ಕಡುಬಡವರ ಮಕ್ಕಳು ಉನ್ನತ ಅಧಿಕಾರಿಗಳಾಗಿ ದೇಶವನ್ನು ಮುನ್ನಡೆಸಬೇಕು ಆ ನಿಟ್ಟಿನಲ್ಲಿ ನಮ್ಮ ಡಬಲ್ ಇಂಜಿನ್ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ ಎಂದು ಕರ್ನಾಟಕ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನೂತನ ಪೊಲೀಸ್ ಠಾಣೆ ಹಾಗೂ ವಸತಿ ಗೃಹಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಪೊಲೀಸ್ ನೂತನ ಕಟ್ಟಡವು ಒಂದು ಕೋಟಿ 80 ಲಕ್ಷ ಹಾಗೂ 12 ಪೊಲೀಸ್ ವಸತಿಗೃಹಗಳನ್ನು 4. ಕೋಟಿ 4 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಇನ್ನು ಏಳು ತಿಂಗಳಲ್ಲಿ ಹೊಸ ಕಟ್ಟಡದ ಕಾಮಗಾರಿ ಮುಗಿಯಲಿದೆ.ರಾಷ್ಟ್ರೀಯ ರಕ್ಷ ವಿಶ್ವವಿದ್ಯಾಲಯವನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸಲಾಗುತ್ತದೆ ಇದರಿಂದ ಪೊಲೀಸ್ ಇಲಾಖೆಗೆ ಸೇರಲು ಬೇಕಾದ ಪೂರ್ಣ ತರಬೇತಿಯನ್ನ ನೀಡಲಾಗುತ್ತದೆ ಎಂದು ತಿಳಿಸಿದರು.
ಪಿಎಸ್ ಐ ಹಗರಣ ನನ್ನ ಗಮನಕ್ಕೆ ಬರದ ಹಾಗೇ ಅಧಿಕಾರಿಗಳು ನಡೆಸಿ ಬಿಟ್ಟಿದ್ದರು,ನಾನು ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡ 15 ದಿನಗಳೊಳಗೆ ಪಿಎಸ್ ಐ ಪರೀಕ್ಷೆ ನಡೆಸಿಬಿಟ್ಟಿದ್ದರು.
ಒಬ್ಬ ಎಡಿಜಿಪಿ ಹುದ್ದೆಯಲ್ಲಿದ್ದ ಉನ್ನತ ಅಧಿಕಾರಿ ಉತ್ತರಪತ್ರಿಕೆ ತಿದ್ದಿಸುತ್ತಾನೆ ಎಂದರೇ ನಾವೇನು ಹೇಳಬೇಕು ಹೇಳಿ…??ಈ ದೇಶದಲ್ಲಿ ಐಎ ಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ದೇವರ ಸಮಾನವಾಗಿ ನೋಡುತ್ತಾರೆ….ಉನ್ನತ ಅಧಿಕಾರದಲ್ಲಿದ್ದವರೇ ಭ್ರಷ್ಟಾಚಾರಕ್ಕೆ ಇಳಿದರೆ ದೇಶ ಕಥೆಯೇನು ಎಂದು ಆತಂಕ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಪೊಲೀಸ್ ಇಲಾಖೆಯನ್ನ ಕಡೆಗಣಿಸಲಾಗಿತ್ತು .ನಮ್ಮ ಸರ್ಕಾರದ ಅವಧಿಯಲ್ಲಿ ಆದ್ಯತೆ ನೀಡಿ 107 ಪೊಲೀಸ್ ಸ್ಟೇಷನ್ ಗಳನ್ನು ಕಟ್ಟಲಾಗುತ್ತಿದೆ, ನನ್ನ ಅವಧಿಯಲ್ಲಿ ಹಿಜಾಬ್ ,ಕುಕ್ಕರ್ ಬಾಂಬ್, ಸೇರಿದಂತೆ ಹಲವು ಪ್ರಕರಣಗಳು ಆದರೂ ಎಲ್ಲವನ್ನು ಸರಿಯಾಗಿ ನಿಭಾಯಿಸಲಾಗಿದೆ ಎಂದು ತಿಳಿಸಿದರು
ಶಾಸಕ ಹರತಾಳು ಹಾಲಪ್ಪ ಮಾತನಾಡಿ ದೇಶದ ಗಡಿಯನ್ನು ಸೈನಿಕ ಹೇಗೆ ಕಾಯುತ್ತಾನೆಯೋ ಹಾಗೇಯೆ ದೇಶದ ಒಳಗಿನ ನಮ್ಮೆಲ್ಲಾರನ್ನು ಪೊಲೀಸರು ಪ್ರತಿದಿನ ಕಾಯುತ್ತಾರೆ ಅವರಿಗೆ ಸಲ್ಲಬೇಕಾದ ಗೌರವ ಸಮರ್ಪಕವಾಗಿ ಸಲ್ಲದೇ ಇರುವುದು ದುರಂತ.ಸಾಗರ ಪಟ್ಟಣದಲ್ಲಿ ನಡೆದ ಕೆರೆ ಹಬ್ಬ ಹಾಗೂ ಮಾರಿಜಾತ್ರೆ ಯಾವುದೇ ಗೊಂದಲವಿಲ್ಲದೇ ನಡೆಯುವಲ್ಲಿ ಪೊಲೀಸರ ಪಾತ್ರ ಪ್ರಮುಖ ಹಾಗೂ ಪ್ರಶಂಸಾರ್ಹನೀಯ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಗರ ಎಎಸ್ಪಿ ರೋಹನ್ ಜಗದೀಶ್,ಆನಂದಪುರ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಉಪಸ್ಥಿತರಿದ್ದರು.