂಬಿಸಿಕೊಂಡು ಬರುವಾಗ ಸಾಗರದ ಬಿಹೆಚ್ ರಸ್ತೆಯಲ್ಲಿರುವ ಆಚಾರ್ ಸರ್ಕಲ್ ಬಳಿ ದಾರಿಯನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ.
ತಪಾಸಣೆ ವೇಳೆ ಮರಳು ಸಾಗಾಣಿಕೆಗೆ ಬೇಕಾದ ಪರವಾನಗಿ ಇಲ್ಲದ ಕಾರಣ ಚಾಲಕ ಇಬ್ರಾಹಿಂ ಮತ್ತು ಟ್ರಿಪ್ಪರ್ ಲಾರಿಯ ಮಾಲೀಕ ಶರತ್ ವಿರುದ್ಧ ದೂರು ದಾಖಲಾಗಿದೆ.
ಭೀಮನ ಕೋಣೆ ರಸ್ತೆಯಿಂದ ಬರುವಾಗ ಆಚಾರ್ ಸರ್ಕಲ್ ನಲ್ಲಿ ಬರುವಾಗ ಸಾಗರ ಉಪವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು ಆರೋಪಿಗಳ ಮೇಲೆ ದೂರು ದಾಖಲಾಗಿದೆ.