w
Headlines
Home » ಆವಿನಹಳ್ಳಿ ಸಮೀಪದಲ್ಲಿ ರಸ್ತೆ ಅಪಘಾತ – ಗಂಡು ಕಾಡುಕೋಣ ಸಾವು|accident

ಆವಿನಹಳ್ಳಿ ಸಮೀಪದಲ್ಲಿ ರಸ್ತೆ ಅಪಘಾತ – ಗಂಡು ಕಾಡುಕೋಣ ಸಾವು|accident


ರಸ್ತೆ ಅಪಘಾತದಲ್ಲಿ ಕಾಡುಕೋಣ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಹೊರವಲಯದಲ್ಲಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.



ಸಾಗರ ಮತ್ತು ಹೊಸನಗರದ ಸುತ್ತಮುತ್ತ ಕಾಡು ಕೋಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕಾಡುಕೋಣಗಳ ವಲಯವಾಗಿದ್ದರಿಂದ ವಾಹನಗಳಿಗೆ ಸಿಲುಕಿ ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿರುವ ಘಟನೆ ಹೆಚ್ಚುತಿದೆ.

ಸಾಗರ ಮತ್ತು ಸಿಗಂದೂರು ರಸ್ತೆಯಲ್ಲಿ ಸುಮಾರು 5 ವರ್ಷದ ಗಂಡು ಕಾಡುಕೋಣ ರಕ್ತ ಕಾರಿಕೊಂಡು ರಸ್ತೆಯ ಬಲಭಾಗಕ್ಕೆ ಬಿದ್ದಿದೆ. ಲಾರಿ ಅಥವಾ ದೊಡ್ಡ ವಾಹನಗಳೇ ಈ ಕಾಡು ಪ್ರಾಣಿಯ ಸಾವಿಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.



ಆವಿನಹಳ್ಳಿ ಗ್ರಾಮಪಂಚಾಯಿತಿ ಕಲ್ಮನೆ ಗ್ರಾಮದಲ್ಲಿ ಇಂದು ಬೆಳಗ್ಗಿನ ಜಾವದಲ್ಲಿ ವಾಹನವೊಂದು ಡಿಕ್ಕಿ ಹೊಡೆದುಕೊಂಡು ಹೋಗಿದ್ದು ಕಾಡುಕೋಣ ಸಾಮಾನ್ಯವಾಗಿ ಸಣ್ಣಪುಟ್ಟ ವಾಹನಗಳಿಗೆ ಸಾವನ್ನಪ್ಪುವುದು ಬಹಳ ಕಡಿಮೆ ಎನ್ನಬಹುದು.ಆದ್ದರಿಂದ ಬೃಹತ್ ವಾಹನ ಡಿಕ್ಕಿಯಾಗಿ ಕಾಡು ಕೋಣ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯವರು ಧಾವಿಸಿದ್ದಾರೆ. 



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.