ಅಕ್ರಮ ಮರಳು ಸಾಗಾಣಿಕೆ – 3 ಟಿಪ್ಪರ್ ಲಾರಿ ವಶ|


ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ವಿಚಾರದಲ್ಲಿ ಮೂರು ಸುಮೋಟೋ ಪ್ರಕರಣ ದಾಖಲಾಗಿವೆ.

ಮೂರು ಅಕ್ರಮ ಮರಳು ಪ್ರಕರಣದಲ್ಲಿ ಒಂದೇ ರೀತಿಯ ಪವಾಡ ನಡೆದಿದ್ದು ಜಗತ್ತೆ ಬೆಚ್ಚಿ ಬೀಳುವಂತಾಗಿದೆ..!!!! ಆ ಪವಾಡ ಏನೆಂದರೇ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಲಾರಿ ಚಾಲಕರು ಒಂದೇ ಶೈಲಿಯಲ್ಲಿ ಪೊಲೀಸರಿದ್ದ ಸ್ಥಳದಿಂದ ಅಣತಿ ದೂರದಲ್ಲಿ ಲಾರಿ ನಿಲ್ಲಿಸಿ ಪರಾರಿಯಾಗಿದ್ದು ಕನ್ನಡದ ಎಸ್ಪಿ ಭಾರ್ಗವಿ ಚಿತ್ರದ ಹಾಡೊಂದನ್ನು ನೆನಪಿಸುವಂತಿದೆ..



ಘಟನೆ 1:

ಸಾಗರ ಗ್ರಾಮಾಂತರ ಯಲಗಳಲೆಯ ಬಿಕೆ ರಸ್ತೆಯಲ್ಲಿ ಪೊಲೀಸ್ ತಪಾಸಣೆ ನಡೆಯುವಾಗ ಟ್ರಿಪ್ಪರ್ ಲಾರಿಯ ಚಾಲಕ ದೂರದಲ್ಲಿ ನಿಲ್ಲಿಸಿ ಪರಾರಿಯಾಗಿದ್ದು ಲಾರಿ ಸಮೇತ ಸೀಜ್ ಮಾಡಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಸಾಗಾಣಿಕೆ ಮಾಡುತ್ತಿರುವ ಲಾರಿಯಾಗಿದ್ದು ವಶಕ್ಕೆ ಪಡೆಯಲಾಗಿದೆ.

ಘಟನೆ 2 :

ಅದರಂತೆ ಮತ್ತೊಂದು ಲಾರಿ ಅಮಟೇಕೊಪ್ಪದಿಂದ ಸಾಗರದ ಕಡೆ ಹೋಗುವ ಯಲಗಳಲೆ ರಸ್ತೆಯ ಬಿಕೆ ರಸ್ತೆಯಲ್ಲೇ ಮತ್ತೊಂದು ಲಾರಿ ಚಾಲಕನು ಪೊಲೀಸರನ್ನ‌ ಕಂಡು ಪರಾರಿಯಾಗಿದ್ದಾನೆ. ತಪಾಸಣೆ ನಡೆಸಿದಾಗ 200 ಅಡಿ ಮರಳನ್ನ ಲಾರಿಯಲ್ಲಿದ್ದುದ್ದರಿಂದ ಲಾರಿ ಮತ್ತು ಮರಳನ್ನು ವಶ ಪಡಿಸಿಕೊಳ್ಳಲಾಗಿದೆ.



ಘಟನೆ 3 :

ಆವಿನಹಳ್ಳಿ ಇಕ್ಕೇರಿಯಲ್ಲಿ ಪೊಲೀಸ್ ದಾಳಿ ನಡೆಸಿದ್ದು ದಾಳಿಯಲ್ಲಿ ಮತ್ತೆ ಚಾಲಕ ಪರಾರಿಯಾಗಿದ್ದಾನೆ 200 ಅಡಿ ಮರಳು ತುಂಬಿದ ಲಾರಿ ಸಮೇತ ವಶಕ್ಕೆ ಪಡಯಲಾಗಿದೆ. ಮೂರು ದಾಳಿಯಲ್ಲಿಯೂ ಚಾಲಕ ಪರಾರಿಯಾಗಿರುವುದು ಮೂರೂ ಘಟನೆಯಲ್ಲಿ ವಿಶೇಷವಾಗಿದೆ.



Leave a Reply

Your email address will not be published. Required fields are marked *