ರಿಪ್ಪನ್ಪೇಟೆ : ಇಲ್ಲಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಚಿನ್ನದ ಕೆಲಸ ಮಾಡುವ ವ್ಯಕ್ತಿಯೊಬ್ಬ ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗರ್ತಿಕೆರೆ ಗ್ರಾಮದ ಗುರುಮೂರ್ತಿ ಬಿ ಟಿ (43) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.
ಗರ್ತಿಕೆರೆ ಮೂಲದ ಗುರುಮೂರ್ತಿ ತನ್ನ ಕುಟುಂಬದೊಂದಿಗೆ ಬೆಳಗಾವಿಯಲ್ಲಿ ಚಿನ್ನದ ಕೆಲಸ ಮಾಡಿಕೊಂಡು ವಾಸವಿದ್ದು,ಕಳೆದ 04 ದಿನದ ಹಿಂದೆ ಗುರುಮೂರ್ತಿ ಮನೆ ಬಿಟ್ಟು ಗರ್ತಿಕೆರೆಗೆ ಬಂದಿದ್ದನು ಈ ಬಗ್ಗೆ ಬೆಳಗಾವಿ ಶಹಾಪೂರ ಪೊಲೀಸ್ ಠಾಣೆಯಲ್ಲಿ ಅವರ ಪತ್ನಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದರು.
ಗುರುಮೂರ್ತಿ ಗರ್ತಿಕೆರೆ ಬಳಿಯ ಬಾಳೆಸರದಲ್ಲಿರುವ ತಂದೆಯ ಜಮೀನಿನ ಹತ್ತಿರವಿರುವ ಮನೆಯಲ್ಲಿ ಉಳಿದುಕೊಳ್ಳುತ್ತೇನೆ ಎಂದು ಹೇಳಿ ಉಳಿದುಕೊಂಡಿದ್ದು, ನಂತರ ಬೆಳಿಗೆ, 07.00 ಗಂಟೆಗೆ ಎದ್ದು ಹೊರಗೆ ಶೌಚಾಲಯಕ್ಕೆ ಹೋಗುತ್ತೇನೆ ಎಂದು ಹೇಳಿ ಜಮೀನು ಕಡೆ ಹೋದವನು ಮದ್ಯದೊಂದಿಗೆ ಸೈನೆಡ್ ಮತ್ತು ಕೆಲ ರಾಸಾಯನಿಕ ವಿಷ ಪದಾರ್ಥಗಳನ್ನು ಸೇವಿಸಿ ಮೃತಪಟ್ಟಿದ್ದಾನೆ.
ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.